ಮಾಜಿ ಕಂಬಳ ಓಟಗಾರ ಜಯ ಶೆಟ್ಟಿ ಕಕ್ಯಪದವು ಇನ್ನಿಲ್ಲ
ದಶಕದ ಕಾಲ ನಂಬರ್ ಒನ್ ಓಟಗಾರನಾಗಿ ಪ್ರಖ್ಯಾತನಾಗಿದ್ದ ಜಯ ಶೆಟ್ಟಿ
Team Udayavani, Jun 27, 2021, 11:56 AM IST
ಪುಂಜಾಲಕಟ್ಟೆ: ಮಾಜಿ ಕಂಬಳ ಓಟಗಾರ, ಧಾರ್ಮಿಕ, ಸಹಕಾರಿ ಮುಂದಾಳು ಉಳಿಗ್ರಾಮದ ಕಕ್ಯಪದವು, ಕಿಂಜಾಲು ನಿವಾಸಿ ಜಯ ಶೆಟ್ಟಿ ಕಿಂಜಾಲು(65) ಅವರು ಅಸೌಖ್ಯದಿಂದ ಜೂ.27ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಪ್ರಗತಿಪರ ಕೃಷಿಕರಾಗಿದ್ದ ಜಯ ಶೆಟ್ಟಿ ಅವರು ಉದಯವಾಣಿಯಿಂದ ಕುಗ್ರಾಮವೆಂದು ಗುರುತಿಸಿದ್ದ ಉಳಿ ಗ್ರಾಮದಲ್ಲಿ ಸೌಲಭ್ಯಗಳ ಕೊರತೆಗಳ ಮಧ್ಯೆ ಉತ್ತಮ ಕೃಷಿ ಸಾಧನೆ ಮಾಡಿದ್ದರು. ಕಂಬಳಕ್ಷೇತ್ರದಲ್ಲಿ ಓಟಗಾರರರಾಗಿ ಪ್ರಖ್ಯಾತಿ ಪಡೆದಿದ್ದ ಅವರು ಕಂಬಳ ಕ್ಷೇತ್ರದ ಅದ್ವಿತೀಯ ಸಾಧನೆಗಾಗಿ ಹಲವಾರು ಪ್ರಶಸ್ತಿ, ಸಮ್ಮಾನ ಪಡೆದಿದ್ದರು.
ಇದನ್ನೂ ಓದಿ: ಜಮ್ಮು ವಾಯು ಪಡೆ ನಿಲ್ದಾಣದ ಮೇಲೆ ಡ್ರೋನ್ ಬಾಂಬ್ ದಾಳಿ ಶಂಕೆ
ಸುಮಾರು 70 ರ ದಶಕದ ಆರಂಭದಲ್ಲಿ ಕಕ್ಯಪದವು ಡೀಕಯ್ಯ ಪೂಜಾರಿ, ಪುಣ್ಕೆದಡಿ ಅಣ್ಣು ಭಂಡಾರಿ ಅವರ ಕೋಣಗಳನ್ನು ಓಡಿಸುತ್ತಿದ್ದ ಅವರು ಬಳಿಕ ಕಾಡಬೆಟ್ಟು ದಿ.ನಾರಾಯಣ ರೈಅವರ ಕೋಣಗಳನ್ನು ಹಗ್ಗ ಹಿರಿಯ ವಿಭಾಗದಲ್ಲಿ ಓಡಿಸುತ್ತಿದ್ದು, ಸುಮಾರು ಒಂದೂವರೆ ದಶಕಗಳ ಕಾಲ ನಿರಂತರ ಪದಕ ಪಡೆದು ನಂಬರ್ ಒನ್ ಸ್ಥಾನದಲ್ಲಿ ವಿರಾಜಿಸಿದ್ದರು. ಆದರೆ ಯಾವುದೇ ಸಂಭಾವನೆ ಪಡೆಯದೆ ಕಂಬಳದ ಸೇವೆ ಸಲ್ಲಿಸಿದ ಹಿರಿಮೆ ಅವರದ್ದಾಗಿತ್ತು.ಸ್ವಾಮಿ ನಿಷ್ಠ ಓಟಗಾರ ಎಂಬ ಗೌರವ ಪಡೆದಿದ್ದರು. ಯುವ ಓಟಗಾರರಿಗೆ ಮಾರ್ಗದರ್ಶಕರಾಗಿದ್ದರು.
ಅವರು 5ವರ್ಷ ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿದ್ದರು. ಕಕ್ಯಪದವು ಶ್ರೀ ಪಂಚದುರ್ಗಾ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಸದಸ್ಯರಾಗಿ, ಉಳಿ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ, ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ ಬ್ರಹ್ಮ ಬದರ್ಕಳ ಗರಡಿ ಜೀರ್ಣೋದ್ಧಾರ ಸಮಿತಿ ಮತ್ತು ಮೈರ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ನಡೆಯುತ್ತಿರುವ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ ಸಮಿತಿಯ ಗೌರವ ಸಲಹೆಗಾರರಾಗಿದ್ದರು. ಸ್ಥಳೀಯವಾಗಿ ಕೊಡುಗೈ ದಾನಿಯಾಗಿದ್ದರು.
ಅವರ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದು, ಕಂಬಳ ಕ್ಷೇತ್ರ ಕಂಬನಿ ಮಿಡಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.