Fraud Case ಪಡಂಗಡಿ: ಸಾಲ ಕೊಡುವುದಾಗಿ ನಂಬಿಸಿ ರೂ.8 ಲಕ್ಷ ವಂಚನೆ
Team Udayavani, Aug 23, 2023, 10:53 PM IST
ಬೆಳ್ತಂಗಡಿ: ಅಪರಿಚಿತ ವ್ಯಕ್ತಿಯೋರ್ವರು ಲೋನ್ ಕೊಡುವುದಾಗಿ ನಂಬಿಸಿ ದಾಖಲೆ ಪಡೆದುಕೊಂಡು 8 ಲಕ್ಷ ರೂ. ವಂಚಿಸಿದ ಘಟನೆ ಪಡಂಗಡಿಯಲ್ಲಿ ನಡೆದಿದೆ.
ಪಡಂಗಡಿ ನಿವಾಸಿ ನೀನಾ ರೋಡ್ರೀಗಸ್ (35) ವಂಚನೆಗೆ ಒಳಗಾದವರು. ಅವರಿಗೆ ಆ. 1ರಂದು ಅಪರಿಚಿತ ವ್ಯಕ್ತಿಯೋರ್ವರು ರಿಲಾಯನ್ಸ್ ಫೈನಾನ್ಸ್ ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ ಶೇ. 5 ಬಡ್ಡಿ ದರದಲ್ಲಿ ಲೋನ್ ಕೊಡುವುದಾಗಿಯೂ, ಲೋನ್ ಬೇಕಾದಲ್ಲಿ ಬ್ಯಾಂಕ್ ಹಾಗೂ ಇತರ ದಾಖಲಾತಿಗಳನ್ನು ನೀಡುವಂತೆ ತಿಳಿಸಿದ್ದಾರೆ. ಇದನ್ನು ನಂಬಿದ ಲೀನಾ ರೊಡ್ರಿಗಸ್ ಕರೆ ಬಂದ ನಂಬರ್‌ಗೆ ಬ್ಯಾಂಕ್ ದಾಖಲೆ ಸೇರಿದಂತೆ ಇತರ ದಾಖಲೆಗಳನ್ನು ಕಳುಹಿಸಿದ್ದು, ಬಳಿಕ ಅಪರಿಚಿತ ವ್ಯಕ್ತಿಯು ಇವರ ಖಾತೆಗಳಿಂದ ಒಟ್ಟು 8,40,275 ರೂ. ಹಣವನ್ನು ಬೇರೆ ಬೇರೆ ಖಾತೆಗಳಿಗೆ ಆನ್ ಲೈನ್ ಮುಖಾಂತರ ವರ್ಗಾಯಿಸಿಕೊಂಡು ವಂಚಿಸಿರುತ್ತಾನೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.