ಠೇವಣಿ ಹಣ ವಾಪಸು ನೀಡದೆ ವಂಚನೆ: ದೂರು ದಾಖಲು
Team Udayavani, Aug 5, 2023, 11:11 PM IST
ಪುತ್ತೂರು: ನಗರದ ಖಾಸಗಿ ಕಟ್ಟಡವೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತ್ ಒನ್ ಸೌಹಾರ್ದ ಸಹಕಾರಿ ಸಂಘ ಮತ್ತು ಈ ಸಂಸ್ಥೆಯ ಅಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಟಾರ್ಗೆಟ್ 2 ಸಕ್ಸೆಸ್ ಎಂಬ ಟ್ರೇಡಿಂಗ್ ವ್ಯವಹಾರ ಸಂಸ್ಥೆಗಳು ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸಿ ಮರಳಿ ನೀಡದೆ ವಂಚಿಸಿರುವ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪುತ್ತೂರು ಒಳಮೊಗ್ರು ಗ್ರಾಮದ ನಿವಾಸಿ ನಾರಾಯಣ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. 2022 ಮಾ. 11ರಿಂದ ದೂರುದಾರರು ಹಾಗೂ ಸಾರ್ವಜನಿಕರಿಂದ ಹಣವನ್ನು ಠೇವಣಿಯಾಗಿ ಸಂಗ್ರಹಿಸಿ ಹಾಗೂ ತನ್ನ ಸಿಬಂದಿಗಳಿಗೆ ಕೂಡ ಗುರಿಯನ್ನು ನಿಗದಿಪಡಿಸಿ ಒತ್ತಡ ಹೇರಿ ಠೇವಣಿಗಳನ್ನು ಸಂಗ್ರಹಿಸಿ ಸಾರ್ವಜನಿಕರಿಂದ ಹಣ ಪಡೆದು ಠೇವಣಿ ಅವಧಿ ಮುಗಿದರೂ ಠೇವಣಿ ಸಂಗ್ರಹಿಸಿದ ಹಣವನ್ನು ಪಿರ್ಯಾದುದಾರರಿಗೆ ಹಾಗೂ ಸಾರ್ವಜನಿಕರಿಗೆ ನಿಗದಿತ ಅವಧಿಯಲ್ಲಿ ವಾಪಸು ನೀಡದೆ ನಂಬಿಕೆ ದ್ರೋಹ ಹಾಗೂ ವಂಚನೆ ಎಸಗಿದ್ದಾಗಿದೆ.
ಸಂಸ್ಥೆಯ ಅಧ್ಯಕ್ಷರಾದ ಗಿರೀಶ್ ರೈ, ಉಪಾಧ್ಯಕ್ಷ ವಿವಿಟ್ಟಾ ಟೆಲ್ಮಾ ಪಿಂಟೋ, ನಿರ್ದೇಶಕ ಸುದೇಶ್ ರೈ ಅಲೆಕ್ಕಾಡಿ, ಮ್ಯಾನೇಜರ್ ಸಂದೀಪ್ ಹಾಗೂ ಇತರ ನಿರ್ದೇಶಕರ ಮೇಲೆ ದೂರು ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.