ಭಕ್ತಿ ಪಥದಲ್ಲಿ ಮುನ್ನಡೆದಾಗ ವ್ಯಸನಮುಕ್ತಿ: ಡಾ| ಹೆಗ್ಗಡೆ

ಸಮಾಜದಲ್ಲಿ ನೆಮ್ಮದಿಯಿಂದ ಬಾಳಿ ಬದುಕಬಹುದು

Team Udayavani, May 15, 2024, 10:17 AM IST

ಭಕ್ತಿ ಪಥದಲ್ಲಿ ಮುನ್ನಡೆದಾಗ ವ್ಯಸನಮುಕ್ತಿ: ಡಾ| ಹೆಗ್ಗಡೆ

ಬೆಳ್ತಂಗಡಿ: ಯಾವುದೇ ಅಭ್ಯಾಸಗಳು ಆಕಸ್ಮಿಕವಾಗಿ, ಅನಾವಶ್ಯಕವಾಗಿ ಪ್ರಾರಂಭವಾಗುತ್ತದೆ. ಬದುಕು ಹಾಳು
ಮಾಡಿಕೊಳ್ಳಬೇಕೆಂಬ ಭಾವನೆಯಿಂದ ಯಾರು ದುಶ್ಚಟಗಳನ್ನು ಮಾಡುವುದಿಲ್ಲ ಬದಲಿಗೆ ಸುಖ, ಸಂತೋಷ, ಧೈರ್ಯ, ಕೆಲಸ ಮುಂತಾದ ವಿಚಾರಗಳನ್ನು ಸಾಧಿಸಬಹುದೆಂಬ ಭ್ರಮೆಯಿಂದ ಚಟಕ್ಕೆ ಬಲಿ ಬೀಳುತ್ತಾರೆ. ಆಧ್ಯಾತ್ಮದ ಒಲವು ಭಕ್ತಿ ಪಥದಲ್ಲಿ ಮುನ್ನಡೆದಾಗ ವ್ಯಸನಗಳು ಬಾಧಿಸುವುದಿಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯಪಟ್ಟರು.

ಉಜಿರೆ ಲಾೖಲ ಗ್ರಾಮದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ
ನಡೆಯುತ್ತಿರುವ 223ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿದರು. ಧಾರ್ಮಿಕವಾಗಿ ಬದುಕುವವರು ಸ್ವಾಭಾವಿಕವಾಗಿ ಸಾತ್ವಿಕರಾಗುತ್ತಾರೆ. ಆಧ್ಯಾತ್ಮಿಕ ಚಿಂತನೆಗಳಿಂದ ಅತ್ಯುತ್ತಮ ವ್ಯಕ್ತಿತ್ವವನ್ನು ಸಾಧಿಸುತ್ತಾರೆ. ಆದುದರಿಂದ ಭಕ್ತಿ ಪಥದಲ್ಲಿ ಮುನ್ನಡೆದು ದುಶ್ಚಟಗಳನ್ನು ತ್ಯಜಿಸಿ ಸಂಸಾರದೊಂದಿಗೆ ಸಮಾಜದಲ್ಲಿ ನೆಮ್ಮದಿಯಿಂದ ಬಾಳಿ ಬದುಕಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಡಾ| ಎಲ್‌.
ಎಚ್‌.ಮಂಜುನಾಥ್‌ ಮಾತನಾಡಿ, ಅಹಂಕಾರವೇ ವ್ಯಸನಕ್ಕೆ ಪ್ರಮುಖ ಕಾರಣ. ಈ ವ್ಯಸನವು ಕುಟುಂಬ, ತನ್ನೊಳಗಿನ ವಿಶ್ವಾಸ, ಭರವಸೆ, ಬದುಕಲು ನಿರ್ನಾಮ ಮಾಡುವುದರ ಜತೆಗೆ ನಮ್ಮ ಅಸ್ತಿತ್ವವನ್ನೇ ಇಲ್ಲದಾಗಿಸುತ್ತದೆ. ಇದನ್ನು ಅರ್ಥ ಮಾಡಿಕೊಂಡು ದೇವರಲ್ಲಿ ಅನುಸಂಧಾನ, ಕುಟುಂಬದಲ್ಲಿ ಒಡನಾಟ, ಮಕ್ಕಳಲ್ಲಿ ಪ್ರೀತಿ, ಗುರುಹಿರಿಯರಿಗೆ ಗೌರವ ಹೊಂದುತ್ತಾ
ಬದಲಾಗಬೇಕೆಂದರು.

ಈ ವಿಶೇಷ 8 ದಿನದ ಶಿಬಿರದಲ್ಲಿ ರಾಜ್ಯದ ವಿವಿಧೆಡೆಯಿಂದ 76 ಶಿಬಿರಾರ್ಥಿಗಳು ಭಾಗವಹಿಸಿದರು. ಕೆ.ಎಸ್‌.ಹೆಗ್ಡೆ ಆಸ್ಪತ್ರೆಯ
ಡಾ| ಶ್ರೀನಿವಾಸ್‌ ಭಟ್‌ ನೇತೃತ್ವದಲ್ಲಿ ಮನೋವೈದ್ಯಕೀಯ ಚಿಕಿತ್ಸೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ
ಚಿಕಿತ್ಸೆಯ ಮೂಲಕ ಯೋಗ ಮತ್ತು ದೈಹಿಕ ಚಟುವಟಿಕೆಗಳು, ಸಲಹಾ ಕಾರ್ಯಕ್ರಮ, ಸಾಂಸ್ಕೃತಿಕ, ಉಪಯುಕ್ತ ವೀಡಿಯೋ
ಪ್ರದರ್ಶನ, ವಿಷಯಾಧಾರಿತ ಪ್ರವಚನ, ನವಜೀವನ ಸಮಿತಿ ಸದಸ್ಯರ ಅನಿಸಿಕೆ, ಆತ್ಮಾವಲೋಕನ, ಕುಟುಂಬದ ದಿನ ಮುಂತಾದ ಕಾರ್ಯಕ್ರಮಗಳ ಮೂಲಕ ಮನಪರಿವರ್ತನೆಗೆ ಆದ್ಯತೆ ನೀಡಲಾಗಿದೆ.

ಕಾರ್ಯಕ್ರಮದಲ್ಲಿ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್‌ ವಿ.ಪಾçಸ್‌, ಯೋಜನಾಧಿಕಾರಿ ಮಾಧವಗೌಡ, ಶಿಬಿರಾಧಿಕಾರಿಗಳಾದ ದೇವಿಪ್ರಸಾದ್‌ ಸುವರ್ಣ, ಚಿತ್ತರಂಜನ್‌, ಆರೋಗ್ಯ ಸಹಾಯಕರಾದ ನೇತ್ರಾವತಿ, ರಂಜನಾ ಸಣ್ಣಕ್ಕಿರವರು ಸಹಕರಿಸಿರುತ್ತಾರೆ. ಮುಂದಿನ ವಿಶೇಷ ಶಿಬಿರವು ಮೇ 20ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟನೆ ತಿಳಿಸಿದೆ.

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

05856

Sullia: ಮರ್ಕಂಜ; ಕಾಣೆಯಾಗಿದ್ದ ಮಹಿಳೆಯ ಮೃತದೇಹ ಬಾವಿಯಲ್ಲಿ ಪತ್ತೆ

Sullia: ಅಂಗಡಿ, ಹೊಟೇಲ್‌ನಿಂದ ನಗದು ಕಳವು

Sullia: ಅಂಗಡಿ, ಹೊಟೇಲ್‌ನಿಂದ ನಗದು ಕಳವು

Puttur: ಬ್ಯಾಂಕ್‌ ಸಿಬಂದಿ ವಿರುದ್ಧ ಮಾನಭಂಗಕ್ಕೆ ಯತ್ನದ ಪ್ರತಿದೂರು; ಎಸ್‌ಪಿ ಭೇಟಿ

Puttur: ಬ್ಯಾಂಕ್‌ ಸಿಬಂದಿ ವಿರುದ್ಧ ಮಾನಭಂಗಕ್ಕೆ ಯತ್ನದ ಪ್ರತಿದೂರು; ಎಸ್‌ಪಿ ಭೇಟಿ

Puttur: ಮಹಿಳೆಯ ಮೇಲೆ ಮಾನಭಂಗಕ್ಕೆ ಯತ್ನ: ದೂರು ದಾಖಲು

Puttur: ಮಹಿಳೆಯ ಮೇಲೆ ಮಾನಭಂಗಕ್ಕೆ ಯತ್ನ: ದೂರು ದಾಖಲು

Aranthodu: ಮಿತ್ತಡ್ಕದ ಮಹಿಳೆ ನಾಪತ್ತೆ; ಬಾವಿಯಲ್ಲಿ ಹುಡುಕಾಟ

Aranthodu: ಮಿತ್ತಡ್ಕದ ಮಹಿಳೆ ನಾಪತ್ತೆ; ಬಾವಿಯಲ್ಲಿ ಹುಡುಕಾಟ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.