ಸಾಯುತ್ತಿವೆ ಫಸಲು ಭರಿತ ತೆಂಗಿನ ಮರಗಳು; ಕರಟುವ ಸಿರಿಗಳು; ನಿಯಂತ್ರಣವೇ ಕೃಷಿಕರಿಗೆ ಸವಾಲು
Team Udayavani, Feb 1, 2024, 7:30 AM IST
ಸುಳ್ಯ: ಸಮೃದ್ಧವಾಗಿ ಬೆಳೆದು ಫಸಲು ನೀಡುವ ತೆಂಗಿನ ಮರಗಳು ಒಂದೊಂದಾಗಿ ಸಾಯುತ್ತಿರುವ ಘಟನೆ ಕಡಬ, ಸುಳ್ಯ ತಾಲೂಕುಗಳಲ್ಲಿ ಬೆಳಕಿಗೆ ಬಂದಿದೆ. ತೆಂಗಿನ ಸಿರಿ (ಚಿಗುರು/ಗರಿ) ಕರಟಿ ಮರಗಳು ಸಾಯುತ್ತಿದ್ದು, ಕೃಷಿಕರು ಆತಂಕಗೊಂಡಿದ್ದಾರೆ.
ಸುಮಾರು 10-20 ವರ್ಷ ಮೇಲ್ಪಟ್ಟಿರುವ ಫಸಲು ಭರಿತ ತೆಂಗಿನ ಮರಗಳಲ್ಲೂ ಈ ಸಮಸ್ಯೆ ಬಾಧಿಸುತ್ತಿದೆ. ಆರಂಭದಲ್ಲಿ ಸಿರಿ (ಚಿಗುರು) ಒಣಗಿ, ಹೊಸ ಚಿಗುರು ಬರುವುದು ನಿಲ್ಲುತ್ತದೆ. ಬಳಿಕದಲ್ಲಿ ಎಳೆ ಕಾಯಿಗಳು ಉದುರುತ್ತವೆ. ಈ ರೋಗ ಬಾಧೆ ಒಮ್ಮೆಗೇ ಗಮನಕ್ಕೆ ಬರುವುದಿಲ್ಲ; ಆದ್ದರಿಂದ ಗಮನಕ್ಕೆ ಬಂದ ಬಳಿಕ ಮರವನ್ನು ಉಳಿಸಿಕೊಳ್ಳುವುದು ಕಷ್ಟ ಎಂದು ಕೃಷಿಕರು ತಿಳಿಸುತ್ತಾರೆ. ಎಷ್ಟೋ ವರ್ಷಗಳಿಂದ ಸಾಕಿ ಬೆಳೆಸಿದ ಫಸಲು ಭರಿತ ಮರಗಳು ಈ ರೀತಿ ಸಾಯುವಾಗ ಕೃಷಿಕರು ನಷ್ಟಕ್ಕೊಳಗಾಗುವುದರ ಜತೆಗೆ ತಮ್ಮ ವರನ್ನೇ ಕಳೆದುಕೊಂಡಷ್ಟು ಸಂಕಟ ಪಡುತ್ತಿದ್ದಾರೆ.
ಸುಳಿ ಕೊಳೆ ರೋಗ ಶಂಕೆ
ಮರಗಳು ಸಾಯುತ್ತಿರುವ ಲಕ್ಷಣ ಗಮನಿಸಿದರೆ, ಮೇಲ್ನೋಟಕ್ಕೆ ಇದು ಸುಳಿ ಕೊಳೆ ರೋಗ ಆಗಿರ ಬಹುದು ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ. ಗಾಳಿಯಿಂದ ಇದು ಹರಡುತ್ತದೆ. ತೆಂಗಿನ ಮರ ಹತ್ತಿ ಅಲ್ಲಿನ ಭಾಗವನ್ನು ತೆಗೆದು ಪರಿಶೀಲಿಸಿದರೆ ಸ್ಪಷ್ಟತೆ ಸಿಗಬಹುದು. ಮಳೆ ಹೆಚ್ಚಾದ ಸಂದರ್ಭದಲ್ಲಿ ಈ ಸುಳಿ ಕೊಳೆ ರೋಗ ತೆಂಗನ್ನು ಬಾಧಿಸುತ್ತದೆ. ಕೆಲವು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಹಾಗೂ ರಾಜ್ಯದ ಕೆಲವೆಡೆ ಇದು ಕಾಣಿಸಿಕೊಂಡಿತ್ತು. ಹುಳ (ಕೀಟ) ಬಾಧೆಯಿಂದಲೂ ಈ ರೀತಿ ಆಗುವ ಸಂಭವವಿರುತ್ತದೆ. ಹುಳ ಬಾಧೆಯನ್ನು ಕೃಷಿಕರೇ ಎಚ್ಚರ ವಹಿಸಿ ನಿಯಂತ್ರಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ಕಾಣಿಸಿಕೊಂಡಿರುವುದು ಸುಳಿಕೊಳೆ ರೋಗ ಎಂದಾದರೆ ನಿಯಂತ್ರಣ ಸಾಧ್ಯವಿದೆ ಎಂದು ತೋಟಗಾರಿಕಾ ಅಧಿ ಕಾರಿಗಳು ಮಾಹಿತಿ ನೀಡಿದ್ದಾರೆ.
ಸಾಮಾನ್ಯವಾಗಿ ಈ ರೋಗ ಜುಲೈ- ಡಿಸೆಂಬರ್‌ನಲ್ಲಿ ಅಧಿಕವಾಗಿರುತ್ತದೆ. ಈ ರೋಗ ನಡುಸುಳಿಯ ಬುಡ ಮತ್ತು ಒಳಸುಳಿಯಲ್ಲಿನ ಎಳೆಯ ಬುಡದಲ್ಲಿ ಕಾಣಿಸಿಕೊಳ್ಳುತ್ತದೆ. ಹೊಸದಾಗಿ ಚಿಗುರು ಬರುತ್ತಿರುವ ಗರಿ ಬಾಡಿ ಬಾಗಿರುವುದನ್ನು ದೂರದಿಂದಲೇ ಗುರುತಿಸಬಹುದು.
ಎರಡನೇ ಹಂತವಾಗಿ ತುದಿಯ ಗರಿಯು ಹಳದಿ ಬಣ್ಣಕ್ಕೆ ತಿರುಗುತ್ತದೆ. ಆಗಲೂ ಗರಿಗಳೂ ಕೊಳೆಯುತ್ತವೆ. ರೋಗ ತೀವ್ರಗೊಂಡಲ್ಲಿ ಗಿಡವು ಸಂಪೂರ್ಣ ಒಣಗುವ ಸಂಭವವಿರುತ್ತದೆ. ಪರಿಶೀಲಿಸಿ ಔಷಧ ಸಿಂಪಡಣೆ, ಬೇವಿನ ಹಿಂಡಿ ಹಾಕಬೇಕು. ಅಕ್ಕ ಪಕ್ಕದ ತೆಂಗುಗಳಿಗೂ ಹರಡುವ ಸಾಧ್ಯತೆ ಇರುವುದರಿಂದ ಅವುಗಳಿಗೆ ಪೂರಕ ಔಷಧ ಸಿಂಪಡಿಸುವುದು ಮೊದಲಾದ ಮುಂಜಾಗ್ರತೆ ವಹಿಸಬೇಕು ಎನ್ನುತ್ತಾರೆ ತೋಟಗಾರಿಕೆ ಅಧಿಕಾರಿಗಳು.
ತೆಂಗಿನ ಕೊಳೆತ ಸಿರಿಗಳನ್ನುತೆಗೆದು ಅಲ್ಲಿಗೆ ಬೋಡೋì ಪೇಸ್ಟ್ ಹಚ್ಚcಬೇಕು. ಚಿಗುರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಿದಲ್ಲಿ ತೆಂಗನ್ನು ಬದುಕಿಬಹುದು ಎನ್ನುತ್ತಾರೆ ಸಿಪಿಸಿಆರ್‌ಐ ಅಧಿಕಾರಿಗಳು.
ಕೀಟ ಬಾಧೆ, ಸುಳಿ ಕೊಳೆ ರೋಗದಿಂದ ತೆಂಗುಗಳು ಸಾಯುತ್ತವೆ. ಕೀಟ ಬಾಧೆ ಸಾಮಾನ್ಯ ರೋಗವಾಗಿದ್ದು, ಕೃಷಿಕರು ಎಚ್ಚರ ವಹಿಸಿದಲ್ಲಿ ನಿಯಂತ್ರಣ ಸಾಧ್ಯ. ಬಾಧಿತ ಮರಗಳಿಂದ ಇತರೆ ಮರಗಳಿಗೆ ಹರಡದಂತೆ ಮುನ್ನೆಚ್ಚರಿಗೆ ವಹಿಸುವುದು ಅಗತ್ಯ.
– ದಿವಾಕರ,
ವಿಜ್ಞಾನಿ ಸಿಪಿಸಿಆರ್‌ಐ
ಕಿದು ನೆಟ್ಟಣ
-ದಯಾನಂದ ಕಲ್ನಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Martin: ಕಿರುತೆರೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಧ್ರುವ ಸರ್ಜಾ ನಟನೆಯ ʼಮಾರ್ಟಿನ್ʼ
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
BBK11: ದಯವಿಟ್ಟು ಬಿಗ್ ಬಾಸ್ ಮನೆಯಿಂದ ಹೋಗು.. ಚೈತ್ರಾಗೆ ಕೈಮುಗಿದು ಕೇಳಿಕೊಂಡ ರಜತ್
Belagavi: ನಕಲಿ ಗಾಂಧಿಗಳನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣ ಪೋಲು: ಜಗದೀಶ್ ಶೆಟ್ಟರ್
Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.