ಮಡಂತ್ಯಾರು ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ
ಮಾದರಿ ಕಾರ್ಯಯೋಜನೆಗೆ ಅರಸಿ ಬಂತು ಗೌರವ
Team Udayavani, Oct 2, 2019, 5:08 AM IST
ಗ್ರಾ.ಪಂ. ಸಭಾಂಗಣ ಮತ್ತು ಕಟ್ಟಡದಲ್ಲಿ ಅಳವಡಿಸಿದ ಮಳೆನೀರು ಕೊಯ್ಲು ಘಟಕ.
ಬೆಳ್ತಂಗಡಿ: ಗ್ರಾಮೀಣ ಪ್ರದೇಶ ಅಭಿವೃದ್ಧಿ ದೂರದೃಷ್ಟಿತ್ವದಿಂದ ಭವ್ಯ ರಾಷ್ಟ್ರ ನಿರ್ಮಾಣ ಸಾಧ್ಯ ಎಂಬ ಚಿಂತನೆ ಯೊಂದಿಗೆ ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಗ್ರಾ.ಪಂ. ಹಮ್ಮಿಕೊಂಡ ಕಾರ್ಯಯೋಜನೆಗಳು ತಾಲೂಕಿನ ಇತರೇ ಗ್ರಾ.ಪಂ.ಗಳಿಗೆ ಮಾದರಿಯಾಗಿದೆ.
ಗ್ರಾಮೀಣ ಭಾಗದ ಶ್ರೇಯೋಭಿವೃದ್ಧಿಗೆ ಗ್ರಾ.ಪಂ. ಆಡಳಿತ ಹಾಗೂ ಜನರ ಸಹಕಾರ ಜತೆಗೂಡಿ ರೂಪಿಸಿದ ಮಹತ್ತರ ಯೋಜನೆಗಳಿಂದಾಗಿ ಈ ಬಾರಿಯ ರಾಜ್ಯ ಸರಕಾರದ ಗಾಂಧಿ ಪುರಸ್ಕಾರದಡಿ ಪಂ. ಪ್ರಗತಿಗೆ ಸಂಬಂಧಿಸಿದ 150 ಅಂಕಗಳಲ್ಲಿ 138 ಅಂಕ ಪಡೆಯುವ ಮೂಲಕ ಮಡಂತ್ಯಾರು ಗ್ರಾ.ಪಂ. ಗಾಂಧಿ ಪುರಸ್ಕಾರಕ್ಕೆ ಆಯ್ಕೆಯಾಗಿದೆ.
ಗ್ರಾ.ಪಂ. ಪರಿಚಯ
ಪಂ. ವ್ಯಾಪ್ತಿಯಲ್ಲಿ ಪಾರೆಂಕಿ ಮತ್ತು ಕುಕ್ಕಳ ಎರಡು ಗ್ರಾಮಗಳಿದ್ದು, ಒಟ್ಟು 6,450 ಜನಸಂಖ್ಯೆ ಹೊಂದಿದೆ. 16 ಪಂ. ಸದಸ್ಯರಿದ್ದು, 6 ಸಿಬಂದಿಯಿದ್ದಾರೆ. ಎಲ್ಲ ಮನೆಗಳಲ್ಲೂ ಶೌಚಾಲಯ ಹೊಂದುವ ಮೂಲಕ ಬಯಲು ಶೌಚ ಮುಕ್ತ ಗ್ರಾಮ ವಾಗಿಸುವ ಗ್ರಾ.ಪಂ. ಕನಸು ಈಡೇರಿದೆ. ಇಷ್ಟು ಮಾತ್ರವಲ್ಲದೆ ಶೇ. 86 ತೆರಿಗೆ ಸಂಗ್ರಹಿಸಿ ಆದಾಯದಲ್ಲೂ ಪ್ರಗತಿಯತ್ತ ದಾಪುಗಾಲು ಇರಿಸಿದೆ.
ಹೊಸತನದ ಕಲ್ಪನೆ ಸಾಕ್ಷಾತ್ಕಾರ
ನವೀನ ಚಿಂತನೆಗಳೊಂದಿಗೆ ಗ್ರಾಮಕ್ಕೆ ಹೊಸ ಆಯಾಮ ತಂದುಕೊಡುವಲ್ಲಿ ಅಧ್ಯಕ್ಷರು ಹಾಗೂ ಸದಸ್ಯರ ಪಾತ್ರ ಗೌರವಯುತ. ಗ್ರಾ.ಪಂ. ವ್ಯಾಪ್ತಿಯಲ್ಲಿ ಮಿಂಚುಬಂಧಕ ಅಳವಡಿಸಿದ ತಾಲೂಕಿನ ಏಕೈಕ ಗ್ರಾ.ಪಂ. ಆಗಿದೆ. ಪಂ. ಸಭಾಂಗಣ ದಲ್ಲಿ ಮಳೆ ಕೊಯ್ಲು ಅಳವಡಿಸಿ ಬೃಹತ್ ಟ್ಯಾಂಕ್‌ನಲ್ಲಿ ಸಂಗ್ರಹಿಸಿ, ಶುದ್ಧ ನೀರಿನ ಘಟಕದ ಮೂಲಕ ಕುಡಿಯುವ ನೀರನ್ನು 5 ಲೀ. 2ರೂ.ನಲ್ಲಿ ನೀಡುವ ವಿನೂತನ ಯೋಜನೆ ಜನ ಮೆಚ್ಚುಗೆ ಪಡೆದಿದೆ.
ವಿದ್ಯುತ್ ಮತ್ತು ನೀರು ಉಳಿತಾಯ ಮಾಡುವ ನಿಟ್ಟಿನಲ್ಲಿ ಕುಡಿಯುವ ನೀರಿನ ಸ್ಥಾವರಗಳಿಗೆ ಮೊಬೈಲ್ ಮೂಲಕ ಚಾಲನೆ ನೀಡುವ ವ್ಯವಸ್ಥೆ ವಿನೂತನ. ಪೆಟ್ರೋನೆಟ್‌ಎಂಎಚ್‌ಬಿ ಸಂಸ್ಥೆಯ ಸಿಎಸ್‌ಆರ್ ನಿಧಿಯಿಂದ ವಿಶೇಷ ಪ್ರಯತ್ನದಿಂದ ಬೃಹತ್ ಸಭಾಂಗಣ ಮತ್ತು 2018-19ನೇ ಸಾಲಿನ ತ್ಯಾಜ್ಯ ವಿಲೇವಾರಿಗಾಗಿ ವಾಹನದ ಕೊಡುಗೆ ಪಡೆದಿದೆ.
ಕುಡಿಯುವ ನೀರಿನ ಬಳಕೆ ಶುಲ್ಕ ವಸೂಲಿಗಾಗಿ ಸುಧಾರಿತ ತಂತ್ರಾಂಶ ಆಧಾರಿತ ಸಿಂಪ್ಯೂಟರ್ ಬಳಸಿ ಶುಲ್ಕದ ಬಿಲ್ ನೀಡುವುದು ಮತ್ತು ಶುಲ್ಕ ವಸೂಲಿ ಮಾಡುವ ವ್ಯವಸ್ಥೆ ಮಾಡಲಾಗಿದೆ. ಪಂ. ವ್ಯಾಪ್ತಿಯಲ್ಲಿ ಮಳೆ ನೀರು ಕೊಯ್ಲನ್ನು ಕಡ್ಡಾಯವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ 100 ಕುಟುಂಬಗಳಿಗೆ ತಲಾ 1,000 ರೂ. ಸಹಾಯಧನ ನೀಡಲು ಕ್ರಮ ಕೈಗೊಂಡಿರುವುದು ಇತರ ಗ್ರಾಮಗಳೂ ಅನುಸರಿಸುವಂತೆ ಮಾಡಿದೆ.
ಸೊÌàದ್ಯೋಗ
ಗ್ರಾಮೀಣ ಯುವ ಜನತೆಗೆ ಸೊÌàದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಗ್ರಾ.ಪಂ. ಸ್ವಂತ ಆದಾಯದ ಕ್ರಿಯಾ ಯೋಜನೆಯಲ್ಲಿ ಅನುದಾನ ಕಾಯ್ದಿರಿಸಿ 5 ಕುಟುಂಬಗಳ ಯುವತಿಯರಿಗೆ ಟೈಲರಿಂಗ್ ಯಂತ್ರ ವಿತರಿಸುವ ಮೂಲಕ ಸ್ವಾವಲಂಬಿ ಬದುಕಿಗೆ ಸಹಕಾರ ನೀಡಲಾಗಿದೆ.
ಇ- ವೇಸ್ಟ್ ಮ್ಯಾನೇಜ್‌ಮೆಂಟ್ ಹೊಸ ಪರಿಕಲ್ಪನೆಯಂತೆ ಮಡಂತ್ಯಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಇ-ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಿದ ರಾಜ್ಯದ ಏಕೈಕ ಗ್ರಾ.ಪಂ. ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನರೇಗಾ ಯೋಜನೆಯಡಿ ವರ್ಷಕ್ಕೊಂದು ಸುಸಜ್ಜಿತ ರುದ್ರಭೂಮಿ ನಿರ್ಮಿಸಲಾಗಿದೆ. ಪಾರೆಂಕಿ ಗ್ರಾಮದ ಕುಕ್ಕಳಬೆಟ್ಟು ಬಳಿ ರುದ್ರಭೂಮಿ ನಿರ್ಮಾಣದ ಕಾರ್ಯ ಪೂರ್ಣಗೊಂಡು ಬಳಕೆಗೂ ಯೋಗ್ಯ ವಾಗಿದೆ. ಕುಕ್ಕಳ ಗ್ರಾಮದ ಮಂಜಲಪಲ್ಕೆ ಬಳಿ ರುದ್ರಭೂಮಿ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ.
ನಿವೇಶನ ವಂಚಿತರಿಗೆ ನಿವೇಶನ
ನಿವೇಶನ ವಂಚಿತರಿಗೆ ಮನೆಗಳ ಹಂಚಿಕೆ ಯಾಗಿದ್ದು, 41 ಮನೆಗಳು 2017ರಲ್ಲಿ ಹಂಚಿಕೆಯಾಗಿವೆ. 2018-19ರಲ್ಲಿ 10 ಎಕ್ರೆ 56 ಸೆನ್ಸ್ ಜಾಗದಲ್ಲಿ 2.50 ಎಕ್ರೆ ಜಾಗವನ್ನು ಸಮತಟ್ಟು ಮಾಡಿ 50 ಫಲಾನುಭವಗಳಿಗೆ ಭೂಮಿ ಸಮತಟ್ಟು ಮಾಡಲಾಗುತ್ತಿದೆ.
ಮಡಂತ್ಯಾರಿನ ಗೌರವ ಹೆಚ್ಚಿದೆ
ಗಾಂಧಿ ಪುರಸ್ಕಾರದಿಂದ ಗ್ರಾ.ಪಂ. ಆಡಳಿತದಲ್ಲಿ ಹೊಸತನ ರೂಪಿಸಲು ಸ್ಫೂರ್ತಿ ತಂದಂತಾಗಿದೆ. ಜನೋಪಯೋಗಿ ಚಿಂತನೆಯಿಂದ ಗ್ರಾಮ ಅಭಿವೃದ್ಧಿ ಸಾಧ್ಯ. ಅವಳಿ ಗ್ರಾಮಗಳ ಅಭ್ಯುದಯದ ಕಡೆಗೆ ಪಣ ನಿರಂತರವಾಗಿದ್ದು, ಗ್ರಾಮಸ್ಥರ ಪ್ರೋತ್ಸಾಹ, ಸಂಘ-ಸಂಸ್ಥೆಗಳ ಸಹಕಾರ, ಸದಸ್ಯರ ಸಹಮತದಿಂದ ಮಡಂತ್ಯಾರಿನ ಗೌರವ ಹೆಚ್ಚಿದೆ.
- ಗೋಪಾಲಕೃಷ್ಣ ಕೆ. ಕುಕ್ಕಳ, ಅಧ್ಯಕ್ಷರು, ಮಡಂತ್ಯಾರು ಗ್ರಾ.ಪಂ.
ಸಾಧನೆಗೆ ಸಂದ ಪುರಸ್ಕಾರ
ಪಂ. ಅಭಿವೃದ್ಧಿ ಜತೆಗೆ ವಿಶೇಷ ಸಾಧನೆಗೆ ಸಂದ ಅಪರೂಪದ ಪುರಸ್ಕಾರ. ಗ್ರಾಮದ ಜನರ ಸಹಕಾರ, ಎಲ್ಲ ಪಕ್ಷಗಳ ಸದಸ್ಯರು ಹಾಗೂ ಸಿಬಂದಿಯ ಪ್ರೋತ್ಸಾಹ ಹಾಗೂ ರೋಟರಿ ಕ್ಲಬ್, ಜೆಸಿಐ, ಎಸ್‌ಕೆಡಿಆರ್‌ಡಿಪಿ, ವರ್ತಕರ ಸಂಘದ ನಿರಂತರ ಸಹಕಾರದಿಂದ ಪಂ. ವಿನೂತನ ಚಿಂತನೆಗೆ ತಕ್ಕ ಪುರಸ್ಕಾರ ಲಭಿಸಿದೆ.
- ನಾಗೇಶ್ ಎಂ. ಪಿಡಿಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಲೈಮಾನ್ ಮನೆಗೆ ಸ್ಪೀಕರ್ ಯು.ಟಿ.ಖಾದರ್ ಭೇಟಿ; ಎಸ್ಪಿ, ಡಿವೈಎಸ್ಪಿ, ಮನೆಯವರ ಜೊತೆ ಸಮಾಲೋಚನೆ
Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ
ಬೋಳಂತೂರು ದರೋಡೆ ಪ್ರಕರಣದ ಸೂತ್ರಧಾರ ಕಾರು ಚಾಲಕ?
Sullia: ಬಸ್ಸಿನಿಂದ ವಿದ್ಯಾರ್ಥಿ ರಸ್ತೆಗೆಸೆಯಲ್ಪಟ್ಟ ಪ್ರಕರಣ; ಚಾಲಕ-ನಿರ್ವಾಹಕರಿಗೆ ಶಿಕ್ಷೆ
Sullia ಮಾನಸಿಕ ಖಿನ್ನತೆ: ನೇಣು ಬಿಗಿದು ಯುವಕ ಆತ್ಮಹ*ತ್ಯೆ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.