ಮರೀಲು ರೈಲ್ವೇ ಸೇತುವೆ ಸನಿಹ ತ್ಯಾಜ್ಯ ರಾಶಿ!
Team Udayavani, May 3, 2019, 5:17 PM IST
•ವಿಶೇಷ ವರದಿ
ನಗರ ಮೇ 2: ಸ್ವಚ್ಛ ಪುತ್ತೂರಿನ ಕನಸು ಬಿತ್ತಿ ನಗರವಿಡೀ ಜಾಗೃತಿ ಮೂಡಿಸಿದ್ದ ನಗರಸಭೆ ವ್ಯಾಪ್ತಿಯ ಮರೀಲು ರೈಲ್ವೇ ಸೇತುವೆ ಸನಿಹದ ತೋಡು ತ್ಯಾಜ್ಯ ತುಂಬುವ ಅನಧಿಕೃತ ಡಂಪಿಂಗ್ ಯಾರ್ಡ್ ಆಗಿ ಬದಲಾಗಿದೆ.
ಮಳೆ ನೀರು ಹರಿದು ಹೋಗುವ ತೋಡು ಇದಾಗಿದ್ದು, ತ್ಯಾಜ್ಯ, ಕಸ ತುಂಬಿ ಇಡೀ ಪರಿಸರ ದುರ್ನಾತ ಬೀರುತ್ತಿದೆ. ಹೀಗಾಗಿ ಪರಿಸರದಲ್ಲಿ ಸಾಂಕ್ರಾಮಿಕ ರೋಗ, ಅನಾರೋಗ್ಯದ ಭೀತಿ ಆವರಿಸಿದೆ.
ಅಂತಾರಾಜ್ಯ ಸಂಪರ್ಕ ರಸ್ತೆ
ಕಾಣಿಯೂರು-ಮಂಜೇಶ್ವರ ಅಂತಾರಾಜ್ಯ ರಸ್ತೆ ಹಾದು ಹೋಗುವ ಪ್ರದೇಶ ಇದಾಗಿದ್ದು, ನಗರಸಭೆ ವ್ಯಾಪ್ತಿ ಯ ಕೆಮ್ಮಿಂಜೆ ಎರಡನೆ ವಾರ್ಡ್ ಗೆ ಸೇರಿದೆ. ಕೋಳಿ ತ್ಯಾಜ್ಯ, ಕೊಳತೆ ಹಣ್ಣು, ತರಕಾರಿ, ತಿಂದುಂಡು ಎಸೆದ ಪ್ಲಾಸ್ಟಿಕ್ ಬಟ್ಟಲು, ಇತರೆ ವಸ್ತುಗಳು ಇಲ್ಲಿ ರಾಶಿ ಬಿದ್ದಿವೆ. ಬೇಸಗೆ, ಮಳೆಗಾಲದಲ್ಲಿ ತ್ಯಾಜ್ಯ ವಸ್ತುಗಳನ್ನು ತೋಡಿಗೆ ಎಸೆದು ಪರಿಸರವನ್ನು ಹಾಳುಗೆಡವುತ್ತಿದ್ದರೂ ನಗರಸಭೆ ಅಧಿಕಾರಿಗಳು ಗಮನ ಹರಿ ಸುತ್ತಿಲ್ಲ ಅನ್ನುತ್ತಾರೆ ಸ್ಥಳೀಯ ಪರಿಸರದ ನಿವಾಸಿಗಳು.
ಮಾದರಿ ವಾರ್ಡ್..!
ವಾರ್ಡ್ ನಂಬರ್ 23 ಮತ್ತು 24ರ ಸರಹದ್ದಿನಲ್ಲಿ ಇರುವ ಈ ತೋಡು ರಸ್ತೆ ಸನಿಹದಲ್ಲೇ ಇದೆ. ಈ ಹಿಂದೆ ಮರೀಲು ಯೂತ್ ಕೌನ್ಸಿಲ್, ಚರ್ಚ್ ವತಿಯಿಂದ ಈ ಪರಿಸರದ ವಾರ್ಡ್‌ಗಳನ್ನು ಮಾದರಿ ವಾರ್ಡ್ ಆಗಿ ರೂಪಿಸುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆ ಹಮ್ಮಿಕೊಂಡಿತ್ತು. ಸ್ವಚ್ಛತಾ ಫಲಕ, ರಸ್ತೆ ಫಲಕ ಸೇರಿದಂತೆ ಸಭೆ ಸಮಾರಂಭ ಆಯೋಜಿಸಿ ಜಾಗೃತಿ ಮೂಡಿಸಿತ್ತು. ಆದರೆ ಈ ತ್ಯಾಜ್ಯದ ರಾಶಿ ಮಾದರಿ ವಾರ್ಡ್ ಕನಸಿಗೆ ಅಡ್ಡಿ ಉಂಟು ಮಾಡಿದೆ.
ಅಪರಿಚಿತರ ಕೃತ್ಯ
ಇಲ್ಲಿ ತ್ಯಾಜ್ಯ, ಕಸ ಎಸೆಯುವವರು ಈ ವಾರ್ಡ್‌ನವರು ಅಲ್ಲ. ಬದಲಿಗೆ ಹೊರ ಭಾಗದಿಂದ ಬಂದು ಎಸೆದು ಹೋಗುತ್ತಾರೆ. ಕೆಲ ಮಾಂಸದ ಅಂಗಡಿ ಯಿಂದ ತ್ಯಾಜ್ಯವನ್ನು ರಾತ್ರಿ ವೇಳೆ ತೋಡಿಗೆ ಎಸೆಯುತ್ತಾರೆ. ವಾಹನ ನಿಲ್ಲಿಸದೆ ತ್ಯಾಜ್ಯದ ಚೀಲಗಳನ್ನು ತೋಡಿಗೆ ಎಸೆಯಲು ಇಲ್ಲಿ ಸಾಧ್ಯವಿರುವ ಕಾರಣ ಕಿಡಿಗೇಡಿಗಳ ಕೃತ್ಯಕ್ಕೆ ಸೂಕ್ತ ಸ್ಥಳ ಎನಿಸಿದೆ. ವಾಹನ ನಿಲ್ಲಿಸದೆ ತ್ಯಾಜ್ಯ ಎಸೆಯುವ ಕಾರಣ ತೋಡಿನ ಬಹುತೇಕ ಭಾಗದಲ್ಲಿ ತ್ಯಾಜ್ಯ ತುಂಬಿದೆ.
ನಗರಸಭೆ ಮೌನ
ಈ ಹಿಂದೆ ಪುರಸಭಾ ಅವಧಿಯಲ್ಲಿ ಈ ಸ್ಥಳಕ್ಕೆ ಭೇಟಿ ನೀಡಿದ ಅಂದಿನ ಆಡಳಿತ ಸಿಸಿ ಕೆಮಾರ ಅಳವಡಿಸಿ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿತ್ತು. ಅದು ಈ ತನಕ ಕಾರ್ಯಗತವಾಗಿಲ್ಲ. ವಾರ್ಡ್-24 ಪುತ್ತೂರುಮೂಲೆ ರಸ್ತೆ ಈ ತೋಡಿನಲ್ಲೇ ಹಾದು ಹೋಗಿದೆ. ಮಳೆಗಾಲದ ಆರಂಭ, ಬೇಸಗೆ ಕಾಲದ ಆರಂಭದಲ್ಲಿ ವಾಹನ ತೊಳೆದು ನೀರು ಮಲೀನ ಮಾಡುವ ಪ್ರಕರಣ ಎಗ್ಗಿಲ್ಲದೆ ಸಾಗುತ್ತದೆ. ಅದರ ಜತೆಗೆ ಕಸ, ತ್ಯಾಜ್ಯದ ಕಾಟ ತೋಡಿನ ಸ್ವರೂಪವನ್ನೆ ಹಾಳು ಮಾಡಿದೆ. ಅದಾಗ್ಯೂ ನಗರಸಭೆ ಕ್ಯಾರೆ ಅಂದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.