‘ವಿಜ್ಞಾನದ ಸಾಧನೆ, ಸಂಶೋಧನೆಗಳಿಗೂ ದೇವರ ಕೃಪೆ ಪ್ರಧಾನ’


Team Udayavani, Mar 31, 2018, 3:07 PM IST

31-March-8.jpg

ಉಪ್ಪಿನಂಗಡಿ : ವಿಜ್ಞಾನ ಅದೆಷ್ಟೇ ಮುಂದುವರಿದರೂ ವಿಜ್ಞಾನದ ಸಾಧನೆ – ಸಂಶೋಧನೆಗಳಲ್ಲಿ ದೇವರ ಕೃಪೆಯೂ ಪ್ರಧಾನವಾಗಿ ಗೋಚರಿಸಿದೆ. ಅಂತರಿಕ್ಷಕ್ಕೆ ಕಳುಹಿಸಿದ ಉಪಗ್ರಹ ಪೂರ್ವ ನಿಗದಿತ ರೀತಿಯಲ್ಲಿ ಕಾರ್ಯನಿರ್ವಹಿಸದೇ ಹೋದಾಗ ವಿಜ್ಞಾನಿಗಳು ದೇವರಿಗೆ ಮೊರೆ ಹೋಗಿ ಯಶಸ್ಸು ಸಾಧಿಸಿದ ಘಟನಾವಳಿಗಳು ಹಲವು ಇವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ತಿಳಿಸಿದರು. 

ಧರ್ಮಸ್ಥಳ ಕ್ಷೇತ್ರದ ಒಡೆತನದಲ್ಲಿರುವ ಇಲ್ಲಿನ ಕದಿಕ್ಕಾರು ಬೀಡು ಎಂಬಲ್ಲಿ ನೂತನವಾಗಿ ನಿರ್ಮಿಸಿದ ರಾಜನ್‌ ದೈವ ಕಲ್ಕುಡ, ಉಪ್ಪಿನಂಗಡಿಯ ಗ್ರಾಮ ದೈವಗಳ ಬೀಡಿನ ಪಂಜುರ್ಲಿ ದೈವಗಳ ಪುನಃಪ್ರತಿಷ್ಠೆ ಹಾಗೂ ಕಲಶಾಭಿಷೇಕ ಕಾರ್ಯಕ್ರಮದ ಧಾರ್ಮಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಶಾಸ್ತ್ರ ಶೈಲಿಯಲ್ಲಿ ದೇವಾಲಯಗಳಲ್ಲಿ ದೇವತಾರಾಧನೆ ನಡೆದರೆ, ಜನಪದೀಯ ಶೈಲಿಯಲ್ಲಿ ಬಂದ ದೈವಾರಾಧಾನೆ ಮನುಷ್ಯನ ಬದುಕಿನಲ್ಲಿ ಭರವಸೆಯನ್ನು ಮೂಡಿಸುತ್ತಿದ್ದವು. ಆಪತ್ತು ಬಂದಾಗ ರಕ್ಷಣೆಗಾಗಿ ಕಾಯುವ ಶಕ್ತಿಯನ್ನು ನಂಬುವ ಕಾರ್ಯ ಅನಾದಿ ಕಾಲದಿಂದಲೂ ಬಂದಿದೆ. ವಿಜ್ಞಾನದ ಯುಗದಲ್ಲೂ ಇದು ಮುಂದುವರೆದಿದೆ. ಅಬ್ದುಲ್‌ ಕಲಾಂ ಅವರಂತಹ ವಿಜ್ಞಾನಿಗಳೂ ತಮ್ಮ ಸಂಶೋಧನೆಯ ಸಾಫ‌ಲ್ಯಕ್ಕಾಗಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ್ದರು ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ 50 ವರ್ಷಗಳನ್ನು ಪೂರೈಸಿದ ಡಾ| ಹೆಗ್ಗಡೆ ಅವರನ್ನು ಅಭಿನಂದಿಸಲಾಯಿತು. ಕದಿಕ್ಕಾರು ಬೀಡಿನ ಅಭಿವೃದ್ಧಿಯನ್ನು ಕೈಜೋಡಿಸಿದ ಮಹನೀಯರನ್ನು ಹೆಗ್ಗಡೆಯವರು ಸಮ್ಮಾನಿಸಿದರು. ವೇದಿಕೆಯಲ್ಲಿ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಹಾಗೂ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ಸೀತಾರಾಮ ಶೆಟ್ಟಿ, ಪುತ್ತೂರು ತಾಲೂಕು ಯೋಜನಾಧಿಕಾರಿ ಧರ್ಣಪ್ಪ ಮೂಲ್ಯ, ಗಣ್ಯರಾದ ಸಂಜೀವ ಮಠಂದೂರು, ಮಹೇಂದ್ರ ವರ್ಮ, ಸುಜಾತಾ ಕೃಷ್ಣ ಆಚಾರ್ಯ, ಕರುಣಾಕರ ಸುವರ್ಣ, ಯು. ರಾಮ, ಧನ್ಯಕುಮಾರ್‌ ರೈ, ಎನ್‌. ಉಮೇಶ್‌ ಶೆಣೈ, ಡಾ| ನಿರಂಜನ್‌ ರೈ, ರಾಮಚಂದ್ರ ಮಣಿಯಾಣಿ, ಕಂಗ್ವೆ ವಿಶ್ವನಾಥ ಶೆಟ್ಟಿ, ಲಕ್ಷ್ಮಣ ಮಣಿಯಾಣಿ, ರಾಮಣ್ಣ ಗೌಡ, ರಾಜಗೋಪಾಲ ಭಟ್‌, ಪಾತಾಳ ವೆಂಕಟರಮಣ ಭಟ್‌ ಉಪಸ್ಥಿತರಿದ್ದರು.

ಪ್ರಸಾದ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ,ಮಿತ್ರಸೇನ ಜೈನ್‌ ಸ್ವಾಗತಿಸಿ, ವಂದಿಸಿದರು. ಅಭಯ್‌ ಜೈನ್‌ ಅಭಿನಂದನ ಭಾಷಣ ಮಾಡಿದರು. ಬೀಡಿನಲ್ಲಿ ದೈವಜ್ಞರಾದ ಮಂಜುನಾಥ ಭಟ್‌ ಅಂತರ, ವೇದಮೂರ್ತಿ ಶ್ರೀನಿವಾಸ ಬಡೆಕ್ಕಿಲ್ಲಾಯ, ವೇದಮೂರ್ತಿ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಕೆಮ್ಮಿಂಜೆ ಅವರ ಭಾಗೀಧಾರಿಕೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು, ದೈವಗಳ ಪ್ರತಿಷ್ಠೆ, ಕಲಶಾಭಿಷೇಕ ನೆರವೇರಿತು.

ನಂಬಿದವರಿಗೆ ಅನುಗ್ರಹ
ನಂಬಿಕೆ ಎಂದರೆ ವಿಶ್ವಾಸ, ಅಪನಂಬಿಕೆ ಎಂದರೆ ಅವಿಶ್ವಾಸ. ಮೂಡನಂಬಿಕೆ ಅತಿರೇಕದ ಭಾವನೆ ಎಂದು ವಿಶ್ಲೇಷಿಸಿದ ಅವರು, ದೇವರನ್ನು ನಂಬಿದವನಿಗೆ ದೇವರ ಅನುಗ್ರಹ ಬಂದೇ ಬರುತ್ತದೆ ಎಂದು ಪ್ರತಿಪಾದಿಸಿದರು.

ಟಾಪ್ ನ್ಯೂಸ್

1-dee

ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗ‌ಳ ದರವೂ ಹೆಚ್ಚಳ

1-dam

ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ

1-ran

National Anthem Controversy:ಭಾಷಣ ಮಾಡದೆ ಹೋದ ತಮಿಳುನಾಡು ರಾಜ್ಯಪಾಲ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Belthangady ಶಾರ್ಟ್ ಸರ್ಕ್ಯೂಟ್: ಮನೆ ಬೆಂಕಿಗಾಹುತಿ

Belthangady ಶಾರ್ಟ್ ಸರ್ಕ್ಯೂಟ್: ಮನೆ ಬೆಂಕಿಗಾಹುತಿ

Uppinangady: ಬಸ್‌ ನಿಲ್ದಾಣದಲ್ಲಿ ಕಳವು

Uppinangady: ಬಸ್‌ ನಿಲ್ದಾಣದಲ್ಲಿ ಕಳವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-shiv

ಪಟ್ನಾದಲ್ಲಿ ಸುಮಾರು 500 ವರ್ಷಗಳ ಹಿಂದಿನ ದೇಗುಲ ಪತ್ತೆ

1-dee

ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗ‌ಳ ದರವೂ ಹೆಚ್ಚಳ

1-devvvi

ಕಂದಹಾರ್‌ ಹೈಜಾಕ್‌ ವೇಳೆಯ ಪೈಲಟ್‌ ದೇವಿ ಶರಣ್‌ ನಿವೃತ್ತಿ

1-dam

ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ

1-ran

National Anthem Controversy:ಭಾಷಣ ಮಾಡದೆ ಹೋದ ತಮಿಳುನಾಡು ರಾಜ್ಯಪಾಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.