ಅನುದಾನ ಒದಗಿಸುವ ಭರವಸೆ; ನಡ ಹಿ.ಪ್ರಾ.ಶಾಲೆಗೆ ಎಂಎಲ್‌ಸಿ ಹರೀಶ್ ಕುಮಾರ್
Team Udayavani, Oct 13, 2021, 5:03 AM IST
ಬೆಳ್ತಂಗಡಿ: ಮಣ್ಣಿನ ಗೋಡೆ ಯಿಂದ ನಿರ್ಮಾಣವಾಗಿದ್ದ ಶತಮಾನದ ಹೊಸ್ತಿಲಲ್ಲಿರುವ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಗೀಗ ನೂತನ ಕಟ್ಟಡದ ಭಾಗ್ಯ ಒದಗಿ ಬಂದಿದ್ದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ತನ್ನ ಅನುದಾನದಡಿ 1.50 ಕೋ.ರೂ. ಒದಗಿಸುವ ಭರವಸೆ ನೀಡಿದ್ದಾರೆ.
1925ರಲ್ಲಿ ಆರಂಭಗೊಂಡ ಈ ಶಾಲೆ 96 ವರ್ಷ ಪೂರೈಸಿದೆ. 1ರಿಂದ 7ನೇ ತರಗತಿಯಿರುವ ಶಾಲೆಯಲ್ಲಿ 2020-21ರಲ್ಲಿ 81 ಮಕ್ಕಳಿದ್ದು, 2021-22ರಲ್ಲಿ 98 ಮಕ್ಕಳ ದಾಖಲಾತಿಯ ಮೂಲಕ 17 ಮಕ್ಕಳು ಹೆಚ್ಚುವರಿಯಾಗಿದ್ದರು. ಹೀಗಾಗಿ ಮಕ್ಕಳು ಶಾಲೆಗೆ ಬರುತ್ತಿದ್ದಾರೆ ಮೂಲ ಸೌಕರ್ಯ ಒದಗಿಸಿ ಎಂಬ ಅಂಕಣವನ್ನು ಉದಯವಾಣಿ ಪ್ರಕಟಿಸಿ ಬೆಳಕುಚೆಲ್ಲಿತ್ತು. ವರದಿ ಆಲಿಸಿದ ವಿ.ಪ.ಶಾಸಕರು ಶಿಕ್ಷಕರ, ಶಾಲಾಡಳಿತದೊಂದಿಗೆ ಚರ್ಚಿಸಿ ಇದೀಗ 1ರಿಂದ 7ನೇ ತರಗತಿ ನೂತನ ಕಟ್ಟಡ ರಚನೆಗೆ ತಮ್ಮ ಅನುದಾನದಡಿ 1.50 ಕೋ.ರೂ. ಮಂಜೂರುಗೊಳಿಸುವ ಭರವಸೆ ನೀಡಿದ್ದಾರೆ.
ಈ ವಿಚಾರವಾಗಿ ಹರೀಶ್ ಕುಮಾರ್ ಅ. 11ರಂದು ಶಾಲೆಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ ಬಳಿಕ ನೂತನ ಕಟ್ಟಡ ರಚನೆ ಕುರಿತು ಚರ್ಚಿಸಿದರು. ನಡ ಗ್ರಾ.ಪಂ. ಅಧ್ಯಕ್ಷ ವಿಜಯ ಕುಮಾರ್, ನಡ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ವಸಂತ ಗೌಡ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧರಣೇಂದ್ರ ಕುಮಾರ್, ಮುಖ್ಯ ಶಿಕ್ಷಕಿ ಪುಷ್ಪಾ, ಸಹ ಶಿಕ್ಷಕರಾದ ವಿಕ್ಟರ್ ಮಾಡ್ತಾ, ಸುಜಾತಾ ಎಸ್., ಮಾಜಿ ಜಿ.ಪಂ. ಸದಸ್ಯ ಶೈಲೇಶ್ ಕುಮಾರ್, ಗುತ್ತಿಗೆದಾರರಾದ ಆಧೀಶ್, ನಿಶ್ಚಲ್ ಉಪಸ್ಥಿತರಿದ್ದರು.
ಇದನ್ನೂ ಓದಿ:ಗುಡಿಬಂಡೆ: ಭಾರೀ ಗಾತ್ರದ ಮೀನಿನ ವಿಡಿಯೋ ಅಸಲಿಯತ್ತು ಬಯಲು
ಅಭಿವೃದ್ಧಿಗೆ ಆದ್ಯತೆ
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶತಮಾನದಂಚಿನ ಶಾಲಾ ಕಟ್ಟಡದ ಸ್ಥಿತಿ ಗಮನಿಸಿ ನೂತನ ಕಟ್ಟಡ ರಚನೆಗೆ ಅನುದಾನ ಒದಗಿಸುತ್ತಿದ್ದೇನೆ. ನನ್ನ ಮನೆಯ ಸಮೀಪವೇ ಇರುವ ಶಾಲೆಯಾದ್ದರಿಂದ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ.
-ಹರೀಶ್ ಕುಮಾರ್,
ವಿಧಾನ ಪರಿಷತ್‌ಸದಸ್ಯ
35 ಲಕ್ಷ ರೂ. ಅನುದಾನ
ನಾಲ್ವರು ಶಿಕ್ಷಕರಿರುವ ಈ ಶಾಲೆಗೆ ಕಟ್ಟಡದ್ದೇ ಕೊರತೆ ಎದುರಾಗಿತ್ತು. 96 ವರ್ಷ ಪೂರೈಸಿದ್ದರಿಂದ ಎಲ್ಲವೂ ಶತಮಾನದ ಪಟ್ಟಿಗೆ ಸೇರ್ಪಡೆ ಗೊಂಡಿತ್ತು. ಇದೀಗ 1.50 ಕೋ.ರೂ. ಅನುದಾನದಂತೆ 1ರಿಂದ 3ನೇ ತರಗತಿಗೆ ನಲಿಕಲಿ ಕೊಠಡಿ, 4ರಿಂದ 7ನೇ ತರಗತಿವರೆಗೆ ಪ್ರತ್ಯೇಕ ಕೊಠಡಿ ಹಾಗೂ 1 ಸ್ಮಾರ್ಟ್ ಕ್ಲಾಸ್ ಕೊಠಡಿ ರಚಿಸಲು ಯೋಜನೆ ರೂಪಿಸಲಾಗಿದೆ. ಆರಂಭಿಕ 35 ಲಕ್ಷ ರೂ. ಅನುದಾನ ಒದಗಿಸಿದ್ದು, ಜೂನ್ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವ ಚಿಂತನೆ ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.