ಶತಮಾನದ ಶಾಲೆಗೆ ದುಸ್ಥಿತಿಯ ಶೌಚಾಲಯ
ಬಾಳೆಪುಣಿ ಮುದುಂಗಾರುಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
Team Udayavani, Oct 4, 2021, 6:18 AM IST
ಬಂಟ್ವಾಳ: 127 ವರ್ಷಗಳ ಇತಿಹಾಸ ಹೊಂದಿರುವ ಬಾಳೆಪುಣಿ ಮುದುಂಗಾರುಕಟ್ಟೆ ಸರಕಾರಿ ಹಿ.ಪ್ರಾ. ಶಾಲೆಯ ಇತರ ವ್ಯವಸ್ಥೆಗಳು ಉತ್ತಮ ವಾಗಿದ್ದರೂ ಶೌಚಾಲಯ ಇನ್ನೂ ದುಸ್ಥಿತಿಯಲ್ಲಿದೆ.
ಬಂಟ್ವಾಳ ತಾಲೂಕಿನ ಗಡಿ ಭಾಗದಲ್ಲಿರುವ ಈ ಶಾಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಒಟ್ಟು 170 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಈ ವರ್ಷ 14 ವಿದ್ಯಾರ್ಥಿಗಳ ಹೆಚ್ಚಳವಾಗಿದೆ. 1 ಹಾಗೂ 2ನೇ ತರಗತಿಗೆ ಆಂಗ್ಲ ಮಾಧ್ಯಮ ಮಂಜೂರುಗೊಂಡಿದೆ. ಹೀಗಾಗಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ. ಶಾಲೆಯಲ್ಲಿ 1ರಿಂದ 8ನೇ ತರಗತಿಯ ಜತೆಗೆ ಎಲ್‌ಕೆಜಿ-ಯುಕೆಜಿಗಳು ಕೂಡ ಕಾರ್ಯಾ ಚರಿಸುತ್ತಿದ್ದು, ಒಟ್ಟು 6 ಮಂದಿ ಖಾಯಂ ಶಿಕ್ಷಕರಿದ್ದಾರೆ.
ಹಿಂದಿನ ಶೈಲಿಯ ಶೌಚಾಲಯ
ಅಂದಾಜಿನ ಪ್ರಕಾರ ಸುಮಾರು 3 ದಶಕಗಳ ಹಿಂದಿನ ಶೌಚಾಲಯ ಇದಾಗಿದ್ದು, ಹಿಂದಿನ ಶೈಲಿಯಲ್ಲೇ ನಿರ್ಮಾಣಗೊಂಡಿದೆ. ಅವುಗಳ ದುರವಸ್ಥೆಯಿಂದ ಮಕ್ಕಳು ಶೌಚಾಲಯಕ್ಕೆ ತೆರಳಲು ಹಿಂದೇಟು ಹಾಕುವ ಪರಿಸ್ಥಿತಿ ಇದೆ.
ಶೌಚಾಲಯಕ್ಕೆ ಸರಿಯಾದ ಹೊಂಡ, ಡ್ರೈನೇಜ್ ವ್ಯವಸ್ಥೆ ಇಲ್ಲದೇ ಇರುವುದರಿಂದ ಅದರ ಕೊಳಚೆ ಹೊರಭಾಗದಲ್ಲೇ ಹರಿದು ದುರ್ನಾತ ಬೀರುವ ಪರಿಸ್ಥಿತಿ ಇದೆ. ಶೌಚಾಲಯಕ್ಕೆ ತಾ.ಪಂ.ನಿಂದ ಅನುದಾನ ಇರಿಸಲಾಗಿದೆ ಎನ್ನಲಾಗುತ್ತಿದ್ದು, ಕಾಮಗಾರಿ ಶೀಘ್ರ ಆರಂಭಕ್ಕೆ ಬೇಡಿಕೆಯೂ ಕೇಳಿಬರುತ್ತಿದೆ. ತಾ.ಪಂ.ಜತೆಗೆ ಗ್ರಾ.ಪಂ.ನಲ್ಲೂ ಅನುದಾನ ಇರಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಸುಸಜ್ಜಿತ ಶೌಚಾಲಯ ನಿರ್ಮಾಣಗೊಳ್ಳಬೇಕಿದೆ.
ಇದನ್ನೂ ಓದಿ:ಗಂಗಾವತಿ : ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ
ಶಾಲೆಯಲ್ಲಿ ಉತ್ತಮ ರೀತಿಯ ಪೌಷ್ಟಿಕ ತೋಟವನ್ನೂ ನಿರ್ಮಿಸಲಾಗಿದೆ. ಅದರಲ್ಲಿ ಬಗೆ ಬಗೆಯ ಗಿಡಗಳು ಕಂಗೊಳಿಸುತ್ತಿವೆ. ಇಂತಹ ವ್ಯವಸ್ಥೆಯೊಂದಿಗೆ ಸುಸಜ್ಜಿತವಾಗಿರುವ ಶಾಲೆಗೆ ಸುಸಜ್ಜಿತ ಶೌಚಾಲಯವೂ ಅತಿ ಅಗತ್ಯವಾಗಿದೆ. ಸರಕಾರ ಖಾಸಗಿ ವ್ಯಕ್ತಿಗಳಿಗೆ ಶೌಚಾಲಯವನ್ನು ಕಡ್ಡಾಯಗೊಳಿಸುತ್ತಿದ್ದು, ಅದೇ ರೀತಿ ಸರಕಾರದ ವ್ಯಾಪ್ತಿಗೆ ಬರುವ ಶಾಲೆಗೂ ಉತ್ತಮ ರೀತಿಯ ಶೌಚಾಲಯ ಕಡ್ಡಾಯಗೊಳಿಸಬೇಕಿದೆ.
ಮೆಟ್ಟಿಲು ನಿರ್ಮಾಣಕ್ಕೆ ಬೇಡಿಕೆ
ಶಾಲೆಯ ತರಗತಿ ಕೋಣೆಯ ಕಟ್ಟಡಗಳು ಸುಸಜ್ಜಿತವಾಗಿದ್ದು, ಸುಣ್ಣ- ಬಣ್ಣಗಳೊಂದಿಗೆ ಕಂಗೊಳಿಸುತ್ತಿದೆ. ಕಟ್ಟಡ ಸೋರುತ್ತಿರುವ ಹಿನ್ನೆಲೆಯಲ್ಲಿ ಮಳೆಹಾನಿಯ 4 ಲಕ್ಷ ರೂ. ಅನುದಾನದಲ್ಲಿ ಮೇಲ್ಛಾಗದಲ್ಲಿ ಶೀಟ್ ಅಳವಡಿಸುವ ಕಾಮಗಾರಿಯೂ ಪೂರ್ಣಗೊಂಡಿದೆ. ಹೀಗಾಗಿ ಪ್ರಸ್ತುತ ಕಟ್ಟಡದ ಯಾವುದೇ ಸಮಸ್ಯೆಗಳಿಲ್ಲ.ಆದರೆ ಆರ್‌ಸಿಸಿ ಕಟ್ಟಡದ ಮೇಲ್ಭಾಗಕ್ಕೆ ಹೋಗಬೇಕಾದರೆ ಮೆಟ್ಟಿಲುಗಳ ವ್ಯವಸ್ಥೆ ಬೇಕು ಎಂಬ ಬೇಡಿಕೆ ಇದೆ. ಶಾಲಾ ಮಕ್ಕಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಟ್ಯಾಂಕ್ ಮೇಲ್ಭಾಗದಲ್ಲಿದ್ದು, ಮುಖ್ಯವಾಗಿ ಅವುಗಳನ್ನು ತೊಳೆಯುವುದಕ್ಕೆ ಮೇಲೆ ಹೋಗಲೇಬೇಕು. ಪ್ರಸ್ತುತ ಮೇಲೆ ಹೋಗುವುದಕ್ಕೆ ಸಾಕಷ್ಟು ಸಂಕಷ್ಟ ಪಡಬೇಕಿದೆ. ಹೀಗಾಗಿ ಮೆಟ್ಟಿಲು ನಿರ್ಮಿಸುವಂತೆ ಬೇಡಿಕೆ ಕೇಳಿಬರುತ್ತಿದೆ.
-ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.