ಅಂಬೇಡ್ಕರ್‌ ಭವನಕ್ಕೆ ಜಾಗ ಮಂಜೂರು


Team Udayavani, Mar 18, 2022, 3:00 AM IST

ಅಂಬೇಡ್ಕರ್‌ ಭವನಕ್ಕೆ ಜಾಗ ಮಂಜೂರು

ಪುತ್ತೂರು: ಜಿಲ್ಲಾ ಕೇಂದ್ರದ ನಿರೀಕ್ಷೆಯಲ್ಲಿರುವ ಪುತ್ತೂರಿನ ನಗರದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಸಂಬಂಧಿಸಿ ಜಮೀನು ಅಂತಿಮಗೊಳಿಸುವಿಕೆ ವಿಚಾರದಲ್ಲಿ ಉದ್ಭವಿಸಿರುವ ವಿವಾದದ ನಡುವೆಯೇ ಕಂದಾಯ ಇಲಾಖೆ ಬನ್ನೂರಿನಲ್ಲಿ ಗುರುತಿ ಸಲಾದ ಜಮೀನು ಮಂಜೂರುಗೊಳಿಸಿದೆ.

ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಸರಕಾರಿ ಆಸ್ಪತ್ರೆ ಬಳಿ ಮಂಜೂ ರಾಗಿದ್ದ 19 ಸೆಂಟ್ಸ್‌ ಜಾಗ ಬದಲಾಯಿಸಿ ಬನ್ನೂರು ಪ್ರಾದೇಶಿಕ ಸಾರಿಗೆ ಕಚೇರಿ ಪಕ್ಕದಲ್ಲಿ 75 ಸೆಂಟ್ಸ್‌ ಜಾಗ ಗುರುತು ಮಾಡಿರುವ ವಿಚಾರದಲ್ಲಿ ಕಳೆದ ಹಲವು ತಿಂಗಳಿನಿಂದ ದಲಿತ ಮುಖಂಡರ ಎರಡು ತಂಡ ಹಾಗೂ ಕಂದಾಯ ಇಲಾಖೆ ನಡುವೆಯೇ ಭಿನ್ನಾಭಿಪ್ರಾಯ ಕೇಳಿ ಬಂದಿತ್ತು.

ಹಗ್ಗಜಗ್ಗಾಟ :

ತಾಲೂಕು ಮಟ್ಟದ ಅಂಬೇಡ್ಕರ್‌ ಭವನದ ಕುರಿತ ಸ್ಥಳದ ಬಗ್ಗೆ ಇತ್ಯರ್ಥ ಆಗಬೇಕು. ಈ ಹಿಂದೆ ಸರಕಾರಿ ಆಸ್ಪತ್ರೆಯ ಬಳಿ ಮಂಜೂರು ಮಾಡಿರುವ 19 ಸೆಂಟ್ಸ್‌ ಜಾಗದಲ್ಲೇ ತಾಲೂಕು ಮಟ್ಟದ ಅಂಬೇಡ್ಕರ್‌ ಭವನ ನಿರ್ಮಾಣ ಆಗಬೇಕು ಎಂದು ದಲಿತ ಮುಖಂಡರ ಒಂದು ತಂಡ ವಾದಿಸಿದರೆ, ನಮಗೆ ಆಸ್ಪತ್ರೆಯ ಅನಿವಾರ್ಯತೆ ಇದೆ. ಹಾಗಾಗಿ 19 ಸೆಂಟ್ಸ್‌ ಜಾಗದ ಬದಲು ಬನ್ನೂರಿನಲ್ಲಿನ 75 ಸೆಂಟ್ಸ್‌ ಜಾಗ ಮಂಜೂರು ಮಾಡುವಂತೆ ಇನ್ನೊಂದು ತಂಡ ವಾದಿಸಿತು. ಹೈಟೆಕ್‌ ಆಸ್ಪತ್ರೆ ನಿರ್ಮಾಣಕ್ಕೆ ಸರಕಾರಿ ಆಸ್ಪತ್ರೆಯ ಸುತ್ತಮುತ್ತ ಇರುವ ಹಳೆ ತಾಲೂಕು ಕಚೇರಿ ಜಾಗ, ಸಬ್‌ರಿಜಿಸ್ಟ್ರಾರ್‌ ಕಚೇರಿಯನ್ನು ಸರಕಾರಿ ಆಸ್ಪತ್ರೆಗೆ ನೀಡಲಾಗಿದ್ದು ಹೀಗಾಗಿ ಬನ್ನೂರು ಜಾಗ ಸೂಕ್ತ ಎಂದು ಕಂದಾಯ ಇಲಾಖೆ ಅಭಿಪ್ರಾಯ ಪಟ್ಟಿತ್ತು. ಈ ವಿಚಾರ ಅಂತಿಮ ಹಂತಕ್ಕೆ ಬರಲು ಹಲವು ಸುತ್ತಿನ ಚರ್ಚೆಗಳು ನಡೆದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯೇ ಖುದ್ದಾಗಿ ಜಾಗ ಅಂತಿಮ ಗೊಳಿಸಿದೆ.

ಮಂಜೂರಾದ ಜಾಗ ರದ್ದು :

ಹಲವು ವರ್ಷಗಳ ಹಿಂದೆ ದಲಿತ ಸಂಘಟನೆಗಳ ನಿರಂತರ ಹೋರಾಟದ ಬಳಿಕ ಪುತ್ತೂರು ನಗರದ ಕೇಂದ್ರ ಭಾಗದಲ್ಲಿರುವ ಸರಕಾರಿ ಆಸ್ಪತ್ರೆಯ ಸಮೀಪದಲ್ಲೇ 19 ಸೆಂಟ್ಸ್‌ ಸ್ಥಳ ಅಂಬೇಡ್ಕರ್‌ ಭವನಕ್ಕಾಗಿ ಮಂಜೂರಾಗಿತ್ತು. ಭವನ ನಿರ್ಮಾಣಕ್ಕೆ 2 ಕೋ.ರೂ. ಅನುದಾನವನ್ನು ಕಾದಿರಿಸಲಾಗಿತ್ತು. ಕೆಲವು ಸಮಯದ ಹಿಂದೆ ಈ ಜಾಗವನ್ನು ಸರಕಾರಿ ಆಸ್ಪತ್ರೆಗೆ ನೋಂದಾಯಿಸಲಾಗಿದೆ. ಇದು ದಲಿತ ಮುಖಂಡರ ಆಕ್ರೋಶಕ್ಕೆ ಕಾರಣವಾಗಿತ್ತು.

ವ್ಯಕ್ತವಾಗದ ಸಹಮತ :  

ಕರ್ಮಲದಲ್ಲಿ ಅಂಬೇಡ್ಕರ್‌ ಭವನಕ್ಕೆ 25 ಸೆಂಟ್ಸ್‌ ಜಾಗ ಗುರುತಿಸಿದ್ದರೂ ಅದಕ್ಕೆ ಸಹಮತ ವ್ಯಕ್ತವಾಗಲಿಲ್ಲ. ಕೊನೆಗೆ ಬನ್ನೂರು ಜಾಗ ಗುರುತಿಸಿಲಾಗಿತ್ತು.

75 ಸೆಂಟ್ಸ್‌ ಜಮೀನು :

ನಗರದ ಬನ್ನೂರಿನ ಮೆಸ್ಕಾಂ ಕಚೇರಿಯ ಬಳಿ ಸರಕಾರಿ ಪಾರ್ಕ್‌ ನಿರ್ಮಾಣಕ್ಕೆ ಮೀಸಲಿಟ್ಟಿದ್ದ 75 ಸೆಂಟ್ಸ್‌ ಸ್ಥಳವನ್ನು ಅಂಬೇಡ್ಕರ್‌ ಭವನ ನಿರ್ಮಾಣಕ್ಕಾಗಿ ಮಂಜೂರು ಮಾಡಲಾಗಿದೆ. ಇದರ ಪಹಣಿಪತ್ರವು ಆಗಿದೆ. ನಗರ ಮಧ್ಯದಲಿದ್ದ 19 ಸೆಂಟ್ಸ್‌ ಸ್ಥಳ ಏನೇನೂ ಸಾಲದು. ಅದರ 3 ಪಟ್ಟಿಂಗಿತಲೂ ಅಧಿಕ ಜಮೀನು ಬನ್ನೂರಿನಲ್ಲಿ ಲಭ್ಯ ಇರುವ ಕಾರಣ ಅದನ್ನು ಒಪ್ಪಿಕೊಳ್ಳಲು ಅಡ್ಡಿಯಿಲ್ಲ ಎನ್ನುವುದು ಬನ್ನೂರಿನಲ್ಲಿ ಜಾಗದ ಪರ ಇರುವ ದಲಿತ ಮುಖಂಡರ ಅಭಿಪ್ರಾಯ. ಅವಿಭಜಿತ ಪುತ್ತೂರು ತಾಲೂಕಿನಲ್ಲಿ ಪರಿಶಿಷ್ಟ ಜಾತಿ, ಪಂಗಡದ ಸುಮಾರು 6 ಲಕ್ಷ ಜನರಿದ್ದು ಅವರ ಚಟುವಟಿಕೆಗಳಿಗೆ ಪೂರಕವಾಗಿ ಅಂಬೇಡ್ಕರ್‌ ಭವನ ಅನಿವಾರ್ಯವಾಗಿದೆ.

ಪಹಣಿಪತ್ರ ಮಾಡಲಾಗಿದೆ:

ಅಂಬೇಡ್ಕರ್‌ ಭವನಕ್ಕೆ ಬನ್ನೂರಿನಲ್ಲಿ 75 ಸೆಂಟ್ಸ್‌ ಜಾಗ ಮಂಜೂರುಗೊಳಿಸಿ ಪಹಣಿಪತ್ರ ಮಾಡಲಾಗಿದೆ. ಭವಿಷ್ಯದಲ್ಲಿ ಪುತ್ತೂರಿಗೆ ಸರಕಾರಿ ಮೆಡಿಕಲ್‌ ಕಾಲೇಜು ಮಂಜೂರಾದಲ್ಲಿ ಅದಕ್ಕೆ ಆವಶ್ಯಕತೆ ಇರುವುದನ್ನು ಮನಗಂಡು 19 ಸೆಂಟ್ಸ್‌ ಜಾಗವನ್ನು ತಾಲೂಕು ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಇದರಲ್ಲಿ ಬೇರೆ ಉದ್ದೇಶ ಇಲ್ಲ.ರಮೇಶ್‌ ಬಾಬು, ತಹಶೀಲ್ದಾರ್‌, ಪುತ್ತೂರು.

ಟಾಪ್ ನ್ಯೂಸ್

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

Gangolli

Puttur: ಗಾಯಾಳು ವಿದ್ಯಾರ್ಥಿನಿ ಸಾವು

1

Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

tractor

Farmers; ಶೂನ್ಯ ಬಡ್ಡಿಯ ಕೃಷಿ ಸಾಲಕ್ಕೆ ಬಡ್ಡಿ ಕಟ್ಟಲು ಸೂಚನೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.