ದ.ಕ.ದ 4 ಎಂಡೋ ಪಾಲನಾ ಕೇಂದ್ರಗಳಿಗೆ ಬಾರದ ಅನುದಾನ; ಕಾರ್ಯಾರಂಭ ಭಾಗ್ಯವಿಲ್ಲ

Team Udayavani, Jun 19, 2024, 6:45 AM IST

ದ.ಕ.ದ 4 ಎಂಡೋ ಪಾಲನಾ ಕೇಂದ್ರಗಳಿಗೆ ಬಾರದ ಅನುದಾನ; ಕಾರ್ಯಾರಂಭ ಭಾಗ್ಯವಿಲ್ಲ

ಬಂಟ್ವಾಳ: ಹಗಲಿನ ವೇಳೆ ಎಂಡೋಸಲ್ಫಾನ್‌ ಸಂತ್ರಸ್ತರ ಆರೈಕೆಗಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಮಂಜೂರಾಗಿರುವ ಒಟ್ಟು ನಾಲ್ಕು ಎಂಡೋ ಪಾಲನಾ ಕೇಂದ್ರಗಳ (ಡೇ ಕೇರ್‌ ಸೆಂಟರ್‌) ಕಟ್ಟಡಗಳು ಸಿದ್ಧಗೊಂಡು ವರ್ಷ ಕಳೆ ದರೂ ಅವುಗಳ ನಿರ್ವಹಣೆಗೆ ಸರ ಕಾರದಿಂದ ಅನುದಾನ ಮಂಜೂ ರಾಗಿಲ್ಲ. ಹೀಗಾಗಿ ಕೇಂದ್ರ ಗಳು ಕಾರ್ಯಾರಂಭ ಮಾಡಿಲ್ಲ.

ಜಿಲ್ಲೆಯಲ್ಲಿ ಎಂಡೋ ಸಂತ್ರಸ್ತರಿ ಗಾಗಿ ಶಾಶ್ವತ ಪುನರ್ವಸತಿ ಕೇಂದ್ರ ಬೇಕು ಎಂಬ ಬೇಡಿಕೆ ಹಲವು ವರ್ಷಗಳ ಹಿಂದಿನದು. ಅದಕ್ಕಾಗಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಪ್ರಸ್ತಾ ವನೆಯೂ ಸಲ್ಲಿಕೆಯಾಗಿದೆ. ಶಾಶ್ವತ ಕೇಂದ್ರಕ್ಕೆ ಬಹಳ ಹಿಂದೆಯೇ ಆಲಂಕಾರು ಹಾಗೂ ಕೊಕ್ಕಡ ದಲ್ಲಿ ಜಾಗ ಗುರುತಿಸಲಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ ಕಡಬದ ಕೊçಲ ಹಾಗೂ ಬೆಳ್ತಂಗಡಿಯ ಕೊಕ್ಕಡದಲ್ಲಿ 2 ಪಾಲನಾ ಕೇಂದ್ರಗಳು ಕಾರ್ಯಾಚರಿಸುತ್ತಿವೆ. 2 ವರ್ಷಗಳ ಹಿಂದೆ ಇನ್ನು 4 ಕೇಂದ್ರಗಳು ಮಂಜೂರಾಗಿವೆ.

ಬಂಟ್ವಾಳ ತಾಲೂಕಿನ ವಿಟ್ಲ, ಬೆಳ್ತಂಗಡಿಯ ಕಣಿಯೂರು, ಪುತ್ತೂರಿನಪಾಣಾಜೆ ಹಾಗೂ ಸುಳ್ಯದ ಬೆಳ್ಳಾರೆ -ಹೀಗೆ ಒಟ್ಟು ನಾಲ್ಕು ಎಂಡೋ ಪಾಲನಾ ಕೇಂದ್ರಗಳು ಮಂಜೂರಾಗಿದ್ದವು. ಕೇಂದ್ರಗಳ ಕಾರ್ಯಾಚರಣೆಗೆ ಕಟ್ಟಡಗಳು ಕೂಡ ಸಿದ್ಧಗೊಂಡಿವೆ.

ಸರಕಾರದ ಲೆಕ್ಕಾಚಾರದ ಪ್ರಕಾರ ಜಿಲ್ಲೆಯಲ್ಲಿ ಸುಮಾರು 4 ಸಾವಿರ ಎಂಡೋ ಸಂತ್ರಸ್ತರಿದ್ದಾರೆ. ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನ ಹೆಚ್ಚಿನ ಗ್ರಾಮಗಳು ಹಾಗೂ ಬಂಟ್ವಾಳದ ವಿಟ್ಲ ಭಾಗ ಮತ್ತು ಮಂಗಳೂರಿನ ಮೂಡುಬಿದಿರೆ ಭಾಗಗಳಲ್ಲಿ ಸಂತ್ರಸ್ತರ ಸಂಖ್ಯೆ ಹೆಚ್ಚಿದೆ ಎಂಬ ಮಾಹಿತಿ ಇದೆ. ಹೀಗಾಗಿ ಈ ಪ್ರದೇಶಗಳನ್ನು ಕೇಂದ್ರೀಕರಿಸಿ ಡೇ ಕೇರ್‌ ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

1.77 ಕೋ.ರೂ.ಗಳಲ್ಲಿ 4 ಕಟ್ಟಡ
ವಿಟ್ಲದಲ್ಲಿ 47 ಲಕ್ಷ ರೂ., ಕಣಿಯೂರಿನಲ್ಲಿ 20.91 ಲಕ್ಷ ರೂ., ಪಾಣಾಜೆಯಲ್ಲಿ 47.20 ಲಕ್ಷ ರೂ. ಹಾಗೂ ಬೆಳ್ಳಾರೆಯಲ್ಲಿ 62 ಲಕ್ಷ ರೂ. ಸಹಿತ ಆರೋಗ್ಯ ಇಲಾಖೆಯ ಎಂಜಿನಿಯರಿಂಗ್‌ ವಿಭಾಗದ ಮೂಲಕ ಸುಮಾರು 1.77 ಕೋ.ರೂ.ಗಳಲ್ಲಿ 4 ಕಟ್ಟಡಗಳನ್ನು ನಿರ್ಮಿಸಲಾಗಿದೆ. ಸಂತ್ರಸ್ತರ ವೈದ್ಯಕೀಯ ವ್ಯವಸ್ಥೆಯ ಅನುಕೂಲದ ದೃಷ್ಟಿಯಿಂದ ಸ್ಥಳೀಯ ಆರೋಗ್ಯ ಕೇಂದ್ರಗಳ ಆವರಣದಲ್ಲೇ ಕಟ್ಟಡ ನಿರ್ಮಾಣ ಮಾಡಲಾಗಿದೆ. ಜತೆಗೆ ಪ್ರತಿಯೊಂದು ಕೇಂದ್ರಕ್ಕೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಕಾರ್ಯ 2023ರ ನವೆಂಬರ್‌ಗಿಂತ ಮುನ್ನವೇ ನಡೆದಿದೆ.

ನಿರ್ವಹಣೆಗೆ 2-3 ಲಕ್ಷ ರೂ. ಅಗತ್ಯ
ಎಂಡೋ ಸಂತ್ರಸ್ತರನ್ನು ವಾಹನದ ಮೂಲಕ ಹಗಲು ಹೊತ್ತಿನಲ್ಲಿ ಪಾಲನಾ ಕೇಂದ್ರಕ್ಕೆ ಕರೆತಂದು ಸಂಜೆಯ ವರೆಗೆ ಆರೈಕೆ ಮಾಡಿ ರಾತ್ರಿ ಮತ್ತೆ ಮನೆಗೆ ಕರೆದುಕೊಂಡು ಹೋಗುವುದು ಕೇಂದ್ರದ ಉದ್ದೇಶ. ಈ ರೀತಿ ಕಾರ್ಯಾಚರಿಸುವ ಕೇಂದ್ರಗಳ ನಿರ್ವಹಣೆಗೆ ತಿಂಗಳಿಗೆ 2ರಿಂದ 3 ಲಕ್ಷ ರೂ. ಬೇಕಾಗುತ್ತವೆ.

ಕೇಂದ್ರಕ್ಕೆ ಸಿಬಂದಿ ನಿಯೋಜಿಸಿ ಮುನ್ನಡೆಸಿಕೊಂಡು ಹೋಗಲು ಎನ್‌ಜಿಒ ಸಂಸ್ಥೆಯನ್ನು ಆಯ್ಕೆ ಮಾಡುವ ದೃಷ್ಟಿಯಿಂದ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕಳೆದ ನವೆಂಬರ್‌ನಲ್ಲಿ ಆರೋಗ್ಯ ಇಲಾಖೆ ತಿಳಿಸಿತ್ತು. ಆದರೆ ಇನ್ನೂ ಸರಕಾರ ಅನುದಾನ ಬಿಡುಗಡೆ ಮಾಡದ ಕಾರಣ ಕೇಂದ್ರದ ಉದ್ದೇಶ ಈಡೇರಿಕೆ ಸಾಧ್ಯವಾಗಿಲ್ಲ.

-ದ.ಕ.ದಲ್ಲಿ ಪ್ರಸ್ತುತ 2 ಕೇಂದ್ರಗಳಿವೆ
-ನಾಲ್ಕು ಹೆಚ್ಚುವರಿ ಕೇಂದ್ರಗಳಿಗೆ ಕಟ್ಟಡ ಸಿದ್ಧ
-ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ
-ಅನುದಾನ ಲಭಿಸಿದರೆ ಕಾರ್ಯಾಚರಣೆಗೆ ಅನುವು

ಎಂಡೋ ಪಾಲನಾ ಕೇಂದ್ರಗಳ ಕಟ್ಟಡ ನಿರ್ಮಾಣ ಗೊಂಡಿದ್ದರೂ ನಿರ್ವಹಣೆಗೆ ಅನುದಾನ ಬಾರದೆ ಇರುವುದರಿಂದ ಕೇಂದ್ರಗಳ ಕಾರ್ಯಾರಂಭ ಸಾಧ್ಯವಾಗಿಲ್ಲ. ಬಜೆಟ್‌ ಮೂಲಕ ಅನುದಾನ ಮೀಸಲಿರಿಸಿ ಬಳಿಕ ಮಂಜೂರಾಗಬೇಕಿದ್ದು, ಈ ವರ್ಷದ ಯೋಜನೆಯಲ್ಲಿ ಅನು ದಾನ ಮೀಸಲಿಡುವ ಸಾಧ್ಯತೆ ಇದೆ.
-ಡಾ| ನವೀನ್‌ಚಂದ್ರ ಕುಲಾಲ್‌
ನೋಡಲ್‌ ಅಧಿಕಾರಿ, ಎಂಡೋಸಲ್ಫಾನ್‌ ಕೋಶ, ದ.ಕ. ಜಿಲ್ಲೆ

-ಕಿರಣ್‌ ಸರಪಾಡಿ

ಟಾಪ್ ನ್ಯೂಸ್

T20 World Cup ಗೆದ್ದ ಧನ್ಯತೆಯಲ್ಲಿ ಬಾರ್ಬಡೋಸ್ ಪಿಚ್ ಮಣ್ಣು ತಿಂದ ರೋಹಿತ್ ಶರ್ಮಾ

T20 World Cup ಗೆದ್ದ ಧನ್ಯತೆಯಲ್ಲಿ ಬಾರ್ಬಡೋಸ್ ಪಿಚ್ ಮಣ್ಣು ತಿಂದ ರೋಹಿತ್ ಶರ್ಮಾ

T20 WC; This is my luck…..: Coach Rahul Dravid

T20 WC; ಇದು ನನ್ನ ಅದೃಷ್ಟ…..: ಟ್ರೋಫಿಯೊಂದಿಗೆ ಟೀಂ ಇಂಡಿಯಾ ತೊರೆದ ಕೋಚ್ ದ್ರಾವಿಡ್ ಮಾತು

T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ

T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ

2-kushtagi

Kushtagi: ಮನೆ ಮುಂದೆ ನಿಲ್ಲಿಸಿದ್ದ ದ್ವಿ ಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

1-24-sunday

Daily Horoscope: ಶನಿ ಪ್ರಭಾವದಿಂದ ಕಾರ್ಯ ವಿಳಂಬವಾದರೂ ಕ್ರಿಯೆಗೆ ವಿರಾಮ ಇರದು

Madikeri ಸೆ.15ರ ವರೆಗೆ “ಗಾಜಿನ ಸೇತುವೆ’ ವೀಕ್ಷಣೆ ಸ್ಥಗಿತ : ಜಿಲ್ಲಾಧಿಕಾರಿ ಸೂಚನೆ

Madikeri ಸೆ.15ರ ವರೆಗೆ “ಗಾಜಿನ ಸೇತುವೆ’ ವೀಕ್ಷಣೆ ಸ್ಥಗಿತ : ಜಿಲ್ಲಾಧಿಕಾರಿ ಸೂಚನೆ

Train ವಂದೇ ಭಾರತ್‌ ಟಿಕೆಟ್‌ ದರ ಇಳಿಕೆ: ಸೋಮಣ್ಣ

Train ವಂದೇ ಭಾರತ್‌ ಟಿಕೆಟ್‌ ದರ ಇಳಿಕೆ: ಸೋಮಣ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sullia ವಿದೇಶದಿಂದ ಬರಲು ಯುವಕನಿಗೆ ನೆರವಾದ ಸಂಸದ ಬ್ರಿಜೇಶ್‌ ಚೌಟ

Sullia ವಿದೇಶದಿಂದ ಬರಲು ಯುವಕನಿಗೆ ನೆರವಾದ ಸಂಸದ ಬ್ರಿಜೇಶ್‌ ಚೌಟ

ತೀವ್ರವಾಗಿ ಉದುರುತ್ತಿದೆ ಎಳೆ ಅಡಿಕೆ

ತೀವ್ರವಾಗಿ ಉದುರುತ್ತಿದೆ ಎಳೆ ಅಡಿಕೆ; ಕೃಷಿಕರಲ್ಲಿ ಆತಂಕ

Patla Betta; ಅರಣ್ಯದ ರಸ್ತೆ ಬಗ್ಗೆ ವರದಿ ಕೇಳಿದ ಸಚಿವ ಈಶ್ವರ ಖಂಡ್ರೆ

Patla Betta; ಅರಣ್ಯದ ರಸ್ತೆ ಬಗ್ಗೆ ವರದಿ ಕೇಳಿದ ಸಚಿವ ಈಶ್ವರ ಖಂಡ್ರೆ

Uppinangady ಸರಣಿ ಅಪಘಾತ: ಎರಡು ಬಸ್‌, ಟೆಂಪೋ ಢಿಕ್ಕಿ

Uppinangady ಸರಣಿ ಅಪಘಾತ: ಎರಡು ಬಸ್‌, ಟೆಂಪೋ ಢಿಕ್ಕಿ

Sullia ಪಂಜ: ಮಣ್ಣಿನಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆ

Sullia ಪಂಜ: ಮಣ್ಣಿನಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

T20 World Cup ಗೆದ್ದ ಧನ್ಯತೆಯಲ್ಲಿ ಬಾರ್ಬಡೋಸ್ ಪಿಚ್ ಮಣ್ಣು ತಿಂದ ರೋಹಿತ್ ಶರ್ಮಾ

T20 World Cup ಗೆದ್ದ ಧನ್ಯತೆಯಲ್ಲಿ ಬಾರ್ಬಡೋಸ್ ಪಿಚ್ ಮಣ್ಣು ತಿಂದ ರೋಹಿತ್ ಶರ್ಮಾ

T20 WC; This is my luck…..: Coach Rahul Dravid

T20 WC; ಇದು ನನ್ನ ಅದೃಷ್ಟ…..: ಟ್ರೋಫಿಯೊಂದಿಗೆ ಟೀಂ ಇಂಡಿಯಾ ತೊರೆದ ಕೋಚ್ ದ್ರಾವಿಡ್ ಮಾತು

T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ

T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ

2-kushtagi

Kushtagi: ಮನೆ ಮುಂದೆ ನಿಲ್ಲಿಸಿದ್ದ ದ್ವಿ ಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

1-24-sunday

Daily Horoscope: ಶನಿ ಪ್ರಭಾವದಿಂದ ಕಾರ್ಯ ವಿಳಂಬವಾದರೂ ಕ್ರಿಯೆಗೆ ವಿರಾಮ ಇರದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.