ಅಪಾಯದ ಅಂಚಿನಲ್ಲಿ ಗುರುವಾಯನಕೆರೆ ರಸ್ತೆ
Team Udayavani, Nov 14, 2018, 1:37 PM IST
ಉಪ್ಪಿನಂಗಡಿ: ನಿರ್ವಹಣೆ ಇಲ್ಲದೆ ಅಪಾಯದ ಅಂಚಿನಲ್ಲಿ ಗುರುವಾಯನಕೆರೆ ರಸ್ತೆ ಇದೆ. ಸರಕಾರವು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ 5 ಕೋ.ರೂ. ವೆಚ್ಚದಲ್ಲಿ 19 ಕಿ.ಮೀ. ರಸ್ತೆ ವಿಸ್ತರಣೆ ನಡೆಸಿತ್ತು. ಕಾಮಗಾರಿ ಮುಗಿದ ಮೂರು ವರ್ಷಗಳ ಕಾಲ ನಿರ್ವಹಣೆ ಹೊಣೆಯನ್ನೂ ಗುತ್ತಿಗೆದಾರರಿಗೆ ವಹಿಸಲಾಗಿದೆ. ಆದರೆ ಮಳೆಗಾಲ ಮುಗಿದರೂ ನಿರ್ವಹಣೆ ಮಾತ್ರ ಬಾಕಿ ಉಳಿದಿದೆ. ರಸ್ತೆಗಳ ಮಧ್ಯೆ ಹೊಂಡಗಳು ನಿರ್ಮಾಣವಾಗಿ ದ್ವಿಚಕ್ರ ಸವಾರರು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದರು.
ಇಳಂತಿಲ ಗ್ರಾಮದ ನೇಜಿಕಾರ ಬಳಿಯ ತಿರುವೊಂದರ ಮೋರಿ ಬಳಿ ವಿಸ್ತರಣೆ ನಡೆಸಿ ಮೋರಿಯ ಬದಿಯಲ್ಲಿ ಮಣ್ಣು ಸಹ ತುಂಬಿಸದೆ ಬಿಟ್ಟಿದ್ದಾರೆ. ಸಂಬಂಧಪಟ್ಟವರು ಇತ್ತ ಗಮನಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಿರ್ವಹಣೆ ಅಗತ್ಯ
ಯಾವುದೇ ಯೋಜನೆಯ ಕಾಮಗಾರಿ ಸಮರ್ಪಕವಾಗಿ ಮುಗಿಸಿ ನಿರ್ವಹಣೆ ನಡೆಸುವುದು ಅತೀ ಮುಖ್ಯ. ನಿರ್ವಹಣೆ ಸರಿಯಾಗಿಲ್ಲದಿದ್ದಲ್ಲಿ ಸಣ್ಣ ಹೊಂಡಗಳು ದೊಡ್ಡದಾಗಿ ಪರಿವರ್ತನೆಯಾಗುತ್ತವೆ.
– ಇಸುಬು ಪೆದಮಲೆ
ಇಳಂತಿಲ ಗ್ರಾ.ಪಂ. ಅಧ್ಯಕ್ಷರು
ಗುತ್ತಿಗೆದಾರರಿಗೆ ಸೂಚಿಸುವೆ
ರಸ್ತೆ ಕಾಮಗಾರಿ ಮುಗಿದು ಎರಡು ವರ್ಷಗಳಾಗಿದ್ದರೂ ಈ ಬಾರಿಯ ಮಳೆಯಿಂದ ಹೊಂಡಗಳು ಬಿದ್ದಿರುವ ಕುರಿತು ಗಮನಕ್ಕೆ ಬಂದಿದೆ. ತತ್‌ಕ್ಷಣವೇ ಗುತ್ತಿಗೆದಾರರಿಗೆ ನಿರ್ವಹಣೆ ನಡೆಸಲು ಸೂಚಿಸುವೆ.
– ಶಿವಪ್ರಸಾದ್ ಅಜ್ರಿ
ಪಿಡಬ್ಲ್ಯೂಡಿ ಸಹಾಯಕ ಎಂಜಿನಿಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.