Harish Poonja: ಜನರ ಬಳಿಗೆ ಆಡಳಿತ ವ್ಯವಸ್ಥೆ ತಲುಪಿಸುವ ಉದ್ದೇಶ
ಶಾಸಕರಿಂದ ನಾರಾವಿ ಗ್ರಾ.ಪಂ. ಮಟ್ಟದ ಜನಸ್ಪಂದನ ಸಭೆ
Team Udayavani, Dec 8, 2024, 1:01 PM IST
ಬೆಳ್ತಂಗಡಿ: ಜನರ ಬಳಿಗೆ ಆಡಳಿತ ಎಂಬ ಕಲ್ಪನೆ ರಾಜ್ಯದಲ್ಲೇ ಇದು ಮೊದಲಾಗಿದ್ದು, ಪ್ರತೀ ಗ್ರಾ.ಪಂ.ಗೆ ಅಧಿಕಾರಿ ವರ್ಗವೇ ತೆರಳಿ ಕಡತ ವಿಲೇವಾರಿ ಮಾಡಬೇಕೆಂಬ ಚಿಂತನೆಯಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಡಿ.7 ರಂದು ನಾರಾವಿ ಶ್ರೀ ವೇಣು ಗೋಪಾಲ ಕೃಷ್ಣ ಸಭಾಭವನದಲ್ಲಿ ಹಮ್ಮಿ ಕೊಂಡ ನಾರಾವಿ ಗ್ರಾ.ಪಂ. ಮಟ್ಟದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಕ್ರಮ ಸಕ್ರಮ ಅರ್ಜಿಯನ್ನು ತಕ್ಷಣವೇ ವಿಲೇವಾರಿ ಮಾಡುವಲ್ಲಿ ಕಂದಾಯ ಸಚಿವ ಕೃಷ್ಣೇ ಗೌಡರು ಆ್ಯಪ್ ಹೊರತಂದಿದ್ದು, ಅದರಲ್ಲಿ ಅನೇಕ ದೋಷಗಳಿರುವುದರಿಂದ ಅದರ ಪರಿಷ್ಕರಣೆಗೂ ಮನವಿ ಮಾಡಲಾ ಗಿದೆ. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ವಿದ್ಯುತ್ ಇಲ್ಲದ ಮನೆಗಳಿಗೆ ತತ್ಕ್ಷಣವೇ ಎಫ್. ಸಿ.ಆ್ಯಕ್ಟ್ ನಡಿ ಅನುಮತಿ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಮಲೆಕುಡಿಯರಿಗೆ ಸಿಗದ ಆಶ್ರಯ
ನೂಜೋಡಿ ಉಮೇಶ್ ಮಾತನಾಡಿ, 25 ಮಲೆಕುಡಿಯ ಕುಟುಂಬಗಳು ಅರಣ್ಯ ತೊರೆದು ಸರಕಾರದ ಜಾಗವಾದ ನೂಜೋಡಿ ಯಲ್ಲಿ ವಾಸಿಸುತ್ತಿದೆ. ಅಕ್ರಮ ಸಕ್ರಮಕ್ಕಾಗಿ 1998ರಿಂದ ಅರ್ಜಿ ಸಲ್ಲಿಸಲಾಗಿದೆ. ಅರಣ್ಯ ಹಾಗೂ ಕಂದಾಯ ಸಮಜಾಯಿಸಿ ನೀಡುತ್ತಿದೆ. ಶಾಸಕರು ಪ್ರತಿಕ್ರಿಯಿಸಿ ಸ್ಥಳ ತನಿಖೆ ಮಾಡಿ ವಾಸ್ತವ ಸ್ಥಿತಿ ತಿಳಿಯೋಣ ಎಂದು ಹೇಳಿದರು.
ನಾರಾವಿ ಗ್ರಾ.ಪಂ. ಅಧ್ಯಕ್ಷ ರಾಜವರ್ಮ, ಉಪಾಧ್ಯಕ್ಷೆ ಸುಮಿತ್ರಾ, ತಹಶೀಲ್ದಾರ್ ಪೃಥ್ವಿ ಸಾನಿಕಂ, ಸಿಡಿಪಿಒ ಪ್ರಿಯಾ ಆಗ್ನೆಸ್, ಪ್ರಭಾರ ಶಿಕ್ಷಣಾಧಿಕಾರಿ ವೆಂಟೇಶ್ ತುಳುಪುಳೆ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಸಿ.ಎಚ್., ಜೋಸೆಫ್ ಸಹಿತ ಎಲ್ಲ ಇಲಾಖೆ ಮಟ್ಟದ ಅ ಧಿಕಾರಿಗಳು ಉಪಸ್ಥಿತರಿದ್ದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಸ್ವಾಗತಿಸಿದರು. ಗ್ರಾ.ಪಂ. ಸಿಬಂದಿ ಸತೀಶ್ ನಿರೂಪಿಸಿದರು.
ಗ್ರಾಮಸ್ಥರ ಪ್ರಮುಖ ಬೇಡಿಕೆಗಳು
-ನಾರಾವಿ ಆಸ್ಪತ್ರೆ ಮೇಲ್ದರ್ಜೆಗೇರಿಸಿ ವೈದ್ಯರ ಕೊರತೆ ನೀಗಿಸಿ. ವಾರ ಪೂರ್ತಿ ಮಧುಮೇಹ ಪರೀಕ್ಷೆಗೆ ವ್ಯವಸ್ಥೆ ಮಾಡಿ.
-ಪಶು ಇಲಾಖೆಗೆ ವೈದ್ಯರನ್ನು ನೇಮಿಸಿ : ವಸಂತ ನಾರಾವಿ
-ಮಾಹಿತಿ ನೀಡದೆ ವಿದ್ಯುತ್ ಸರಬರಾಜು ಕಡಿತ ಮಾಡಬೇಡಿ
-ಮುರುವಾಜೆ ಜನರಿಗೆ ಸೇತುವೆ ಕಲ್ಪಿಸಿ: ಸಂತೋಷ್ ಕುತ್ಲೂರು
-ಪಡಿತರ ಚೀಟಿಯಿಲ್ಲದೆಸೌಲಭ್ಯ ದೊರೆಯುತ್ತಿಲ್ಲ;ಕ್ರಮ ವಹಿಸಿ
-ಸೋಲಾರ್ ಸೌಲಭ್ಯ ಆಗಬೇಕು
-ಶಾಲೆಗಳಿಗೆ ಶೌಚಾಲಯ ಒದಗಿಸಲು ಆಗ್ರಹ
-ಹಲವು ರಸ್ತೆಗಳ ನಿರ್ವಹಣೆಗೆ ಆಗ್ರಹ
-ಜೆಜೆಎಂ ನಡಿ ನೀರಿನ ಸಂಪರ್ಕ ಕೂಡಲೇ ಒದಗಿಸಿ
ನಿವೇಶನ ಅರ್ಜಿಗಳು ಫಲಪ್ರದವಾಗಿಲ್ಲ
ಉದಯ್ ಹೆಗ್ಡೆ ನಾರಾವಿ ಮಾತನಾಡಿ, ಗ್ರಾ.ಪಂ. ವ್ಯಾಪ್ತಿಯಲ್ಲಿ 5 ಕಡೆ ನಿವೇಶನ ಮೀಸಲಿರಿಸಲಾಗಿದೆ. ಒಟ್ಟು 380 ಅರ್ಜಿ ಬಂದಿವೆ. ಕಳೆದ ಒಂದೂವರೆ ವರ್ಷದಿಂದ ನಿವೇಶನ ಹಂಚಿಕೆಗಾಗಿ ಅರ್ಜಿ ಸಲ್ಲಿಸುತ್ತಾ ಬಂದಿದ್ದೇವೆ. ಸ್ಥಳ ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಎರಡೂವರೆ ಸೆಂಟ್ಸ್ ಬದಲು 6 ಸೆಂಟ್ಸ್ ಸ್ಥಳ ಒದಗಿಸಬೇಕು ಎಂದಾಗ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯಲಾಗುವುದು ಎಂದು ಶಾಸಕರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್ ರಗಳೆ
German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್ ಶೆಫರ್ಡ್ ನಾಯಿ ಕೊಂದ!
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.