ಬಳ್ಕುಂಜೆ ಕಬ್ಬಿಗೆ ಭಾರೀ ಬೇಡಿಕೆ, ಉತ್ತಮ ಬೆಲೆಯಿಂದ ಬೆಳೆಗಾರನಿಗೆ ಸಂತಸ
ಗಣೇಶ ಚತುರ್ಥಿ ಹಬ್ಬಕ್ಕೆ ಸಿದ್ಧತೆ
Team Udayavani, Aug 25, 2022, 10:27 AM IST
ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಬಳ್ಕುಂಜೆ, ಕರ್ನಿರೆಯಲ್ಲಿ 15 ಎಕರೆಗಿಂತ ಹೆಚ್ಚಿನ ಪ್ರದೇಶದಲ್ಲಿ 54 ಬೆಳೆಗಾರರು ಸುಮಾರು 3 ಲಕ್ಷ ಕ್ಕೂ ಮಿಕ್ಕಿ ಬೆಳೆದ ಕಬ್ಬಿಗೆ ಈ ಬಾರಿ ಭಾರೀ ಬೇಡಿಕೆ ಬಂದಿದೆ. ಉತ್ತಮ ಬೆಲೆ ದೊರೆತು ಕಬ್ಬು ಬೆಳೆಗಾರರು ಸಂತಸದಲ್ಲಿದ್ದಾರೆ. ಇದಕ್ಕೆ ಕಾರಣ ಕಬ್ಬು ಬೆಳೆಗಾರರು ಸಂಘಟಿತರಾಗಿರುವುದು.
ಬಳ್ಕುಂಜೆಯ ಶಾಂಭವಿ ನದಿ ತಟದಲ್ಲಿರುವ ಮರಳು ಮಿಶ್ರಿತ ಕೆಂಪು ಹಾಗೂ ಕಪ್ಪು ಮಣ್ಣು ಇಲ್ಲಿ ಬೆಳೆಯುವ ಕಬ್ಬಿನ ಸವಿಯ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಕಾರಣದಿಂದ ಇಲ್ಲಿನ ಕಬ್ಬು ಬೆಳೆಗಾರರು ನಷ್ಟ ಅನುಭವಿಸಿದ್ದರು. ಮಾರಾಟವಾಗದೆ ಉಳಿದಾಗ ಕೆಲವರು ಮಾನವೀಯತೆಯಿಂದ ಖರೀದಿಸಿದ್ದರು. ಇದನ್ನು ಮನಗಂಡು ಸುಮಾರು 30 ಮಂದಿ ಕಬ್ಬು ಬೆಳೆಗಾರರು ಸಂಘಟಿತರಾಗಿ ದರ ನಿಗದಿ ಮಾಡಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಯಿತು.
ಪ್ರತೀ ವರ್ಷ ನವೆಂಬರ್‌ನಲ್ಲಿ ಬೆಳೆ ಪ್ರಾರಂಭ
ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಬೀಜ ಹಾಕಿ ಬೆಳೆ ಪ್ರಾರಂಭಿಸಿ ಆಗಸ್ಟ್ , ಸೆಪ್ಟಂಬರ್ ಕಟಾವಿನ ವರೆಗೆ ಬೆಳೆಗಾಗಿ ರೈತ ಸಾಕಷ್ಟು ಕಷ್ಟ ಪಡುತ್ತಾನೆ. ಜೂನ್‌ನಲ್ಲಿಯೇ ವ್ಯಾಪಾರಿಗಳು ಬಂದು ಮುಂಗಡ ಹಣ ಕೊಟ್ಟು ಹೋಗುತ್ತಾರೆ. ಈ ಬಾರಿ ಒಂದು ಕಪ್ಪು ಕಬ್ಬಿಗೆ ಸುಮಾರು 24ರಿಂದ ಬಿಳಿ ಕಬ್ಬಿಗೆ 26 ರೂಪಾಯಿ ಬೆಲೆ ಸಿಕ್ಕಿದೆ.
ಕಳೆದ 30 ವರ್ಷದಿಂದ ಕಬ್ಬು ಬೆಳೆಯಲಾಗುತ್ತಿದೆ. ಪ್ರತೀ ವರ್ಷ ಜೂನ್ ತಿಂಗಳಿನಲ್ಲಿ ಕಬ್ಬು ಮಾರಾಟಗಾರರು ಮುಂಗಡವಾಗಿ ಕೊಟ್ಟು ಕಬ್ಬು ಖರೀದಿಸುತ್ತಿದ್ದಾರೆ ಎನ್ನುತ್ತಾರೆ ಕಬ್ಬು ಬೆಳೆಗಾರರ ಎಲಿಯಾಸ್ ಡಿ’ಸೋಜಾ ಬಳ್ಕುಂಜೆ.
ದ. ಕ., ಉಡುಪಿ ಜಿಲ್ಲೆಯಲ್ಲಿ ಬೇಡಿಕೆ
ಮಂಗಳೂರು, ಪುತ್ತೂರು, ಉಡುಪಿ, ಬಂಟ್ವಾಳ, ಕಡಬ, ನೆಲ್ಯಾಡಿ, ಕಾರ್ಕಳದ ಇಪ್ಪತೈದಕ್ಕೂ ಹೆಚ್ಚು ಚರ್ಚ್‌ಗಳಿಗೆ ಬಳುRಂಜೆಯಿಂದಲೇ ಕಬ್ಬನ್ನು ನೀಡುತ್ತಿದ್ದೇವೆ ಇನ್ನೂ ಕೆಲವು ಕಡೆಗಳಿಂದ ಬೇಡಿಕೆ ಬಂದಿದೆ. ಭತ್ತದ ಬೆಳೆ ಹಾಗೂ ಕಬ್ಬು ಅನ್ನು ಪರ್ಯಾಯ ಬೆಳೆಯಾಗಿ ಬೆಳೆಸುತ್ತೇವೆ. ಈ ವರ್ಷ ಕಬ್ಬು ಬೆಳೆದ ಗದ್ದೆಯಲ್ಲಿ ಮುಂದಿನ ವರ್ಷ ಭತ್ತ ಬೆಳೆಯುತ್ತೇವೆ. ಹಾಗಾಗಿ ಎರಡೂ ಬೆಳೆ ಸಮೃದ್ಧವಾಗಿ ಬೆಳೆಯುತ್ತವೆ. ಕಳೆದ ನಲವತ್ತು ವರುಷಗಳಿಂದ ಕಬ್ಬು ಬೆಳೆಯಲಾಗುತ್ತಿದೆ ಎನ್ನುತ್ತಾರೆ ಕಬ್ಬು ಬೆಳೆಗಾರ ರಿಚರ್ಡ್ ಡಿ’ಸೋಜಾ.
–ರಘುನಾಥ ಕಾಮತ್ ಕೆಂಚನಕೆರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.