4.34 ಲಕ್ಷ ರೂ. ಪರಿಹಾರ ವಿತರಣೆ
ಬೆಳ್ತಂಗಡಿ ತಾಲೂಕಿನಲ್ಲಿ ಮಳೆ ಹಾನಿ
Team Udayavani, Jul 25, 2019, 5:00 AM IST
ಬೆಳ್ತಂಗಡಿ: ತಾಲೂಕಿನಾದ್ಯಂತ ಎಪ್ರಿಲ್ 2019ರಿಂದ ಜುಲೈ ತಿಂಗಳವರೆಗೆ ಸುಮಾರು 119 ಮಳೆ ಹಾನಿ ಪ್ರಕರಣ ಗಳು ವರದಿಯಾಗಿವೆ. ಕಚ್ಚಾಮನೆ ತೀವ್ರ ಹಾನಿ, ಕೊಟ್ಟಿಗೆ, ಕೃಷಿ ತೋಟ ಹಾನಿ ಪ್ರಕರಣಗಳು ವರದಿ ಯಾಗಿದ್ದು, ಬಹುತೇಕ ಪ್ರಕರಣಗಳಿಗೆ ಸ್ಥಳದಲ್ಲೇ ಪರಿಹಾರ ಸಹಿತ ತಾಲೂಕಿನ 119 ಪ್ರಕರಣಗಳಿಗೆ 4,34,685 ರೂ. ಪರಿಹಾರ ವಿತರಿಸಲಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.
ಸಣ್ಣಪುಟ್ಟ ಪ್ರಕರಣಗಳಾದಲ್ಲಿ ಕಂದಾಯ ನಿರೀಕ್ಷರು ಹಾಗೂ ಗ್ರಾಮ ಲೆಕ್ಕಿಗರು ಸ್ಥಳಕ್ಕೆ ಭೇಟಿ ನೀಡಿ ಹಾನಿ ಕುರಿತು ವರದಿ ಸಲ್ಲಿಸಿದ ಎರಡು ದಿನಗಳೊಳಗಾಗಿ ಪರಿಹಾರ ವಿತರಿಸಲಾಗುತ್ತಿದೆ. ಉಳಿದಂತೆ ಕಚ್ಚಾ ಮನೆ ತೀವ್ರ ಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಖುದ್ದು ಭೇಟಿ ಮಾಡಿ ಸ್ಥಳದಲ್ಲೇ ಪರಿಹಾರ ಒದಗಿಸಲಾಗುತ್ತಿದೆ.
ಕಳೆದ ಬಾರಿ 655 ಪ್ರಕರಣ
ಕಳೆದ ಮಳೆಗಾಲದಲ್ಲಿ ಸುಮಾರು 655 ಪ್ರಕರಣ ದಾಖಲಾಗಿದ್ದು, 74 ಲಕ್ಷ ರೂ. ವಿತರಿಸಲಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ತೋಟಗಾರಿಕೆ ಇಲಾಖೆಯು ತಾ|ನ ಅಡಿಕೆ ಬೆಳೆ ನಷ್ಟದ ಕುರಿತು ಸಮೀಕ್ಷೆ ನಡೆಸಿದಾಗ 12,168 ಬೆಳೆಗಾರರು ಅರ್ಜಿ ಸಲ್ಲಿಸಿದ್ದರು. ಈ ಪ್ರಕಾರ 189 ಪ್ರಕರಣಗಳಿಗೆ ಸಂಬಂಧಿಸಿ 5,68,753 ರೂ. ಪರಿಹಾರ ವಿತರಿಸಲಾಗಿತ್ತು.
119 ಪ್ರಕರಣ ವರದಿ
ಎಪ್ರಿಲ್‌ನಿಂದ ಜು.18ರ ವರೆಗೆ 119 ಪ್ರಕರಣಗಳು ವರದಿಯಾಗಿವೆ. ಅಡಿಕೆ ಕೃಷಿ ಹಾನಿ-30 ಪ್ರಕರಣಕ್ಕೆ 68,680 ರೂ. ಪರಿಹಾರ ವಿತರಿಸಲಾಗಿದೆ. ಕಚ್ಚಾಮನೆ ತೀವ್ರ ಹಾನಿ-2 ಪ್ರಕರಣಕ್ಕೆ 65,000 ರೂ., ಪಕ್ಕಾಮನೆ ತೀವ್ರ ಹಾನಿ-2 ಪ್ರಕರಣಕ್ಕೆ 91,500 ರೂ., ಕಚ್ಚಾಮನೆ ಭಾಗಶಃ ಹಾನಿ -26 ಪ್ರಕರಣಕ್ಕೆ 82,330 ರೂ., ಪಕ್ಕಾಮನೆ ಭಾಗಶಃ ಹಾನಿ-12 ಪ್ರಕರಣಕ್ಕೆ 59,975 ರೂ. ಪರಿಹಾರ ವಿತರಿಸಲಾಗಿದೆ.
ಕೊಟ್ಟಿಗೆ ಹಾನಿ-3 ಪ್ರಕರಣಕ್ಕೆ 6,300, ಸಿಡಿಲು ಬಡಿದು 2 ಹಸು ಸಾವಿಗೀಡಾಗಿದ್ದು, ತಲಾ 30,000ರಂತೆ 60,000 ರೂ. ವಿತರಿಸಲಾಗಿದ್ದು, ಈವರೆಗೆ ಒಟ್ಟು 4,34,685 ರೂ. ವಿತರಣೆಯಾಗಿದೆ. ಉಜಿರೆ ಗ್ರಾಮದಲ್ಲಿ ಕಾರಿನ ಮೇಲೆ ಮರ ಬಿದ್ದ ಒಂದು ಪ್ರಕರಣ ದಾಖಲಾಗಿದೆ. ಉಳಿದಂತೆ ಬಹುತೇಕ ಮನೆ ಹಾನಿ ಪ್ರಕರಣವೇ ದಾಖಲಾಗಿದೆ. ಶಾರ್ಟ್ ಸರ್ಕ್ನೂಟ್‌ನಿಂದ, ಗಾಳಿಮಳೆಗೆ ಅಡಿಕೆ, ರಬ್ಬರ್, ತೆಂಗು ತೋಟ ಹಾನಿಗಳು ಸಂಭವಿಸಿವೆ. ಪರಿಹಾರ ವಿತರಣೆ ಹೊರತಾಗಿ ಕಂದಾಯ ಇಲಾಖೆಯಲ್ಲಿ 31 ಲಕ್ಷ ರೂ. ಉಳಿಕೆ ಪರಿಹಾರ ಮೊತ್ತವಿದೆ.
ಅಧಿಕಾರಿಗಳಿಂದ ಮುತುವರ್ಜಿ
ಗಾಳಿ-ಮಳೆಯಿಂದ ಗಂಭೀರ ಹಾನಿಗಳಾದಲ್ಲಿ ಸ್ಥಳದಲ್ಲೇ ಪರಿಹಾರ ವಿತರಿಸಲಾಗುತ್ತಿದೆ. ಈಗಾಗಲೇ ರೂ. 4 ಲಕ್ಷಕ್ಕೂ ಹೆಚ್ಚು ಮೊತ್ತದ ಪರಿಹಾರ ವಿತರಿಸಲಾಗಿದೆ. ವಿಎ, ಆರ್.ಐ.ಗಳು ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟ ವರದಿ ನೀಡುವಲ್ಲಿ ಮುತುವರ್ಜಿ ವಹಿಸುತ್ತಿದ್ದಾರೆ. 2 ದಿನಗಳೊಳಗಾಗಿ ಸಣ್ಣಪುಟ್ಟ ಪ್ರಕರಣಗಳಿಗೂ ಪರಿಹಾರ ವಿತರಿಸಲಾಗುತ್ತದೆ.
- ಗಣಪತಿ ಶಾಸ್ತ್ರಿ, ತಹಶೀಲ್ದಾರ್
- ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.