ಬೆಳ್ತಂಗಡಿ, ಬಂಟ್ವಾಳ: ಧಾರಾಕಾರ ಮಳೆ
Team Udayavani, Oct 5, 2018, 2:50 PM IST
ಬೆಳ್ತಂಗಡಿ: ಬೆಳ್ತಂಗಡಿ ನಗರ ಸೇರಿದಂತೆ ತಾಲೂಕಿನ ಬಹುತೇಕ ಕಡೆಗಳಲ್ಲಿ ಗುರುವಾರ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನ ಆರಂಭಗೊಂಡ ಮಳೆ ಸಂಜೆವರೆಗೂ ಮುಂದುವರಿದಿದ್ದು, ನಗರದಲ್ಲಿ ಸಂಪೂರ್ಣ ಮೋಡದಿಂದ ಆವರಿಸಿ ಕತ್ತಲ ವಾತಾವರಣವಿತ್ತು. ಮಳೆಯ ಜತೆಗೆ ಸಿಡಿಲಿನ ಆರ್ಭಟವೂ ಇತ್ತು. ದುರಸ್ತಿಯ ಹಿನ್ನೆಲೆಯಲ್ಲಿ ವಿದ್ಯುತ್ ಕೂಡ ಕಡಿತಗೊಂಡಿದ್ದ ಹಿನ್ನೆಲೆಯಲ್ಲಿ ಮೋಡದ ಪರಿಣಾಮ ಅಂಗಡಿ ಮುಂಗಟ್ಟುಗಳಲ್ಲೂ ಕತ್ತಲೆ ಆವರಿಸಿತ್ತು.
ಬಂಟ್ವಾಳ ಭಾರೀ ಮಳೆ
ಬಂಟ್ವಾಳ ಅ.4: ಗುರುವಾರ ಸಂಜೆ ಗುಡುಗು ಸಹಿತ ಭಾರೀ ಮಳೆಯಾಗಿದ್ದು ಬಿ.ಸಿ.ರೋಡ್‌ನಲ್ಲಿ ಹಲವು ಅಂಗಡಿಗಳಿಗೆ ನೀರು ನುಗ್ಗಿದೆ. ಬಸ್ ನಿಲ್ದಾಣ ಸನಿಹದ ಬಟ್ಟೆ ವ್ಯಾಪಾರ ಅಂಗಡಿ, ಸ್ವೀಟ್ ಮಳಿಗೆ, ಚಪ್ಪಲಿ ಅಂಗಡಿ, ದಿನಸಿ ಮಳಿಗೆಯ ಒಳಗೆ ನೀರು ಹರಿದು ಬಂದಿದೆ. ಬಿರುಗಾಳಿ ಮತ್ತು ಬಲವಾಗಿ ಬೀಸಿದ ಮಳೆಯಿಂದ ಅಂಗಡಿಮುಂಗಟ್ಟುಗಳ ಒಳಗೆ ನೀರು ರಾಚಿಕೊಂಡಿತ್ತು.
ಮಳೆ ಆರಂಭ ಸಂದರ್ಭದಲ್ಲಿ ಹೋಗಿದ್ದ ವಿದ್ಯುತ್ ಅನಂತರ ಪುನರ್ ಸಂಪರ್ಕವಾಗಿಲ್ಲ.
ಲ್ಯಾಂಡ್‌ಲೈನ್ ಫೋನ್ ಕೂಡಾ ಸಂಪರ್ಕ ರಹಿತವಾಗಿದ್ದು ಮಳೆಯಿಂದ ಒಟ್ಟಾರೆ ಅವಾಂತರಗಳು ಸೃಷ್ಟಿಯಾಗಿದ್ದವು. ವಿವಿಧ ಕಡೆಗಳಲ್ಲಿ ಸಿಡಿಲು ಹೊಡೆದು ಹಾನಿ ಆಗಿರುವ ಬಗ್ಗೆ ವದಂತಿ ಆಗಿತ್ತು ನಿರ್ದಿಷ್ಟವಾಗಿ ಎಲ್ಲಿಂದಲೂ ವರದಿ ಆಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ
Bengaluru: ಕದ್ದ ಮೊಬೈಲ್ ಕೊರಿಯರ್ ಮೂಲಕ ಕೇರಳಕ್ಕೆ ರವಾನೆ!
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.