ಸುಬ್ರಹ್ಮಣ್ಯ: ಆಲಿಕಲ್ಲು ಸಹಿತ ಭಾರೀ ಗಾಳಿ ಮಳೆ
Team Udayavani, Apr 6, 2019, 8:56 AM IST
ಮಂಗಳೂರು/ ಸುಬ್ರಹ್ಮಣ್ಯ/ ಕಡಬ: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಕಾಣಿಸಿಕೊಂಡ ಮೇಲ್ಮೆ„ ಸುಳಿಗಾಳಿ ಪರಿಣಾಮ, ಜಿಲ್ಲೆಯ ಅನೇಕ ಕಡೆಗಳಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ.
ಸುಬ್ರಹ್ಮಣ್ಯ, ಕಡಬ ಮತ್ತು ಸುತ್ತಲ ಪ್ರದೇಶಗಳಲ್ಲಿ ಶುಕ್ರವಾರ ಸಂಜೆ ವೇಳೆಗೆ ಗುಡುಗು-ಮಿಂಚು ಸಹಿತ ಭಾರೀ ಗಾಳಿ ಮಳೆಯಾಗಿದೆ. ಜತೆಗೆ ಆಲಿಕಲ್ಲು ಕೂಡ ಬೃಹತ್ ಪ್ರಮಾಣದಲ್ಲಿ ಬಿದ್ದಿವೆ. ಗಾಳಿ ಕೂಡ ಹೆಚ್ಚಿದ್ದು, ಬಿರುಸಾಗಿ ಬೀಸಿದ ಗಾಳಿಗೆ ಹಲವೆಡೆ ಮರಗಳು ಧರೆಶಾಯಿಯಾಗಿವೆ. ಅನೇಕ ಮಂದಿ ಕೃಷಿಕರ ರಬ್ಬರ್, ತೆಂಗು, ಅಡಿಕೆ ಮರ ಗಳು ನೆಲಕ್ಕುರುಳಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಸತತ ಎರಡು ತಾಸು ಕಾಲ ನಿರಂತರ ಮಳೆಯಾಗಿದೆ. ಕಡಬ-ಸುಬ್ರಹ್ಮಣ್ಯ, ಗ್ರಾಮಾಂತರ ಭಾಗಕ್ಕೆ ವಿದ್ಯುತ್ ಸರಬರಾಜು ಮಾಡುವ ಮಾರ್ಗದ ವಿದ್ಯುತ್ ಕಂಬ, ತಂತಿಗಳ ಮೇಲೆ ವಿವಿಧೆಡೆ ಮರಗಳು ಬಿದ್ದಿವೆ. ಸುಬ್ರಹ್ಮಣ್ಯ ಸಹಿತ ವಿವಿಧ ಭಾಗಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ದೂರವಾಣಿ, ಮೊಬೈಲ್ ಸೇವೆಗಳು ಅಸ್ತವ್ಯಸ್ತಗೊಂಡಿವೆ. ಮನೆ ಗಳ ಛಾವ ಣಿಯ ಶೀಟ್‌ಗಳು ಹಾರಿ ಹೋಗಿವೆ.
ಸುಬ್ರಹ್ಮಣ್ಯ ನಗರದಲ್ಲಿ ಕುಮಾರಧಾರೆ – ಕಾಶಿಕಟ್ಟೆ ತನಕ ಚತುಷ್ಪಥ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ರಸ್ತೆಯನ್ನು ಅಗೆ ದಿಡಲಾಗಿದೆ. ಇದರಿಂದ ರಸ್ತೆ ಎರಡು ಬದಿಗೆ ಮಳೆ ನೀರು ಹರಿದು ಹೋಗಲು ಸಾಧ್ಯವಾಗದೆ ನೀರು ತುಂಬಿ ವಾಹನ ಸವಾರರು ಸಂಚಾರ ವೇಳೆ ತೊಂದರೆ ಅನುಭವಿಸಿದರು. ರಸ್ತೆ ಪೂರ್ತಿ ಕೆಸರುಮಯವಾಗಿದೆ.
ಆದಿಸುಬ್ರಹ್ಮಣ್ಯ ಭಾಗದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ನೀರು ರಸ್ತೆಯಲ್ಲೆ ಸಂಗ್ರಹಗೊಂಡು ಅಂಗಡಿಗಳಿಗೆ ನುಗ್ಗಿದೆ. ಮುಖ್ಯ ಪೇಟೆಯಲ್ಲೂ ನೀರು ಮಣ್ಣು ಸಹಿತ ಇಳಿಜಾರು ಪ್ರದೇಶಗಳಿಗೆ ಹರಿದು ಬಂದ ಪರಿಣಾಮ ಕೆಂಪು ನೀರು ಸಂಗ್ರಹಗೊಂಡು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಪಂಜ, ಯೇನೆಕಲ್ಲು, ಗುತ್ತಿಗಾರು, ಹರಿಹರ, ನಡುಗಲ್ಲು, ಮಡಪ್ಪಾಡಿ, ಬಾಳು ಗೋಡು, ಕಲ್ಮಕಾರು ಮೊದಲಾದ ಗ್ರಾಮಾಂತರ ಭಾಗದಲ್ಲೂ ಎಣ್ಮೂರು, ಕರಿಕ್ಕಳ ಮೊದಲಾದೆಡೆ ಸುಮಾರು 45 ನಿಮಿಷ ಆಲಿಕಲ್ಲು ಸಹಿತ ಸಿಡಿಲು ಮಿಂಚು ಗಾಳಿ ಮಳೆಯಾಗಿದೆ.
ಬೆಳ್ಳಾರೆ, ಪೆರುವಾಜೆ ಗ್ರಾಮ ಗಳಲ್ಲಿ ಭಾರೀ ಗಾಳಿ ಸಹಿತ ಮಳೆ ಯಾಗಿದ್ದು, ಹಲವು ಅಡಿಕೆ ತೋಟ ಮನೆಗಳಿಗೆ ಹಾನಿಯಾಗಿವೆ ಪುತ್ತೂರು ಪರಿಸರದಲ್ಲಿ 15 ನಿಮಿಷ ಉತ್ತಮ ಮಳೆಯಾಗಿದೆ. ಈವರೆಗೆ ಯಾವುದೇ ಅವಘಡ ವರದಿಯಾಗಿಲ್ಲ.
ಸುಬ್ರಹ್ಮಣ್ಯ ಆಸುಪಾಸಿನ ಭಾಗದಲ್ಲಿ ಬೇಸಗೆಯ ಈ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಗಾಳಿ ಮಳೆಯಾಗಿದ್ದು ಬಿಸಿಲ ತಾಪದಿಂದ ಕಾದಿದ್ದ ಇಳೆ ತಂಪಾಗಿದೆ. ಹಲವು ಮಂದಿ ಆಲಿಕಲ್ಲುಗಳನ್ನು ಸಂಗ್ರಹಿಸುತ್ತ, ಇನ್ನೂ ಕೆಲವರು ಮೊಬೈಲ್‌ಗಳಲ್ಲಿ ಚಿತ್ರೀಕರಣ ಮಾಡುತ್ತ ಖುಶಿಪಟ್ಟರು.
ಸಂಚಾರ ವ್ಯತ್ಯಯ
ಮರ್ದಾಳದಿಂದ ನೆಟ್ಟಣ ಮಧ್ಯದಲ್ಲಿ ಬೃಹತ್ ಗಾತ್ರದ ಮರಗಳು ಮುರಿದು ರಸ್ತೆಗೆ ಬಿದ್ದು ಸಂಚಾರ ಬಾಧಿತವಾಯಿತು. ಉಪ್ಪಿನಂಗಡಿ, ಧರ್ಮಸ್ಥಳಗಳಿಂದ ಸುಬ್ರಹ್ಮಣ್ಯಕ್ಕೆ ತೆರಳುವವರು ಸಮಸ್ಯೆ ಎದುರಿಸುವಂತಾಯಿತು. ಮಂಗಳೂರು ನಗರದಲ್ಲಿ ಸೆಕೆಯಿಂದ ಕೂಡಿತ್ತು. ಸಂಜೆ ವೇಳೆಗೆ ಮೋಡಕ ಕವಿದ ವಾತಾವರಣ ಇತ್ತು. ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಕೈಕೊಟ್ಟಿತ್ತು.
ಕಾಸರಗೋಡು: ಜಿಲ್ಲೆಯ ಕೆಲವೆಡೆ ಶುಕ್ರವಾರ ರಾತ್ರಿ ಮಳೆಯಾಗಿದೆ. ಪಳ್ಳ, ಏಳಾRನ, ಮಧೂರು ಪರಿಸರದಲ್ಲಿ ಉತ್ತಮ ಮಳೆಯಾಗಿದೆ. ಹವಾಮಾನ ಮುನ್ಸೂ ಚನೆ ಪ್ರಕಾರ ಮುಂದಿನ 2 ದಿನಗಳಲ್ಲಿ ಕರಾವಳಿಯಲ್ಲಿ ಸಾಧಾರಣ ಮಳೆ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
MUST WATCH
ಹೊಸ ಸೇರ್ಪಡೆ
New Zealand: ತವರಿನಂಗಳದಲ್ಲೇ ಟೆಸ್ಟ್ ನಿವೃತ್ತಿಗೆ ಸೌಥಿ ನಿರ್ಧಾರ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.