Subrahmanya ಪರಿಸರದಲ್ಲಿ ಧಾರಾಕಾರ ಮಳೆ: ರಾಜ್ಯ ಹೆದ್ದಾರಿಯ ಕಿರು ಸೇತುವೆ ಮುಳುಗಡೆ
Team Udayavani, Oct 8, 2023, 11:22 PM IST
ಸುಬ್ರಹ್ಮಣ್ಯ: ಸುಳ್ಯ ಮತ್ತು ಕಡಬ ತಾಲೂಕುಗಳ ವಿವಿಧೆಡೆ ರವಿವಾರ ಸಂಜೆ ವೇಳೆ ಸುರಿದ ಧಾರಾಕಾರ ಮಳೆಯ ಪರಿಣಾಮ ಸುಬ್ರಹ್ಮಣ್ಯ-ಕಡಬ ರಾಜ್ಯ ಹೆದ್ದಾರಿಯ ಕೈಕಂಬ ಬಳಿಯ ಕಿರುಸೇತುವೆ ಮುಳುಗಡೆಯಾಯಿತು. ಸ್ವಲ್ಪ ಸಮಯ ರಸ್ತೆ ಬಂದ್ ಆಗಿ ಸಂಚಾರಕ್ಕೆ ತೊಡಕು ಉಂಟಾಯಿತು.
ಸುಬ್ರಹ್ಮಣ್ಯ ಸೇರಿದಂತೆ ಕೈಕಂಬ, ಬಿಳಿನೆಲೆ, ಹರಿಹರ, ಐನೆಕಿದು, ಬಾಳುಗೋಡು, ಕಲ್ಲಾಜೆ, ಗುತ್ತಿಗಾರು, ಪಂಜ ಭಾಗಗಳಲ್ಲಿ 1 ತಾಸು ಕಾಲ ಗುಡುಗು ಸಹಿತ ಮಳೆಯಾಯಿತು. ಕುಮಾರ ಪರ್ವತ ಭಾಗದಲ್ಲಿ ಕೂಡ ಭಾರೀ ಮಳೆ ಸುರಿದ ಪರಿಣಾಮ ಕುಕ್ಕೆಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯ ದರ್ಪಣತೀರ್ಥ ನದಿ ಕೂಡ ತುಂಬಿ ಹರಿಯಿತು.
ದೇವೇಗೌಡರ ಹೆಲಿಕಾಪ್ಟರ್ ಪಯಣ ರದ್ದು
ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ರವಿವಾರ ಭಾರೀ ಮಳೆಯಾಗಿದ್ದು, ಸಂಜೆ ವೇಳೆ ಮೋಡ ಕವಿದ ವಾತಾವರಣ ಇದ್ದ ಹಿನ್ನೆಲೆಯಲ್ಲಿ ಕುಕ್ಕೆಗೆ ಹೆಲಿಕಾಪ್ಟರ್ ಮೂಲಕ ಭೇಟಿ ನೀಡಲಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಹೆಲಿಕಾಪ್ಟರ್‌ಮೂಲಕ ಬರಲು ಸಾಧ್ಯವಾಗಲಿಲ್ಲ.
ಈ ಹಿನ್ನೆಲೆಯಲ್ಲಿ ಅವರು ರಾತ್ರಿ ಮಂಗಳೂರಿಗೆ ವಿಮಾನದ ಮೂಲಕ ಆಗಮಿಸಿ ಅಲ್ಲಿಂದ ಕುಕ್ಕೆಗೆ ರಸ್ತೆ ಮಾರ್ಗದ ಮೂಲಕ ಪಯಣ ಬೆಳೆಸಲಿದ್ದಾರೆ. ಸೋಮವಾರ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯನಿಗೆ ಹಲವು ಸೇವೆಗಳನ್ನು ಸಲ್ಲಿಸಲಿದ್ದಾರೆ.
ಅಂಗಡಿಗಳಿಗೆ, ಗದ್ದೆ, ತೋಟಕ್ಕೆ ನುಗ್ಗಿದ ನೀರು
ಕಡಬ: ಕಡಬ ಪರಿಸರದಲ್ಲಿ ರವಿವಾರ ಮಧ್ಯಾಹ್ನದ ಬಳಿಕ ಗುಡುಗು ಸಿಡಿಲಿನಿಂದ ಕೂಡಿದ ಭರ್ಜರಿ ಮಳೆ ಸುರಿದಿದ್ದು, ನದಿ, ತೊರೆಗಳಲ್ಲಿ ಕೆಂಬಣ್ಣದ ನೀರು ಉಕ್ಕಿ ಹರಿದಿದೆ.
ಕೊಂಬಾರು ಹಾಗೂ ಸಿರಿಬಾಗಿಲು ಗ್ರಾಮ ಗಳಲ್ಲಿ ಸುಮಾರು 3 ತಾಸು ಸುರಿದ ಮಳೆಗೆ ಗದ್ದೆ ಹಾಗೂ ತೋಟಗಳು ನೆರೆ ನೀರಿನಿಂದ ಆವೃತವಾಗಿವೆ. ಕೆಂಜಾಳ ಹೊಳೆ ಸೇರಿದಂತೆ ಗ್ರಾಮದ ಸಣ್ಣಪುಟ್ಟ ತೊರೆಗಳು ಉಕ್ಕಿ ಹರಿದಿವೆ. ಅಮೂcರು, ಮಣಿಭಾಂಡ, ದೇವುಪಾಲ್, ಮರುವಂಜಿ ಮುಂತಾದೆಡೆ ತೋಟಗಳು ಹಾಗೂ ಗದ್ದೆಗಳು ನೀರಿನಿಂದ ಆವೃತವಾಗಿವೆ. ನೆರೆ ನೀರು ಮರುವಂಜಿ ನಿವಾಸಿ ರಾಮಣ್ಣ ಗೌಡ ಅವರ ವಾಸದ ಮನೆಯನ್ನು ಸುತ್ತುವರಿದಿದೆ. ಕಳೆದ ವರ್ಷವೂ ಮಳೆಗಾಲದಲ್ಲಿ ಅಲ್ಲಿ ನೆರೆನೀರು ಮನೆಯನ್ನು ಆವರಿಸಿದ ಕಾರಣ ಮನೆಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸ ಲಾಗಿತ್ತು. ಕೆಂಜಾಳ ಪೇಟೆಯಲ್ಲಿ ನೆರೆನೀರು ಅಂಗಡಿ ಮುಂಗಟ್ಟುಗಳಿಗೆ ನುಗ್ಗಿ ಸಮಸ್ಯೆ ಎದು ರಾಗಿದೆ. ಅಲ್ಲಿನ ಜನಾರ್ದನ, ರಾಮಚಂದ್ರ, ಓಬಯ್ಯ, ಚಂದ್ರಶೇಖರ ಮುಂತಾದವರ ಅಂಗಡಿಗಳಿಗೆ ನೀರು ನುಗ್ಗಿದೆ.
ಚಾರ್ಮಾಡಿಯಲ್ಲಿ ಸಿಡಿಲು
ಬಡಿದು ಮನೆಗೆ ಹಾನಿ
ಬೆಳ್ತಂಗಡಿ: ತಾಲೂಕಿನಲ್ಲಿ ರವಿವಾರ ಮಧ್ಯಾಹ್ನದ ಬಳಿಕ ಗುಡುಗು ಸಹಿತ ಮಳೆಯಾದ ಪರಿಣಾಮ ಚಾರ್ಮಾಡಿ ಪ್ರದೇಶದ ಹಲವು ಮನೆಗಳಿಗೆ ಸಿಡಿಲು ಬಡಿದು ವಿದ್ಯುತ್ ಉಪಕರಣ ಗಳಿಗೆ ಹಾನಿಯಾಗಿದೆ.
ಚಾರ್ಮಾಡಿ ಗ್ರಾಮದ ಪಾಂಡಿಕಟ್ಟೆ ಶಾಂತಿಗುಡ್ಡೆ ಇಬ್ರಾಹಿಂ ಅವರ ಮನೆಗೆ ಸಿಡಿಲು ಬಡಿದು ಮಿಕ್ಸಿ, ಪ್ಲಗ್, ಲೈಟ್, ಟೈಲ್ಸ…ಗಳಿಗೆ ಹಾನಿಯಾಗಿದೆ. ಮನೆಮಂದಿ ಪಾರಾಗಿದ್ದಾರೆ. ಉಳಿದಂತೆ ಪರಿಸರದ 10ಕ್ಕೂ ಅಧಿಕ ಮನೆಗಳ ಇನ್ವರ್ಟರ್, ಟಿವಿ, ರೆಫ್ರಿಜರೇಟರ್, ಸಹಿತ ಸ್ವಿಚ್ ಬೋರ್ಡ್‌ಗಳಿಗೆ ಹಾನಿಯಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.