ಬಂಟ್ವಾಳ ತಾ|: ತಗ್ಗು ಪ್ರದೇಶ ಜಲಾವೃತ
Team Udayavani, Aug 8, 2019, 5:20 AM IST
ಬಂಟ್ವಾಳ: ತಾಲೂಕಿನಾದ್ಯಂತ ಬುಧವಾರ ಮಳೆಯ ತೀವ್ರತೆ ಕಡಿಮೆಯಾಗಿದ್ದರೂ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ನದಿ ಪಾತ್ರದ ತಗ್ಗು ಪ್ರದೇಶಗಳು ಜಲಾವೃತಗೊಂಡವು.
ಬಂಟ್ವಾಳದಲ್ಲಿ ನೇತ್ರಾವತಿ ನದಿಯ ಅಪಾಯದ ಮಟ್ಟ 8.5 ಮೀ.ಆಗಿದ್ದು, ಬುಧವಾರ ಮುಂಜಾನೆ ನೀರು 8.4 ಮೀ.ಗೆ ತಲುಪಿತ್ತು. ಆದರೆ ಬಳಿಕ ಮಧ್ಯಾಹ್ನ ನೀರಿನ ಮಟ್ಟ ಇಳಿಕೆಯಾಗಿ 8.2 ಮೀ.ಗೆ ತಲುಪಿದ ಹಿನ್ನೆಲೆಯಲ್ಲಿ ಆತಂಕ ಕಡಿಮೆ ಯಾಗಿದ್ದರೂ ಘಟ್ಟ ಪ್ರದೇಶದಲ್ಲಿ ಹೆಚ್ಚಿನ ಮಳೆ ಯಾದರೆ ಮತ್ತೆ ಪ್ರವಾಹ ಏರಿಕೆ ಸಾಧ್ಯತೆ ಇದೆ.
ಪಾಣೆಮಂಗಳೂರಿನ ಆಲಡ್ಕದಲ್ಲಿ ಕೆಲವು ಮನೆ ಗಳು ಪ್ರವಾಹದ ನೀರಿಗೆ ಜಲಾವೃತವಾದವು. ನೀರು ಅಪಾಯಕಾರಿ ಸ್ಥಿತಿಗೆ ತಲುಪುವ ದೃಷ್ಟಿಯಿಂದ ಮುಂಜಾಗ್ರತ ಕ್ರಮವಾಗಿ ಸ್ಥಳೀಯ ನಿವಾಸಿಗಳು ಬೇರೆಡೆಗೆ ಸ್ಥಳಾಂತರಗೊಂಡಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಆತಂಕವಿರಲಿಲ್ಲ.
ಬಡ್ಡಕಟ್ಟೆ ಮಾರುಕಟ್ಟೆಗೆ ನೆರೆ ನೀರು
ಬಂಟ್ವಾಳ ಪೇಟೆಯ ಬಡ್ಡಕಟ್ಟೆ ಮಾರುಕಟ್ಟೆಗೆ ನೆರೆ ನೀರು ನುಗ್ಗಿ ಮೀನು ಮಾರುಕಟ್ಟೆ, ಪ್ರಯಾಣಿಕರ ತಂಗುದಾಣ ಕೊಂಚ ಹೊತ್ತು ಜಲಾವೃತವಾದವು. ಬಂಟ್ವಾಳ ಪೇಟೆಗೆ ಸಂಪರ್ಕ ಕಲ್ಪಿಸುವ ಜಕ್ರಿಬೆಟ್ಟು ಪ್ರದೇಶದಲ್ಲಿ ರಸ್ತೆಗೆ ನೀರು ಬಂದಿತ್ತು. ಅಜಿಲಮೊಗರು ಮಸೀದಿ ಪರಿಸರದ ಸುತ್ತ ನೆರೆ ನೀರು ನುಗ್ಗಿ ಅಜಿಲಮೊಗರು-ಉಪ್ಪಿನಂಗಡಿ ರಸ್ತೆ ಸಂಪರ್ಕ ಕಡಿತಗೊಂಡಿತು.
ಸರಪಾಡಿ ಪೆರ್ಲ ಪ್ರದೇಶದಲ್ಲೂ ರಸ್ತೆಗೆ ನೀರು ನುಗ್ಗಿ ಸಂಚಾರಕ್ಕೆ ತೊಂದರೆಯಾಯಿತು.
ಕಡೇಶಿವಾಲಯ, ಬರಿಮಾರು, ಮಣಿನಾಲ್ಕೂರು, ಸರಪಾಡಿ, ನಾವೂರು, ನರಿಕೊಂಬು, ತುಂಬೆ ಪ್ರದೇಶದಲ್ಲಿ ಅಡಿಕೆ ತೋಟಗಳಿಗೆ ನೆರೆ ನೀರು ನುಗ್ಗಿತು. ನೆರೆಯ ಮುನ್ಸೂಚನೆ ಇದ್ದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಮುಂಜಾಗ್ರತ ಕ್ರಮಕೈಗೊಂಡಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಹಾನಿ ಉಂಟಾಗಿರಲಿಲ್ಲ.
ಪುಂಜಾಲಕಟ್ಟೆ: ಸುಂಟರಗಾಳಿ
ಪುಂಜಾಲಕಟ್ಟೆ ಪರಿಸರದಲ್ಲಿ ಬುಧವಾರ ಮಧ್ಯಾಹ್ನ ಸುಂಟರಗಾಳಿ ಬೀಸಿ ಹಲವೆಡೆ ಹಾನಿ ಸಂಭವಿಸಿದೆ. ಇರ್ವತ್ತೂರು, ನೇರಳಕಟ್ಟೆ, ಪೆಲತ್ತಕಟ್ಟೆ, ನಯನಾಡು, ಮೂರ್ಜೆ, ಪುಂಜಾಲಕಟ್ಟೆ, ಗಂಪದಡ್ಡ, ಪುರಿಯ ಮೊದಲಾದೆಡೆ ಸುಂಟರಗಾಳಿಗೆ ಅಡಿಕೆ ಮರಗಳ ಸಹಿತ ಮರಗಳು ಧರಾಶಾಯಿಯಾಗಿವೆ. ಇರ್ವತ್ತೂರು, ನೇರಳಕಟ್ಟೆ ಗಳಲ್ಲಿ ಮರಗಳು ರಸ್ತೆಗೆ ಬಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.