ಹೆದ್ದಾರಿ ಬದಿ ಹೊಂಚು ಹಾಕುತ್ತಿವೆ ಅಪಾಯಕಾರಿ ಕೆರೆಗಳು!
ಅಪಘಾತಗಳ ಬಳಿಕವೂ ನಾರ್ಣಕಜೆ, ತಳೂರಿನಲ್ಲಿರುವ ಕೆರೆಗಳಿಗೆ ಅಳವಡಿಸಿಲ್ಲ ತಡೆಬೇಲಿ
Team Udayavani, Sep 10, 2019, 5:04 AM IST
ಗುತ್ತಿಗಾರು: ಪುತ್ತೂರಿನ ಮಡ್ಯಂಗಳದಲ್ಲಿ ಕಾರು ಕೆರೆಗೆ ಉರುಳಿ ಒಂದೇ ಕುಟುಂಬದ ನಾಲ್ವರು ಪ್ರಾಣ ಕಳೆದುಕೊಂಡ ಘಟನೆ ಮನದಲ್ಲಿನ್ನೂ ಹಸಿಯಾಗಿರುವಾಗಲೇ ಅಂತಹುದೇ ದುರ್ಘಟನೆಗಳು ಸಂಭವಿಸಬಹುದಾದ ಎರಡು ಅಪಾಯಕಾರಿ ಸ್ಥಳಗಳು ಸುಬ್ರಹ್ಮಣ್ಯ-ಜಾಲಸೂರು ರಾಜ್ಯ ಹೆದ್ದಾರಿಯ ತಳೂರು ಹಾಗೂ ನಾರ್ಣಕಜೆಯಲ್ಲಿ ಇವೆ.
ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವಂತೆ ಇರುವ ಎರಡು ಕೆರೆಗಳು ಖಾಸಗಿ ಒಡೆತನದಲ್ಲಿದ್ದರೂ ಅದರ ಸುತ್ತ ಯಾವುದೇ ತಡೆಬೇಲಿ ಅಳವಡಿಸದ ಕಾರಣ ಅಪಾಯವನ್ನು ಆಹ್ವಾನಿಸುತ್ತಿವೆ.
ಅನಾಹುತ ತಪ್ಪಿತ್ತು
ತಳೂರಿನ ಬಳಿಯಿರುವ ಕೆರೆಗೆ ಹಲವು ವರ್ಷಗಳಿಂದಲೇ ತಡೆಬೇಲಿಯಿಲ್ಲದೇ ಅಪಾಯಕಾರಿ ಆಗಿದೆ. 50 ಅಡಿಗಳಷ್ಟು ಆಳ ಹಾಗೂ ಗ್ರಾನೈಟ್ ಕಲ್ಲಿನ ಮಧ್ಯೆ ಈ ಕೆರೆ ರಚನೆಯಾಗಿದೆ. ಮುಖ್ಯ ರಸ್ತೆಗೆ ಕೆಲವೇ ಅಡಿಗಳ ಅಂತರದಲ್ಲಿ ಈ ಕೆರೆ ಇದೆ. ಕಳೆದ ಬೇಸಗೆಯಲ್ಲಿ ಯಾತ್ರಾರ್ಥಿಗಳ ಕಾರೊಂದು ಈ ಕೆರೆಗೆ ಬೀಳುವುದು ಸ್ವಲ್ಪದರಲ್ಲೇ ತಪ್ಪಿತ್ತು. ಅಲ್ಲೇ ಇದ್ದ ಮರಗಳ ಮಧ್ಯೆ ಕಾರು ಸಿಲುಕಿಕೊಂಡ ಕಾರಣ ಭಾರೀ ಅನಾಹುತ ತಪ್ಪಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದರು. ಅದಾದ ಬಳಿಕವೂ ಈ ಕೆರೆಗೆ ತಡೆಬೇಲಿ ಅಳವಡಿಸಿಲ್ಲ.
ಕೆರೆಯೊಳಗೆ ಬಿದ್ದಿದ್ದವು ವಾಹನಗಳು
ಮತ್ತೂಂದು ಕೆರೆ ನಾರ್ಣಕಜೆ ಸಮೀಪದ ತಿರುವಿನಲ್ಲಿದ್ದು, ಈ ಕೆರೆಗೆ ಹಲವು ವಾಹನಗಳು ಬಿದ್ದಿವೆ. ಹಿಂದೊಮ್ಮೆ ಈ ಕೆರೆಗೆ ಸವಾರನೊಬ್ಬ ಬೈಕ್ ಸಮೇತ ಬಿದ್ದಿದ್ದ. ಬೈಕ್ ನೀರಿನಲ್ಲಿ ಮುಳುಗಿದ್ದು, ಸವಾರ ಈಜಿಕೊಂಡು ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದ. ಈ ಕೆರೆಗೆ ಭಾಗಶಃ ತಡೆಬೇಲಿ ಅಳವಡಿಸಿದ್ದರೂ ಅದು ಸುರಕ್ಷಿತ ವಾಗಿಲ್ಲ. ಪೂರ್ಣ ಪ್ರಮಾಣದ ತಡೆಬೇಲಿ ಅಗತ್ಯವಿದ್ದು, ಸಂಭವನೀಯ ಅಪಾಯ ತಪ್ಪಿಸಲು ಸಹಕಾರಿಯಾಗಲಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತು ಈ ಕೆರೆಗೆ ತಡೆಬೇಲಿ ಅಳವಡಿಸಲಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ತಡೆಬೇಲಿಗೆ ಪ್ರಸ್ತಾವನೆ ಸಲ್ಲಿಕೆ
ನಾರ್ಣಕಜೆ ಹಾಗೂ ತಳೂರಿನ ಅಪಾಯಕಾರಿ ಕೆರೆಗಳಿಗೆ ತಡೆ ಬೇಲಿ ನಿರ್ಮಿಸಲು ಪ್ರಸ್ತಾವನೆ ಕಳುಹಿಸಲಾಗಿದೆ. ಅನುಮೋದನೆ ಬಂದ ಕೂಡಲೇ ಕಾಮಗಾರಿ ಪ್ರಾರಂಭಿಸಲಾಗುವುದು.
– ಸಣ್ಣೇ ಗೌಡ, ಎಇ, ಲೋಕೋಪಯೋಗಿ ಇಲಾಖೆ ಸುಳ್ಯ
ಕೃಷ್ಣಪ್ರಸಾದ್ ಕೊಲ್ಚಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.