ಹೊಕ್ಕಾಡಿಗೋಳಿ ಕಂಬಳ: ಬಿದ್ದರೂ ಛಲ ಬಿಡದೆ ಗೆದ್ದ ಕಂಬಳ ಓಟಗಾರ; ವಿಡಿಯೋ ವೈರಲ್
Team Udayavani, Dec 6, 2021, 3:30 PM IST
ಬಂಟ್ವಾಳ: ಕಂಬಳದಲ್ಲಿ ಕೋಣಗಳನ್ನು ಓಡಿಸುವ ವೇಳೆ ಕಂಬಳದ ಕರೆಯಲ್ಲಿ ಬಿದ್ದರೂ, ಛಲ ಬಿಡದೆ ಕೋಣಗಳೊಂದಿಗೆ ಎಳೆದೊಯ್ದು ಗುರಿ ಮುಟ್ಟಿದ ರೋಮಾಂಚನಕಾರಿ ಘಟನೆ ಹೊಕ್ಕಾಡಿಗೋಳಿ ಕಂಬಳದಲ್ಲಿ ರವಿವಾರ ಸಂಭವಿಸಿದೆ.
ಬಂಟ್ವಾಳ ತಾಲೂಕು ಎಲಿಯನಡುಗೋಡು ಮತ್ತು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಗಡಿ ಭಾಗದಲ್ಲಿರುವ ಹೊಕ್ಕಾಡಿಗೋಳಿ ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ ಹೊಕ್ಕಾಡಿಗೋಳಿಯಲ್ಲಿ ನಡೆದ ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳದಲ್ಲಿ ನಡೆದ ಘಟನೆ ಪ್ರಸ್ತುತ ವೈರಲ್ ಆಗುತ್ತಿದೆ.
ಹಗ್ಗದ ಕಿರಿಯ ವಿಭಾಗದಲ್ಲಿ , ಪ್ರಿ ಕ್ವಾರ್ಟರ್ ಫೈನಲ್ ಸಂದರ್ಭದಲ್ಲಿ ಬಿಳಿಯೂರು, ಪೆರ್ನೆ ವಿಷ್ಣುಮೂರ್ತಿ ದೇವತಾ ಗಣಪ ಭಂಡಾರಿ ಅವರ ಕೋಣಗಳನ್ನು ಉಡುಪಿ ಹಿರೇಬೆಟ್ಟು ಆಕಾಶ್ ಭಂಡಾರಿ ಅವರು ಓಡಿಸುತ್ತಿದ್ದು, ಕರೆಯನ್ನು ಮುಕ್ಕಾಲು ಭಾಗ ಕ್ರಮಿಸುವಾಗ ಬಿದ್ದರು. ಆದರೆ ಹಗ್ಗವನ್ನು ಬಿಡದೇ ಕೋಣಗಳು ಎಳೆದೊಯ್ಯುತ್ತಿದ್ದರೂ ಛಲದಿಂದ ಗುರಿ ಮುಟ್ಟಿದರು. ಸುಮಾರು 20 ಮೀ.ನಷ್ಟು ದೂರ ಕವುಚಿ ಬಿದ್ದರೂ ಹಗ್ಗ ಹಿಡಿದು ಗುರಿ ಮುಟ್ಟಿದ ಅವರ ಎದೆಗಾರಿಕೆ ಅವರನ್ನು ವಿಜಯಿಯನ್ನಾಗಿಸಿತು. ಆಕಾಶ್ ಅವರ ಸಾಹಸವನ್ನು ಕಂಬಳಾಭಿಮಾನಿಗಳು ಮುಕ್ತ ಕಂಠದಿಂದ ಶ್ಲಾಘಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸರಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.