ಹೊಟೇಲ್‌ ಪುನರಾರಂಭ: ಗ್ರಾಹಕರ ಸಂಖ್ಯೆ ವಿರಳ

Team Udayavani, Jun 9, 2020, 9:47 AM IST

ಹೊಟೇಲ್‌ ಪುನರಾರಂಭ: ಗ್ರಾಹಕರ ಸಂಖ್ಯೆ ವಿರಳ

ಬೆಳ್ತಂಗಡಿ ತಾಲೂಕಿನಲ್ಲಿ ಬಸ್‌ಗಳ ಸಂಚಾರ ಆರಂಭ ಗೊಂಡಿರುವುದು.

ಬೆಳ್ತಂಗಡಿ: ಕೆಲವು ದಿನಗಳಿಂದ ಪಾರ್ಸೆಲ್‌ ನೀಡುತ್ತಿದ್ದ ತಾಲೂಕಿನ ಬಹುತೇಕ ಹೊಟೇಲ್‌ಗ‌ಳು ಸೋಮವಾರದಿಂದ ಅಧಿಕೃತ ವಾಗಿ ತೆರೆದಿವೆ. ಹೊಟೇಲ್‌ಗ‌ಳಲ್ಲಿ ಮುಂಜಾನೆ ಉಪಾಹಾರ ಹಾಗೂ ಮಧ್ಯಾಹ್ನ ಊಟಕ್ಕೆ ಬೇಡಿಕೆಯಿದೆ. ಮಧ್ಯಾಹ್ನ ಬಳಿಕ ಗ್ರಾಹಕರ ಸಂಖ್ಯೆ ಇಳಿಕೆಯಾಗಿದೆ. ಹಿಂದಿನ ವ್ಯವಹಾರಕ್ಕೆ ಹೋಲಿಸಿದರೆ ಶೇ. 40ರಷ್ಟು ವ್ಯವಹಾರದಲ್ಲಿ ಇಳಿಕೆಯಾಗಿದೆ ಎಂದು ಹೊಟೇಲ್‌ ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ಬಸ್‌ ಓಡಾಟ
ತಾಲೂಕಿನಲ್ಲಿ ಖಾಸಗಿ ಬಸ್‌ ಓಡಾಟ ಆರಂಭಗೊಂಡಿದ್ದು, ಈಗಾಗಲೆ ಶೇ.50 ರಷ್ಟು ಟ್ರಿಪ್‌ ಕಡಿತಗೊಳಿಸಲಾಗಿದೆ. ಉಪ್ಪಿನಂಗಡಿ, ಮಡಂತ್ಯಾರು ಸಹಿತ ಗ್ರಾಮಾಂತರ ಪ್ರದೇಶಗಳಿಗೆ ಸೀಮಿತ ಬಸ್‌ ಓಡಾಟ ನಡೆಸಲಾಗುತ್ತಿದೆ. ಹಿಂದೆ 25 ಬಸ್‌ಗಳ 75 ಟ್ರಿಪ್‌ ಇದ್ದಲ್ಲಿ ಪ್ರಸಕ್ತ 10 ಬಸ್‌ಗಳ 25 ಟ್ರಿಪ್‌ ನಡೆಸಲಾಗುತ್ತಿದೆ. ಶಾಲಾ ಕಾಲೇಜು ತೆರೆಯದಿ ರುವುದರಿಂದ ಮತ್ತಷ್ಟು ಪ್ರಯಾಣಿಕರ ಕೊರತೆಯಾಗಿದೆ. ಇದರಿಂದ ನಷ್ಟದಲ್ಲೇ ಬಸ್‌ ಓಡಾಟ ನಡೆಸಬೇಕಾಗಿದೆ ಎಂದು ಖಾಸಗಿ ಬಸ್‌ ಮಾಲಕ ವಿಜಯ ಫೆರ್ನಾಡಿಂಸ್‌ ತಿಳಿಸಿದ್ದಾರೆ.

ತೆರೆದ ಹೊಟೇಲ್‌ಗ‌ಳು; ಸಹಜ ಸ್ಥಿತಿಗೆ ಬಂಟ್ವಾಳ
ಬಂಟ್ವಾಳ: ಬಂಟ್ವಾಳ- ಬಿ.ಸಿ. ರೋಡ್‌ ಸಹಿತ ತಾಲೂಕಿನ ಬಹು ತೇಕ ಪ್ರದೇಶಗಳಲ್ಲಿ, ಹೊಟೇಲ್‌ಗ‌ಳು ತೆರೆದು ಕೊಂಡಿದ್ದು, ಜನಸಂಚಾರವೂ ಕಂಡುಬಂತು.
ಕೆಲವು ದಿನಗಳ ಹಿಂದೆಯೇ ಲಾಕ್‌ಡೌನ್‌ ಸಡಿಲಿಕೆಯಾಗಿದ್ದರೂ ಹೊಟೇಲ್‌ಗ‌ಳು ತೆರೆ ಯದೇ ಇದ್ದುದರಿಂದ ಮಧ್ಯಾಹ್ನದ ವೇಳೆಗೆ ಬಹುತೇಕ ಮಂದಿ ಮನೆಗೆ ತೆರಳುತ್ತಿದ್ದರು. ಆದರೆ ಸೋಮವಾರ ಸಂಜೆಯವರೆಗೂ ಹೆಚ್ಚಿನ ಜನ ಸಂಚಾರ ಕಂಡುಬಂತು. ಆದರೂ ಹೊಟೇಲ್‌ಗ‌ಳಲ್ಲಿ ಗ್ರಾಹಕರ ಸಂಖ್ಯೆ ಹಿಂದಿನಂತೆ ಇರಲಿಲ್ಲ.

ಬಹುತೇಕ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳ ಸಂಚಾರ ಆರಂಭಗೊಂಡಿದ್ದರೂ ಬಸ್‌ಗಳ ಸಂಖ್ಯೆ ವಿರಳವಾಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳು ಕೂಡ ಕಡಿಮೆ ಸಂಖ್ಯೆಯಲ್ಲಿ ರಸ್ತೆಗಿಳಿದಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆಯುಂಟಾಗಿತ್ತು. ಉಳಿದಂತೆ ಇತರ ಎಲ್ಲ ವಾಹನಗಳ ಓಡಾಟ ಆರಂಭಗೊಂಡಿದ್ದು, ಸರಕಾರಿ ಕಚೇರಿ ಗಳಲ್ಲೂ ಹೆಚ್ಚಿನ ಜನ ಕಂಡುಬಂದರು.

ಬಂಟ್ವಾಳ: ಬಂಟ್ವಾಳ- ಬಿ.ಸಿ. ರೋಡ್‌ ಸಹಿತ ತಾಲೂಕಿನ ಬಹುತೇಕ ಪ್ರದೇಶಗಳಲ್ಲಿ, ಹೊಟೇಲ್‌ಗ‌ಳು ತೆರೆದು ಕೊಂಡಿದ್ದು, ಜನಸಂಚಾರವೂ ಕಂಡುಬಂತು.
ಕೆಲವು ದಿನಗಳ ಹಿಂದೆಯೇ ಲಾಕ್‌ಡೌನ್‌ ಸಡಿಲಿಕೆಯಾಗಿದ್ದರೂ ಹೊಟೇಲ್‌ಗ‌ಳು ತೆರೆ ಯದೇ ಇದ್ದುದರಿಂದ ಮಧ್ಯಾಹ್ನದ ವೇಳೆಗೆ ಬಹುತೇಕ ಮಂದಿ ಮನೆಗೆ ತೆರಳುತ್ತಿದ್ದರು. ಆದರೆ ಸೋಮ ವಾರ ಸಂಜೆಯವರೆಗೂ ಹೆಚ್ಚಿನ ಜನ ಸಂಚಾರ ಕಂಡುಬಂತು. ಆದರೂ ಹೊಟೇಲ್‌ಗ‌ಳಲ್ಲಿ ಗ್ರಾಹಕರ ಸಂಖ್ಯೆ ಹಿಂದಿನಂತೆ ಇರಲಿಲ್ಲ.

ಬಹುತೇಕ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳ ಸಂಚಾರ ಆರಂಭಗೊಂಡಿದ್ದರೂ ಬಸ್‌ಗಳ ಸಂಖ್ಯೆ ವಿರಳವಾಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳು ಕೂಡ ಕಡಿಮೆ ಸಂಖ್ಯೆಯಲ್ಲಿ ರಸ್ತೆಗಿಳಿದಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆಯುಂಟಾಗಿತ್ತು. ಉಳಿದಂತೆ ಇತರ ಎಲ್ಲ ವಾಹನಗಳ ಓಡಾಟ ಆರಂಭಗೊಂಡಿದ್ದು, ಸರಕಾರಿ ಕಚೇರಿ ಗಳಲ್ಲೂ ಹೆಚ್ಚಿನ ಜನ ಕಂಡುಬಂದರು.

ಜನರ ಓಡಾಟ ಹೆಚ್ಚಳ
ಪುತ್ತೂರು/ಸುಳ್ಯ: ಜೂ. 8ರಿಂದ ಹೊಟೇಲ್‌ ಗಳಲ್ಲಿ ಸ್ಥಳದಲ್ಲೇ ಆಹಾರ, ಉಪಾಹಾರ ನೀಡಲು ಅವಕಾಶ ಹಿನ್ನೆಲೆಯಲ್ಲಿ ಸುಳ್ಯ, ಪುತ್ತೂರು ನಗರದಲ್ಲಿ ಹೊಟೇಲ್‌ಗ‌ಳಲ್ಲಿ ಊಟ, ಉಪಾಹಾರ ಪುನರಾರಂಭ ಗೊಂಡಿದೆ. ಈ ಹಿಂದೆ ಪಾರ್ಸೆಲ್‌ಗೆ ಮಾತ್ರ ಅವಕಾಶ ಇತ್ತು. ಈಗ ಸಾಮಾಜಿಕ ಅಂತರ ಪಾಲನೆ, ನೈರ್ಮಲ್ಯ ರಕ್ಷಣೆ, ಗ್ರಾಹಕ ಸಂಖ್ಯೆ ಮಿತಿಯೊಂದಿಗೆ ಹೊಟೇಲ್‌ ತೆರೆ ದಿವೆ. ನಗರದಲ್ಲಿ ಜನರ ಓಡಾಟ, ವಾಹನ ಸಂಚಾರ ಹೆಚ್ಚಾಗಿದ್ದರೂ ಹೊಟೇಲ್‌ಗ‌ಳಲ್ಲಿ ಗ್ರಾಹಕರ ಸಂಖ್ಯೆ ಇಳಿಮುಖವಾಗಿತ್ತು.

ಟಾಪ್ ನ್ಯೂಸ್

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Vitla: ಜಾತ್ರೆ ಸಂತೆ ಶುಲ್ಕ ಹರಾಜು ಮೊತ್ತ ಇಳಿಸಲು ಆಗ್ರಹ

1

Puttur: ಜಲಸಿರಿ ನಂಬಿದರೆ ಬೇಸಗೆಯಲ್ಲಿ ಟ್ಯಾಂಕರೇ ಗತಿ; ಸದಸ್ಯರ ಆತಂಕ

Belthangady: ಸಂತ ಲಾರೆನ್ಸ್‌ ದೇವಾಲಯದಲ್ಲಿ ಕ್ರಿಸ್ಮಸ್‌ ಬಲಿಪೂಜೆ

Belthangady: ಸಂತ ಲಾರೆನ್ಸ್‌ ದೇವಾಲಯದಲ್ಲಿ ಕ್ರಿಸ್ಮಸ್‌ ಬಲಿಪೂಜೆ

Puttur: ಟೆಂಪೋ-ಬೈಕ್‌ ನಡುವೆ ಅಪಘಾತ

Puttur: ಟೆಂಪೋ-ಬೈಕ್‌ ನಡುವೆ ಅಪಘಾತ

Belthangady: ವಿದ್ಯುತ್‌ ಲೈನ್‌ ಮೇಲೆ ಬಿದ್ದ ಮರ: ಬೆಂಕಿ

Belthangady: ವಿದ್ಯುತ್‌ ಲೈನ್‌ ಮೇಲೆ ಬಿದ್ದ ಮರ: ಬೆಂಕಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

lorry-bike

Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.