ಉತ್ತರಾ ನಕ್ಷತ್ರದಲ್ಲಿ ಮಳೆ ಬಂದರೆ “ಒತ್ತರೆ’ ಭೀತಿ
ಮಳೆ ಸೂಚನೆ: ಅಡಿಕೆ ಬೆಳೆಗಾರರಲ್ಲಿ ಆತಂಕ
Team Udayavani, Sep 16, 2020, 8:23 AM IST
ಸಾಂದರ್ಭಿಕ ಚಿತ್ರ
ಪುತ್ತೂರು / ಸುಳ್ಯ: ಮಳೆ ಇಳಿಮುಖವಾಗಬೇಕಿದ್ದ ತಿಂಗಳಲ್ಲಿ ಮಳೆ ಹೆಚ್ಚಾಗಿ ಸುರಿಯುತ್ತಿರುವ ಕಾರಣ ಉಭಯ ತಾಲೂಕುಗಳ ಪ್ರಧಾನ ವಾಣಿಜ್ಯ ಕೃಷಿಯಾಗಿರುವ ಅಡಿಕೆ ಬೆಳೆಗಾರರಿಗೆ ಚಿಂತೆ ಆವರಿಸಿದೆ.
ವಾರಗಳ ಕಾಲ ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆ ಮುನ್ಸೂಚನೆ ಪರಿಣಾಮ ಉತ್ತರಾ ನಕ್ಷತ್ರದಲ್ಲಿ ಮಳೆ ಬಂದರೆ “ಒತ್ತರೆ’ ಎಂಬ ಗಾದೆ ನಿಜವಾಗುವ ಆತಂಕ ಕಾಡಿದೆ. ಹೀಗಾಗಿ ಫಸಲು ಕೈಗೆ ಸೇರುವ ಕಾಲದಲ್ಲಿ ವರುಣ ಅಬ್ಬರಿಸದಿರಲಿ ಎನ್ನುವುದು ಬೆಳೆಗಾರರ ಕೋರಿಕೆ.
ಆಗಸ್ಟ್ ತಿಂಗಳಿಗೆ ಮಳೆ ಅಬ್ಬರ ಕಡಿಮೆಯಾಗಿ, ಸೆಪ್ಟಂಬರ್‌ನಲ್ಲಿ ಸಂಜೆ ಹೊತ್ತಲ್ಲಿ ಸಾಧಾರಣ ಮಳೆ ಆಗುವುದು ವಾಡಿಕೆ. ಆದರೆ ಕಳೆದ ಮೂರು ವರ್ಷಗಳಿಂದ ಆಗಸ್ಟ್ ವರೆಗೆ ಸಾಧಾರಣ ಮಳೆಯಾಗಿ ಸೆಪ್ಟಂಬರ್, ಅಕ್ಟೋಬರ್‌ನಲ್ಲಿ ಭಾರೀ ಮಳೆ ಆಗುತ್ತಿದೆ. ಹೀಗಾಗಿ ಮಳೆ ಸುರಿಯು
ವಿಕೆಯ ಕಾಲಮಾನದಲ್ಲಿ ವ್ಯತ್ಯಾಸ ಆಗಿರುವುದು ಕೂಡ ಕೃಷಿಗೆ ಹಾನಿ ಪ್ರಮಾಣ ಹೆಚ್ಚು ಮಾಡಿದೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.
ಹಲವು ಸವಾಲು
ವಿಪರೀತ ಮಳೆ ಬಂದರೆ ಏನೂ ಮಾಡಲಾಗದ ಸ್ಥಿತಿ ಅಡಿಕೆ ಬೆಳೆಗಾರರದ್ದು. ಅಡಿಕೆ ಕಾಯಿ ಈಗಷ್ಟೇ ಬೆಳೆದು ಹಣ್ಣಾಗುವ ಕಾಲಘಟ್ಟದಲ್ಲಿದೆ. ರೋಗಕ್ಕೆ ತುತ್ತಾದರೆ ಅಲ್ಲೇ ಉದುರಿ ಬೀಳುತ್ತದೆ. ಒಂದು ಮರದಲ್ಲಿ ರೋಗ ಕಾಣಿಸಿಕೊಂಡರೆ ಅದು ಇಡೀ ತೋಟಕ್ಕೆ ಆವರಿಸಿ ಹಾನಿ ಮಾಡುವ ಸಂಭವ ಇರುತ್ತದೆ. ಕೆಲವೆಡೆ ಮದ್ದು ಸಿಂಪಡಿಸಿ ತಿಂಗಳು ಕಳೆದಿದ್ದರೂ ಅಕಾಲಿಕ ಮಳೆಯಿಂದ ರೋಗಕ್ಕೆ ತುತ್ತಾಗುವ ಭೀತಿ ಇದೆ. ಹಣ್ಣಾಗಿ ಬಿದ್ದ ಅಡಿಕೆ ಒಣಗಿಸಲು ಮಳೆರಾಯನ ಕಾಟವು ತಪ್ಪದು.
11 ಜಿಲ್ಲೆಗಳಲ್ಲಿ ಅಡಿಕೆ ಬೆಳೆ ಅವಿಭಾಜ್ಯ ಅಂಗ
11 ಜಿಲ್ಲೆಗಳಲ್ಲಿ ಅಡಿಕೆ ಬೆಳೆ ರೈತರ ಅವಿಭಾಜ್ಯ ಅಂಗವಾಗಿದೆ. ಬೇಸಗೆ ಅಂತ್ಯಕ್ಕೆ ಹಿಂಗಾರ ಬಿಟ್ಟು ಜೂನ್ ನಲ್ಲಿ ಸಣ್ಣ ಅಡಿಕೆ ಬೆಳೆಯಲು ಆರಂಭವಾಗುತ್ತದೆ. ಈ ಹಂತದಲ್ಲಿ ಬೋಡೋì ದ್ರಾವಣ ಸಿಂಪಡಿಸಬೇಕಾಗುತ್ತದೆ.
ರೋಗಗಳ ಸಾಲು
ತಾಲೂಕಿನಲ್ಲಿ ಹಳದಿ ರೋಗ, ಬೇರು ಹುಳ ರೋಗ ಸಹಿತ ವಿವಿಧ ಸಮಸ್ಯೆಗಳಿಂದ ಅಡಿಕೆ ಬೆಳೆಗಾರರು ತತ್ತರಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ಈ ಸಮಸ್ಯೆ ಹೆಚ್ಚಾಗುತ್ತಿದೆ. ಈಗ ಕೀಟಬಾಧೆ, ಅಬ್ಬರದ ಮಳೆಯಿಂದ ಕೊಳೆರೋಗ ಭೀತಿ. ಈ ಬಾರಿ ಧಾರಣೆ ಹೆಚ್ಚಳವಷ್ಟೇ ಬೆಳೆಗಾರರಿಗೆ ಸಮಾಧಾನ ಸಂಗತಿ. ಉಳಿದಂತೆ ರೋಗ ಬಾಧೆ ತಪ್ಪಿಲ್ಲ.
ಸಿಗುತ್ತಿಲ್ಲ ಪರಿಹಾರ
ಕೊಳೆರೋಗ ಸಹಿತ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಅಡಿಕೆ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಕಳೆದ ಕೆಲವು ವರ್ಷಗಳಿಂದ ಕೃಷಿಕರು ಆಗ್ರಹಿಸುತ್ತಿದ್ದಾರೆ. ಆದರೆ ಸರಕಾರದಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಹವಾಮಾನ ಆಧರಿತ ಬೆಳೆ ವಿಮೆ ಚಾಲ್ತಿಯಲ್ಲಿದ್ದು, ಇದರ ಅಡಿಯಲ್ಲಿ ಪರಿಹಾರ ವಿತರಿಸುವ ಕೆಲಸವೂ ಸಮರ್ಪಕವಾಗಿ ಆಗುತ್ತಿಲ್ಲ. ಪರಿಹಾರ ಸಿಗಬೇಕಾದರೆ ಶೇ. 33ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿರಬೇಕು ಎಂಬ ನಿಯಮ ರೈತರಿಗೆ ಮಾರಕವಾಗಿದೆ.
ಆತಂಕ ಇದ್ದೇ ಇದೆ
ಮಳೆ ನಿರಂತರವಾಗಿ ಸುರಿದರೆ ಅಪಾಯ ಇದ್ದೇ ಇದೆ. ಉತ್ತರಾ ನಕ್ಷತ್ರದಲ್ಲಿ ಮಳೆಯಾದರೆ ಒತ್ತರೆ ಎಂಬ ಹಿರಿಯರ ಗಾದೆಯು ಕೂಡ ಅದಕ್ಕೆ ಸಾಕ್ಷಿ. ಕೆಲವೆಡೆ ತೋಟಕ್ಕೆ ಮದ್ದು ಬಿಟ್ಟು ಅವಧಿ ಕÙದಿರುವುದರಿಂದ
ಈ ಮಳೆ ಫಸಲಿಗೆ ಹಾನಿ ತರಬಹುದು.
-ಎಂ.ಡಿ. ವಿಜಯಕುಮಾರ್ ಅಡಿಕೆ ಕೃಷಿಕರು, ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು
Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು
National Highway ಕಾಮಗಾರಿ ಪರಿಶೀಲನೆ: ಮಾರ್ಚ್ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ
Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.