ಅಕ್ರಮ ಗೋಮಾಂಸ ವಶಕ್ಕೆ: ಆರೋಪಿಗಳ ಬಂಧನ
Team Udayavani, Jun 6, 2019, 9:30 AM IST
ಬೆಳ್ತಂಗಡಿ: ಪುತ್ತಿಲ ಗ್ರಾಮದ ಮಿತ್ತೇರಿ ಪಾದೆಯಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಮಂಗಳವಾರ ಪೊಲೀಸರು ದಾಳಿ ನಡೆಸಿದ್ದಾರೆ.
ಈ ಸಂಬಂಧ ಫಾರೂಕ್ ಎಂಬಾತನನ್ನು ಬಂಧಿಸಲಾಗಿದ್ದು ಉಳಿದವರು ಪರಾರಿಯಾಗಿದ್ದಾರೆ.
ಮಿತ್ತೇರಿ ಪಾದೆ ಸುಲೈಮಾನ್ ಎಂಬವರ ವಾಸ್ತವ್ಯವಿರದ ಮನೆ ಸಮೀಪದ ಶೆಡ್‌ನಲ್ಲಿ ಅಕ್ರಮವಾಗಿ ಜಾನುವಾರು ಮಾಂಸ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪುಂಜಾಲಕಟ್ಟೆ ಎಸ್‌ಐ ಸುನೀತಾ ಕೆ.ಆರ್. ಅವರ ತಂಡ ದಾಳಿ ನಡೆಸಿದೆ.
ಈ ವೇಳೆ ಸ್ಥಳದ ದನ ಕಡಿದು ಮಾಂಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಮಾಂಸವನ್ನು ಗೋಣಿಯಲ್ಲಿ ತುಂಬುತ್ತಿದ್ದ ಆರೋಪಿಗಳು ಪೊಲೀಸರನ್ನು ಕಂಡು ಪರಾರಿಯಾದರು.
ಸುಮಾರು 70 ಕೆ.ಜಿ.ಯಷ್ಟು ಜಾನುವಾರಿನ ಮಾಂಸ, ಕೃತ್ಯಕ್ಕೆ ಉಪಯೋಗಿಸಿದ ಸಲಕರಣೆ ಹಾಗೂ ಸಾಗಾಟಕ್ಕೆ ಉಪಯೋಗಿಸುತ್ತಿದ್ದ ಟಾಟಾ ಏಸ್ ವಾಹನ, 3 ದ್ವಿಚಕ್ರ ವಾಹನ ಸಹಿತ ಒಟ್ಟು ಸುಮಾರು 1.61 ಲ. ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆಪಡೆಯಲಾಗಿದೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಬಸ್ ನಿಲ್ದಾಣದಲ್ಲಿ ಕಿರುಕುಳ; ಯುವಕನಿಗೆ ಗೂಸಾ
Guttigaru: ಕಮರಿಗೆ ಉರುಳಿದ ಕಾರು; ಗಾಯ
Kadaba ಕೋಡಿಂಬಾಳ ಮರಬಿದ್ದು ವ್ಯಕ್ತಿ ಸಾವು ಪ್ರಕರಣ: 2 ದಿನವಾದರೂ ಸ್ಥಳ ಬಿಟ್ಟು ಕದಲದ ಕೋಳಿ!
Farangipete Devaki Krishna Ravalnath Temple: ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು
Puttur:ನಾಪತ್ತೆಯಾಗಿದ್ದ ಅಸ್ಥಿಪಂಜರ ಪತ್ತೆ; ಸಾವಿನ ಬಗ್ಗೆ ಅನುಮಾನ ಆತ್ಮಹ*ತ್ಯೆಯೋ,ಕೊ*ಲೆಯೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.