ಅಕ್ರಮ ಗೋ ಸಾಗಾಟಕ್ಕೆ ತಡೆ: ನಗ, ನಗದು ಕಾಣೆ ಆರೋಪ: ಮಜ್ಜಾರು ಕ್ಷೇತ್ರಕ್ಕೆ ದೂರು
Team Udayavani, Nov 9, 2022, 6:55 AM IST
ಕಡಬ: ಕೆಲವು ದಿನಗಳ ಹಿಂದೆ ಕೋಡಿಂಬಾಳದ ಮುರಚೆಡವು ಬಳಿ ಜಾನುವಾರು ಸಾಗಿಸುತ್ತಿದ್ದ ನಮ್ಮ ವಾಹನವನ್ನು ತಡೆದ ಬಜರಂಗದಳ ಕಾರ್ಯಕರ್ತರು ನಮ್ಮ ಚಿನ್ನದ ಚೈನ್ ಹಾಗೂ ನಗದು ಅಪಹರಿಸಿದ್ದಾರೆ ಎಂದು ಜಾನುವಾರು ಸಾಗಿಸುತ್ತಿದ್ದವರು ಕೋಡಿಂಬಾಳದ ಮಜ್ಜಾರು ಕಾರಣಿಕ ಕ್ಷೇತ್ರಕ್ಕೆ ದೂರು ನೀಡಿರುವ ಘಟನೆ ನಡೆದಿದೆ.
ಏನೆಕಲ್ಲು ನಿವಾಸಿಗಳಾದ ಸುಧೀರ್ ಹಾಗೂ ಬೆಳಿಯಪ್ಪ ಅವರು ಅಕ್ರಮವಾಗಿ ಪಿಕಪ್ ನಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ಕಡಬದ ವಿಹಿಂಪ ಹಾಗೂ ಬಜರಂಗದಳ ಕಾರ್ಯಕರ್ತರು ತಡೆಯೊಡ್ಡಿ ಆರೋಪಿಗಳು ಹಾಗೂ ಜಾನುವಾರು ಇದ್ದ ವಾಹನವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದರು. ಘಟನೆಯ ಸಂದರ್ಭ ಜಾನುವಾರು ಸಾಗಾಟದಾರರೊಬ್ಬರ ಚಿನ್ನದ ಚೈನು ಹಾಗೂ ಹಣ ಕಾಣೆಯಾಗಿದ್ದು, ಅದನ್ನು ಕಡಬ ಪ್ರಖಂಡ ವಿಹಿಂಪ ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ಗೋ ರಕ್ಷಾ ಪ್ರಮುಖ್ ಜಯಂತ ಕಲ್ಲುಗುಡ್ಡೆ, ಬಜರಂಗದಳದ ರಕ್ಷಿತ್ ಕೇಪು, ಸಂತೋಷ್ ದೋಳ, ತೀರ್ಥೇಶ್ ಮೀನಾಡಿ ಕದ್ದಿದ್ದಾರೆ ಎಂದು ಕೋಡಿಂಬಾಳದ ಮಜ್ಜಾರು ಕಾರಣಿಕ ಕ್ಷೇತ್ರಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ಕ್ಷೇತ್ರದಲ್ಲಿ ಕ್ಷೇತ್ರದ ಅಧ್ಯಕ್ಷ ಪ್ರಸಾದ ಕೆದಿಲಾಯ ಅವರ ನೇತೃತ್ವದಲ್ಲಿ ದೂರು ವಿಚಾರಣೆ ನಡೆಸಲಾಯಿತು.
ಆರೋಪ ನಿರಾಕರಣೆ
ವಿಚಾರಣೆಗೆ ಹಾಜರಾಗಿದ್ದ ಬಜರಂಗದಳ ಕಾರ್ಯಕರ್ತರು ದೂರುದಾರರ ಆರೋಪವನ್ನು ನಿರಾಕರಿಸಿ ನಾವು ಅಕ್ರಮವಾಗಿ ಕಸಾಯಿಖಾನೆಗೆ ಗೋವುಗಳನ್ನು ಸಾಗಾಟ ಮಾಡುತ್ತಿದ್ದುದನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದು ನಿಜ. ಆದರೆ ಚಿನ್ನ, ಹಣ ಕದ್ದಿಲ್ಲ, ಅದನ್ನು ನೋಡಿಯೂ ಇಲ್ಲ, ಆ ಬಗ್ಗೆ ನೀವು ದೈವದ ಸಾನಿಧ್ಯದಲ್ಲಿ ಪ್ರಾರ್ಥನೆ ಮಾಡಿಕೊಳ್ಳಲು ನಮ್ಮದೇನು ಅಭ್ಯಂತವಿಲ್ಲ. ಆದರೆ ನೀವು ಅಕ್ರಮವಾಗಿ ಕಸಾಯಿಖಾನೆಗೆ ಜಾನುವಾರುಗಳನ್ನು ಹಿಂಸಾತ್ಮಾಕ ರೀತಿಯಲ್ಲಿ ಸಾಗಿಸುತ್ತಿದ್ದರೂ ಒಪ್ಪಿಕೊಳ್ಳದೆ, ಜಾನುವಾರನ್ನು ತಂಗಿಯ ಮನೆಗೆ ಸಾಕಲು ಕೊಂಡೊಯ್ಯುತ್ತಿರುವುದಾಗಿ ಸುಳ್ಳು ಹೇಳಿದ್ದೀರಿ. ಅದನ್ನೇ ದೈವದ ಸಾನಿಧ್ಯದ ಎದುರು ಹೇಳುವಂತೆ ಕೇಳಿಕೊಂಡರು. ಆ ಸಂದರ್ಭದಲ್ಲಿ ಜಾನುವಾರು ಸಾಗಿಸಿದವರ ಪೈಕಿ ಸುಧೀರ್ ಅವರು ತನ್ನ ತಪ್ಪನ್ನು ಒಪ್ಪಿಕೊಂಡು ಘಟನೆಯ ವೇಳೆ ನಾವು ತಂಗಿಯ ಮನೆಗೆ ಜಾನುವಾರು ಸಾಗಿಸುತ್ತಿದ್ದುದು ಎಂದು ಸುಳ್ಳು ಹೇಳಿದ್ದೇವೆ. ನಾವು ವ್ಯಕ್ತಿಯೋರ್ವರಿಗೆ ಕೊಡುವುದಕ್ಕಾಗಿ ಜಾನುವಾರು ಸಾಗಿಸುತ್ತಿದ್ದುದಾಗಿ ಹೇಳಿ ಮುಂದೆ ಅಕ್ರಮ ಕಸಾಯಿಖಾನೆಗೆ ಜಾನುವಾರು ಸಾಗಾಟ ಮಾಡುವುದಿಲ್ಲ ಎಂದು ಕ್ಷಮೆ ಯಾಚಿಸಿದರು.
ಆ ಬಳಿಕ ಚಿನ್ನ ಮತ್ತು ಹಣ ಕಾಣೆಯಾಗಿರುವ ಬಗ್ಗೆ ರಾಜನ್ ದೈವದ ಸಾನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭ ಮಜ್ಜಾರು ಕ್ಷೇತ್ರದ ಪ್ರಮುಖರಾದ ಸುದರ್ಶನ ಗೌಡ, ಮಾಧವ ಕೋಲ್ಪೆ, ರಘುರಾಮ ನಾೖಕ್ ಕುಕ್ಕೆರೆಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subramanya: ನಾಪತ್ತೆಯಾದ ವ್ಯಕ್ತಿ ಹರಿಹರ ಪಳ್ಳತ್ತಡ್ಕದಲ್ಲಿ ಪತ್ತೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
Puttur: ಪೆನ್ ಪಾಯಿಂಟ್ ಕ್ರಿಕೆಟ್: ಸತತ 2ನೇ ಬಾರಿ ಬ್ಲೂ ಹಂಟರ್ಸ್ ಚಾಂಪಿಯನ್ಸ್
Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!
B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.