ಪಟ್ಟೆ: ಸೀರೆ ಹೊಳೆ ಸೇತುವೆ ತಡೆಗೋಡೆ ಕುಸಿತ ಭೀತಿಯಲ್ಲಿ
Team Udayavani, Aug 12, 2020, 9:04 PM IST
ಬಿರುಕು ಬಿಟ್ಟ ರಸ್ತೆ, ಅಪಾಯದ ಅಂಚಿನಲ್ಲಿ ಸೇತುವೆ
ಬಡಗನ್ನೂರು: ಭಾರೀ ಮಳೆಗೆ ಪಟ್ಟೆಯಿಂದ ಗೆಜ್ಜೆಗಿರಿ ಮೂಲಕ ಈಶ್ವರಮಂಗಲಕ್ಕೆ ಸಂಪರ್ಕ ಕಲ್ಪಿಸುವ ಜಿ.ಪಂ. ರಸ್ತೆಯ ಪಟ್ಟೆ ಎಂಬಲ್ಲಿ ಸೀರೆ ಹೊಳೆಗೆ ನಿರ್ಮಿಸಿದ ಸೇತುವೆಯ ಒಂದು ಬದಿ ಬಿರುಕು ಬಿಟ್ಟು ಕುಸಿತದ ಭೀತಿಯಲ್ಲಿದ್ದು, ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ.
ಗೆಜ್ಜೆಗಿರಿ ಶ್ರೀಕ್ಷೇತ್ರದ ಬ್ರಹ್ಮಕಲ ಶೋತ್ಸವದ ಸಂದರ್ಭ ಪಟ್ಟೆಯಿಂದ ಗೆಜ್ಜೆಗಿರಿ ತನಕ ರಸ್ತೆ ವಿಸ್ತರಣೆ ಮತ್ತು ಕಾಂಕ್ರೀಟ್ ಕಾಮಗಾರಿ ಮಾಡಲಾಗಿತ್ತು. ಪಟ್ಟೆಯಲ್ಲಿ ಸೀರೆ ಹೊಳೆಯ ಸೇತುವೆಯ ಒಂದು ಬದಿಗೆ ಕಾಂಪೌಂಡ್ ಹಾಗೂ ಇನ್ನೊಂದು ಬದಿಗೆ ತಡೆಗೋಡೆ ನಿರ್ಮಿಸಲಾಗಿದೆ. ತಡೆಗೋಡೆ ಇದೀಗ ಕುಸಿತದ ಭೀತಿಯಲ್ಲಿದೆ. ಪಟ್ಟೆ ಸಮೀಪ ಹೊಳೆ ಪಕ್ಕದ ತಿರುವು ಭಾಗದಲ್ಲಿ ರಸ್ತೆ ಬಿರುಕು ಬಿಟ್ಟಿದೆ. ಅಸಮರ್ಪಕ ಕಾಮಗಾರಿಯೇ ಕಾಂಕ್ರೀಟ್ ರಸ್ತೆ ಬಿರುಕು ಬಿಡಲು ಕಾರಣ ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಗಿದೆ.
ಸೇತುವೆಗೆ ಅಳವಡಿಸಿದ್ದ ಕಾಂಕ್ರೀಟ್ ಬದು ತುಂಡಾಗಿದ್ದು, ರಾಡ್ ಕಾಣುತ್ತಿದೆ. ತಡೆಗೋಡೆಯ ಮೇಲೆ ಅಳವಡಿಸಲಾಗಿದ್ದ ಕಬ್ಬಿಣದ ತಡೆಬೇಲಿಯ ಆಧಾರದಲ್ಲಿ ನಿಂತಿದೆ.
ಚರಂಡಿ ವ್ಯವಸ್ಥೆ ಇಲ್ಲ
ಪಟ್ಟೆಯಿಂದ ಗೆಜ್ಜೆಗಿರಿ ಕ್ಷೇತ್ರವನ್ನು ಸಂಪರ್ಕಿಸುವ ರಸ್ತೆಗೆ ಕಾಂಕ್ರೀಟ್ ಹಾಕಲಾಗಿದ್ದರೂ ಮಳೆ ನೀರು ಹರಿದು ಹೋಗಲು ರಸ್ತೆ ಬದಿಯಲ್ಲಿ ಚರಂಡಿ ವ್ಯವಸ್ಥೆ ಆಗಿಲ್ಲ.
ತಾ.ಪಂ.ಗೆ ತಿಳಿಸಲಾಗಿದೆ
ಪಟ್ಟೆ ಎಂಬಲ್ಲಿ ರಸ್ತೆ ಬಿರುಕು ಬಿಟ್ಟು ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಹೊಳೆಗೆ ತಡೆಗೋಡೆ ನಿರ್ಮಾಣಕ್ಕೆ ಹೆಚ್ಚು ಮೊತ್ತ ಬೇಕಾದುದರಿಂದ ಈ ಬಗ್ಗೆ ತಾ.ಪಂ.ಗೆ ಬರೆಯಲಾಗಿದೆ. ರಸ್ತೆ ಕುಸಿತ ಉಂಟಾದ ಭಾಗದಲ್ಲಿ ಹೊಳೆಗೆ ಅಡಿ ಭಾಗದಿಂದಲೇ ಕಾಮಗಾರಿ ನಡೆಯಬೇಕಾದುದರಿಂದ ಡಿಸೆಂಬರ್ ಅಥವಾ ಜನವರಿ ತಿಂಗಳ ಅನಂತರ ಕಾಮಗಾರಿ ನಡೆಸಬಹುದು.
- ವಾಸಿಮ್ ಗಂಧದ, ಪಿಡಿಒ, ಬಡಗನ್ನೂರು ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಬಸ್ ನಿಲ್ದಾಣದಲ್ಲಿ ಕಿರುಕುಳ; ಯುವಕನಿಗೆ ಗೂಸಾ
Guttigaru: ಕಮರಿಗೆ ಉರುಳಿದ ಕಾರು; ಗಾಯ
Kadaba ಕೋಡಿಂಬಾಳ ಮರಬಿದ್ದು ವ್ಯಕ್ತಿ ಸಾವು ಪ್ರಕರಣ: 2 ದಿನವಾದರೂ ಸ್ಥಳ ಬಿಟ್ಟು ಕದಲದ ಕೋಳಿ!
Farangipete Devaki Krishna Ravalnath Temple: ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು
Puttur:ನಾಪತ್ತೆಯಾಗಿದ್ದ ಅಸ್ಥಿಪಂಜರ ಪತ್ತೆ; ಸಾವಿನ ಬಗ್ಗೆ ಅನುಮಾನ ಆತ್ಮಹ*ತ್ಯೆಯೋ,ಕೊ*ಲೆಯೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.