ಐದೇ ತಿಂಗಳಲ್ಲಿ ಕಳಪೆ ಕಾಮಗಾರಿ ಬಯಲು
ಕುಂಡಡ್ಕ -ಚೆನ್ನಾವರ ಸಂಪರ್ಕ ರಸ್ತೆ ಕಾಮಗಾರಿ
Team Udayavani, Oct 7, 2022, 10:54 AM IST
ಬೆಳ್ಳಾರೆ: ಪೆರುವಾಜೆ ಗ್ರಾಮದ ಕುಂಡಡ್ಕ-ಚೆನ್ನಾವರ ತನಕದ ರಸ್ತೆಗೆ ಡಾಮರು ಹಾಕಿದ ಐದೇ ತಿಂಗಳಲ್ಲಿ ಅಲ್ಲಲ್ಲಿ ಬಿರುಕು ಬಿಡುವ ಹಂತಕ್ಕೆ ತಲುಪಿದ್ದು ಕಳಪೆ ಕಾಮಗಾರಿಯ ನಿಜ ಬಣ್ಣವನ್ನು ತೆರೆದಿಟ್ಟಿದೆ.
ಲಕ್ಷಾಂತರ ರೂ.ಖರ್ಚು ಮಾಡಿ ನಿರ್ಮಿಸಿದ ರಸ್ತೆ ಕೆಲವು ತಿಂಗಳಲ್ಲಿಯೇ ಬಿರುಕು ಬಿಡುವ ಹಂತದಲ್ಲಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
20 ಲಕ್ಷ ರೂ. ವೆಚ್ಚ
ಜಿ.ಪಂ. ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದ ವ್ಯಾಪ್ತಿಯ ಕುಂಡಡ್ಕದಿಂದ ಚೆನ್ನಾವರದ ಮೂಲಕ ಪಾಲ್ತಾಡಿಯನ್ನು ಬೆಸೆಯುವ ರಸ್ತೆ ಇದಾಗಿದೆ. ತೀರಾ ಹದಗೆಟ್ಟಿದ್ದ ರಸ್ತೆಗೆ ಸಂಸದ ನಳಿನ್ ಕುಮಾರ್ ಕಟೀಲು ಅವರ ಪ್ರಯತ್ನದ ಫಲವಾಗಿ 2020- 21ನೇ ಸಾಲಿನ ಪ್ರಾಕೃತಿಕ ವಿಕೋಪ ಮಳೆ ಹಾನಿಯಡಿ 20 ಲಕ್ಷ ರೂ. ಮಂಜೂರಾಗಿತ್ತು. ಗುದ್ದಲಿ ಪೂಜೆ ನಡೆದು ಕಳೆದ ಎಪ್ರಿಲ್‌ನಲ್ಲಿ ಕಾಮಗಾರಿ ಪ್ರಾರಂಭಗೊಂಡಿತು. ಸುಮಾರು 1 ಕಿ.ಮೀ.ದೂರ ರಸ್ತೆ ಹೊಸದಾಗಿ ಡಾಮರೀಕರಣಗೊಂಡಿತು.
ಸಂಚಾರಕ್ಕೆ ಸಂಕಟ
ಕಾಮಗಾರಿ ನಡೆದು ನಾಲ್ಕೇ ತಿಂಗಳಲ್ಲಿ ರಸ್ತೆಯ ನಿಜ ಸ್ಥಿತಿ ಬೆಳಕಿಗೆ ಬಂದಿದೆ. ಚೆನ್ನಾವರ ಸೇತುವೆ ಬಳಿಯಿಂದ ಅಲ್ಲಲ್ಲಿ ಡಾಮರು ಎದ್ದೇಳುತ್ತಿದ್ದು ರಸ್ತೆಯಿಡಿ ಜಲ್ಲಿ ಹುಡಿ ಆವರಿಸಿದೆ. ಇದರಿಂದ ದ್ವಿ-ಚಕ್ರ ವಾಹನ ಸಂಚಾರದ ವೇಳೆ ಸ್ಕಿಡ್ ಆಗುವ ಆತಂಕ ಮೂಡಿದೆ. ಒಟ್ಟಿನಲ್ಲಿ 20 ಲಕ್ಷ ರೂ. ವೆಚ್ಚ ಭರಿಸಿದ್ದು ಬಂಡೆ ಕಲ್ಲಿನ ಮೇಲೆ ನೀರು ಹೊಯ್ದಂತಹ ಕಥೆಯಂತಾಗಿದೆ. ತೀರಾ ನಾದುರಸ್ತಿ ಯಲ್ಲಿದ್ದ ರಸ್ತೆ ದಶಕಗಳ ಬಳಿಕ ಮರು ಡಾಮರೀಕರಣಗೊಂಡಾಗ ರಸ್ತೆ ಫಲಾನುಭವಿಗಳು ಸಮಸ್ಯೆಗೆ ಮುಕ್ತಿ ಸಿಕ್ಕಿತು ಎಂದು ಭಾವಿಸಿದ್ದರು. ಇದು ಐದೇ ತಿಂಗಳಲ್ಲಿ ಸುಳ್ಳಾಗಿದೆ.
ಲೋಕಾಯುಕ್ತಕ್ಕೆ ದೂರು ಪ್ರತಿಭಟನೆಯ ಎಚ್ಚರಿಕೆ
ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಸಾರ್ವಜನಿಕರ ತೆರಿಗೆ ಹಣ ಪೋಲಾಗಿದ್ದು ಹೀಗಾಗಿ ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲು ಸ್ಥಳೀಯ ನಿವಾಸಿಗಳು ನಿರ್ಧರಿಸಿ ದ್ದಾರೆ. ತತ್‌ಕ್ಷಣ ಕಾಮಗಾರಿ ನಿರ್ವ ಹಣೆಯ ಇಲಾಖೆಯ ಅಧಿ ಕಾರಿ ಗಳನ್ನು, ಗುತ್ತಿಗೆದಾರನನ್ನು ಕರೆಯಿಸಿ ರಸ್ತೆ ಮರು ನಿರ್ಮಾಣಕ್ಕೆ ಕ್ರಮ ಕೈಗೊಳ್ಳ ಬೇಕು. ಇಲ್ಲದಿದ್ದರೆ ಸಂಬಂಧಿಸಿ ಇಲಾಖೆ ಮುಂಭಾಗ ಪ್ರತಿ ಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ದೂರು ಬಂದಿದೆ: ಹೊಸದಾಗಿ ಡಾಮರು ಹಾಕಿರುವ ರಸ್ತೆ ಇದಾಗಿದ್ದು ಕಳಪೆಯ ಬಗ್ಗೆ ಸ್ಥಳೀಯರಿಂದ ಗ್ರಾ.ಪಂ.ಗೆ ದೂರು ಬಂದಿದೆ. ಕಾಮಗಾರಿಯಲ್ಲಿ ಕಮಿಷನ್ ವ್ಯವಹಾರ ನಡೆದಿರುವ ಆರೋಪವು ಇದೆ. ಹೀಗಾಗಿ ತನಿಖೆಗೆ ಸಂಬಂಧಿಸಿ ಲೋಕಾಯುಕ್ತಕ್ಕೆ ದೂರು ನೀಡಬೇಕು ಎನ್ನುವ ಆಗ್ರಹ ಬಂದಿದೆ. ಪಂಚಾಯತ್ ಸಭೆಗಳಲ್ಲಿ ಈ ಬಗ್ಗೆ ಚರ್ಚಿಸಿ ತನಿಖೆಗೆ ಕ್ರಮ ಕೈಗೊಳ್ಳಲಾಗುವುದು. – ಜಗನ್ನಾಥ ಪೂಜಾರಿ ಮುಕ್ಕೂರು ಅಧ್ಯಕ್ಷರು ಪೆರುವಾಜೆ ಗ್ರಾಮ
ಪ್ರತಿಭಟನೆ: ಐದೇ ತಿಂಗಳಲ್ಲಿ ರಸ್ತೆ ಹಾಳಾಗಿದೆ. ಮೊದಲ ಮಳೆಯಲ್ಲಿ ಬಿರುಕು ಬಿಟ್ಟಿದ್ದ ರಸ್ತೆಯು ಈಗ ವಿವಿಧ ಭಾಗಗಳಲ್ಲಿ ಕಳಪೆ ಕಾಮಗಾರಿಯನ್ನು ತೆರೆದಿಟ್ಟಿದೆ. ರಸ್ತೆಯ ಸಮಗ್ರ ತನಿಖೆಯ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು. ಕಳೆಪೆ ಕಾಮಗಾರಿ ವಿರುದ್ಧ ಪ್ರತಿಭಟನೆ ನಡೆಸ ಲಾಗುವುದು. – ಇಕ್ಬಾಲ್ ಚೆನ್ನಾವರ ರಸ್ತೆ ಫಲಾನುಭವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.