ಬಂಟ್ವಾಳ: ವೃದ್ಧೆಗೆ ಚಿತ್ರಹಿಂಸೆ; ಪುತ್ರ-ಸೊಸೆಯ ವಿರುದ್ಧ ಪ್ರಕರಣ ದಾಖಲು
Team Udayavani, Jul 7, 2022, 8:35 PM IST
ಬಂಟ್ವಾಳ: ಬಿದ್ದು ಗಾಯಗೊಂಡು ನಡೆಯಲಾಗದ ಸ್ಥಿತಿಯಲ್ಲಿದ್ದ ಬೆಂಜನಪದವಿನ ವೃದ್ಧೆಯೊಬ್ಬರನ್ನು ಶೌಚಾಲಯದಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡುತ್ತಿದ್ದ ಘಟನೆಗೆ ಸಂಬಂಧಿಸಿ ಆರೋಪಿಗಳಾದ ವೃದ್ಧೆಯ ಪುತ್ರ ಹಾಗೂ ಸೊಸೆಯ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಜಪದವು ನಿವಾಸಿ ಹರಿರಾಂ ಹಾಗೂ ಆತನ ಪತ್ನಿ ಪೂಜಾ ವೃದ್ಧೆಯನ್ನು ಶೌಚಾಲಯದಲ್ಲಿ ಕೂಡಿ ಹಾಕಿದ ಆರೋಪಿಗಳು. ಘಟನೆಯ ಕುರಿತು ವೃದ್ಧೆ ಗಿರಿಜಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಗಿರಿಜಾ ಅವರಿಗೆ 70 ವರ್ಷ ವಯಸ್ಸಾಗಿದ್ದು, ಅವರು ಪುತ್ರನೊಂದಿಗೆ ವಾಸವಿದ್ದರು.
ಇದನ್ನೂ ಓದಿ: ರಾಮ ಮಂದಿರ ಮುಂದೆ ಯುವಕರು ಭಿಕ್ಷೆ ಬೇಡ್ತಾರೆ : ಪ್ರಿಯಾಂಕ್
2020ರ ಜನವರಿಯಲ್ಲಿ ಗಿರಿಜಾ ಅವರು ಅವರ ಮನೆಯ ಜಗಲಿಯಲ್ಲಿ ಕಾಲು ಜಾರಿ ಬಿದ್ದು ಗಾಯವಾಗಿದ್ದು, ಆದರೆ ಪುತ್ರ ಹಾಗೂ ಸೊಸೆ ಅದಕ್ಕೆ ಚಿಕಿತ್ಸೆ ನೀಡಿರಲಿಲ್ಲ. ಹೀಗಾಗಿ ಅವರು ನಡೆಯಲು ಸಾಧ್ಯವಾಗದೆ ಹಾಸಿಗೆ ಹಿಡಿದಿದ್ದರು. ಈ ರೀತಿ ಹಾಸಿಗೆ ಹಿಡಿದ ಅವರನ್ನು ಯಾವುದೇ ರೀತಿ ಆರೈಕೆ ಮಾಡದೆ ಶೌಚಗೃಹದಲ್ಲಿ ಹಾಕಿ ಒಂದೇ ಹೊತ್ತು ಊಟ ಮತ್ತು ಚಹಾ ನೀಡುತ್ತಿರುವ ಜತೆಗೆ ಸೊಸೆಯು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಳು.
ಈ ಕುರಿತು ಜು. 6ರಂದು ನಾಗರಿಕ ಸಮಿತಿಯವರು ಮಾಹಿತಿ ತಿಳಿದು ಗಿರಿಜಾ ಅವರನ್ನು ಶೌಚಗೃಹದಿಂದ ಹೊರಗೆ ಕರೆತಂದು ಉಪಚರಿಸಿ ಬಳಿಕ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.