ಕಾಣಿಯೂರು : ಸರಕಳ್ಳತನಕ್ಕೆ ಬಂದವರ ಕಾರು ಪಲ್ಟಿ: ಗಾಯ
Team Udayavani, Oct 20, 2022, 8:55 PM IST
ಕಾಣಿಯೂರು : ಕಂಬಳಿ ,ಮಾರುವ ನೆಪ್ಪದಲ್ಲಿ ಕಾರಿನಲ್ಲಿ ಮನೆಯಂಗಳಕ್ಕೆ ಬಂದು ಮನೆಯೊಡತಿಯ ಸರಕಳ್ಳತನಕ್ಕೆ ಯತ್ನಿಸಿ ಪರಾರಿಯಾಗಲು ಯತ್ನಿಸಿದಾಗ ಕಾರು ಪಲ್ಟಿಯಾಗಿ ಕಳ್ಳರು ಗಾಯಗೊಂಡ ಘಟನೆ ಕಡಬ ತಾಲೂಕಿನ ಕಾಣಿಯೂರು ಬಳಿ ಗುರುವಾರ ನಡೆದಿದೆ.
ಗಾಯಗೊಂಡ ಕಳ್ಳರನ್ನು ಮಂಗಳೂರು ಪೊಳಲಿ ಅಟ್ಟೂರು ನಿವಾಸಿಗಳಾದ ರಮೀಶುದ್ಧೀನ…(25) ಹಾಗೂ ರಫೀಕ್ (30) ಎಂದು ಗುರುತಿಸಲಾಗಿದೆ.
ಇವರು ಕಂಬಳಿ ಮಾರುವ ನೆಪದಲ್ಲಿ ಕಾರೊಂದರಲ್ಲಿ ದೋಳ್ಪಾಡಿ ಗ್ರಾಮದ ಕಟ್ಟ ನಿವಾಸಿ ಕಿಟ್ಟ ಎಂಬವರ ಮನೆಗೆ ಬಂದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಮನೆಯಲ್ಲಿ ಮನೆಯ ಒಡತಿ ಮಾತ್ರ ಇರುವುದನ್ನು ಗಮನಸಿ ಕಂಬಳಿಯನ್ನು ಖರೀದಿಸುವಂತೆ ,ಒತ್ತಾಯಿಸಿದ್ದಾರೆ. ಕಂಬಳಿ ಬೆಡ್ ಶೀಟ್‌ಗಳನ್ನು ಮಹಿಳೆ ನೋಡುತ್ತಿದ್ದಂತೆ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಎಗರಿಸಲು ಕಳ್ಳರು ಕೈ ಹಾಕಿದ್ದಾರೆ. ಇದರಿಂದ ತಪ್ಪಿಸಿಕೊಂಡ ಮಹಿಳೆ ಬೊಬ್ಬೆ ಹೊಡೆದಾಗ ಅಕ್ಕಪಕ್ಕದವರು ಆಗಮಿಸಿದಾಗ ಕಳ್ಳರು ಕಾರು ಏರಿ ಕಾಳ್ಕಿತ್ತಿದ್ದಾರೆ.
ಇತ್ತ ದೋಳ್ಪಾಡಿಯಿಂದ ಪುಣ್ಚತ್ತಾರು ಕಡೆ ಸಾಗುವಾದ ಸಾರ್ವಜನಿಕರು ಅಡ್ಡಗಟ್ಟಿದ್ದಾರೆ . ಇಲ್ಲಿಂದ ಯೂಟರ್ನ್ ಹೊಡೆದ ಕಳ್ಳರು ನೇವಾಗಿ ಕಾಣಿಯೂರು ಕೂಡು ರಸ್ತೆಗೆ ದಾರಿಯಲ್ಲಿ ಸಾಗಿದ್ದಾರೆ. ಅಲ್ಲಿ ಕೂಡಾ ಸಾರ್ವಜನಿಕರು ಸೇರಿದ್ದನ್ನು ಗಮನಿಸಿ ರ್ರಾಬರ್ರಿ ಕಾರು ಚಲಾಸಿಕೊಂಡು ಹೋಗಿ ಸಾರ್ವಜನಿಕರು ಬೆನ್ನಟ್ಟತ್ತಿದ್ದಂತೆ ಕೂಡು ರಸ್ತೆಯಲ್ಲಿ ಕಾರು ಪಲ್ಟಿಯಾಗಿದೆ. ಪರಿಣಾಮ ಕಳ್ಳರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಈ ಘಟನೆಯಿಂದಾಗಿ ಕಾಣಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕ ವಲಯದಲ್ಲಿ ಅಕ್ರೋಶ ವ್ಯಕ್ತವಾಗಿದೆ.
ವಾರದ ಹಿಂದೆ ಕೂಡಾ ಒಂದು ಟೀಮ್ ಕಂಬಳಿ ಮಾರು ನೆಪದಲ್ಲಿ ದೋಳ್ಪಾಡಿಗೆ ಬಂದಿದ್ದರು. ಅವರು ಕೂಡಾ ಸಂಶಯಾಸ್ಪದವಾಗಿ ಕಾಣುತ್ತಿದ್ದರು. ಇಂತವರಿಗೆ ಕಠಿಣ ಶಿಕ್ಷೆಯಾಗಬೇಕು. ಯಾರೇ ಹೊರಗಿನವರು ಅಪರಿಚಿತರು ಊರಲ್ಲಿ ವ್ಯಾಪಾರ ಮಾಡಬೇಕಾದರೆ ಪಂಚಾಯಿತಿಯ ಅನುಮತಿ ಪಡೆದೇ ಕಾಲಿಡಬೇಕು, ಅನುಮತಿ ಇಲ್ಲದವರು ವ್ಯಾಪಾರಕ್ಕೆ ಬಂದರೆ ಅವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.