ಗೃಹ ಪ್ರವೇಶಗೊಳ್ಳಲಿದ್ದ ಮನೆಯಲ್ಲಿ ವಿದ್ಯುತ್ ಶಾಕ್: ಯಜಮಾನ ಸಾವು
Team Udayavani, Jan 15, 2021, 1:57 AM IST
ಪುತ್ತೂರು: ಸಂಪ್ಯದಲ್ಲಿ ಗೃಹ ಪ್ರವೇಶಕ್ಕೆ ಅಣಿಯಾಗಿದ್ದ ಮನೆಯಲ್ಲಿ ವಿದ್ಯುತ್ ಸಂಪರ್ಕದ ಕೆಲಸ ನಿರತ ವೇಳೆ ಮನೆ ಮಾಲಕನಿಗೆ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ಜ. 14ರಂದು ಸಂಭವಿಸಿದೆ.
ಸಂಪ್ಯದ ಉದಯಗಿರಿ ನಿವಾಸಿ, ಪರ್ಲಡ್ಕ ಬೈಪಾಸು ಬಳಿ ವಾಹನ ಮೆಕ್ಯಾನಿಕ್ ಆಗಿದ್ದ ಕೃಷ್ಣಪ್ಪ ನಾಯ್ಕ್ (45) ಮೃತಪಟ್ಟ ದುರ್ದೈವಿ.
ಗೃಹ ಪ್ರವೇಶಕ್ಕೆ ಸಿದ್ಧತೆ :
ಸಂಪ್ಯದ ಉದಯಗಿರಿಯಲ್ಲಿ ಕೃಷ್ಣಪ್ಪ ನಾಯ್ಕ ಅವರು ಹೊಸ ಮನೆ ಕಟ್ಟಿಸಿದ್ದು ಅದರ ಗೃಹಪ್ರವೇಶ ಜ. 16ರಂದು ನಿಗದಿಯಾಗಿತ್ತು. ಜ. 13ರಂದು ರಾತ್ರಿ ಗೃಹಪ್ರವೇಶದ ಕುಟ್ಟಿ ಪೂಜೆ ನೆರವೇರಿತ್ತು. ಜ. 14 ರಂದು ಸಂಜೆ ಹೊಸ ಮನೆಯಲ್ಲಿ ಕೃಷ್ಣಪ್ಪ ನಾಯ್ಕ್ ಅವರು ಪ್ಲಗ್ ಅಳವಡಿಸುವ ಕಾರ್ಯದಲ್ಲಿ ನಿರತರಾಗಿದ್ದಾಗ ಅವರಿಗೆ ವಿದ್ಯುತ್ ಶಾಕ್ ತಗುಲಿದೆ.
ತತ್‌ಕ್ಷಣ ಆಸ್ಪತ್ರೆಗೆ ಕೊಂಡು ಹೋಗಲಾಯಿತಾದರೂ ಅದಾಗಲೇ ಮೃತಪಟ್ಟಿದ್ದರು. ಸಹೋದರ ಚೋಮ ನಾಯ್ಕ್ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.