ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪಿಕಪ್ ವಾಹನ
Team Udayavani, Jun 19, 2021, 5:32 PM IST
ವಿಟ್ಲ: ಪೆರುವಾಯಿಯಿಂದ ಬೆರಿಪದವು ಕಡೆಗೆ ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಪೆರುವಾಯಿ ಸಂಕದ ಬಳಿ ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿದೆ.
ಪೆರುವಾಯಿ ಸಂಕ ಕಿರಿದಾಗಿದ್ದು, ಇದಕ್ಕೂ ಮೊದಲು ಇಳಿಜಾರು ಪ್ರದೇಶವಾದ್ದರಿಂದ ಪಿಕಪ್ ಬ್ರೇಕ್ ಸಮಸ್ಯೆಯಿಂದ ಸಂಕದ ಎದುರು ಭಾಗದಲ್ಲಿ ಅಡ್ಡಲಾಗಿ ಉರುಳಿ ಬಿದ್ದಿದೆ. ಚಾಲಕನ ಕೈಗೆ ತೀವ್ರವಾಗಿ ಗಾಯವಾಗಿದ್ದು, ಸ್ಥಳೀಯರು ತತ್ ಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಉರುಳಿ ಬಿದ್ದ ಲಾರಿ: ಚಾಲಕ ಅಪಾಯದಿಂದ ಪಾರು!
ಪಿಕಪ್ ನಲ್ಲಿದ್ದ ಹೆಚ್ಚಿನ ಕೋಳಿಗಳು ಸತ್ತಿದ್ದು, ಸ್ಥಳೀಯರ ಪಾಲಾಗಿದೆ. ಸ್ಥಳೀಯರ ನೆರವಿನಿಂದಿಗೆ ಪಿಕಪ್ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.