ದೈವಸ್ಥಾನ ವಠಾರದಲ್ಲಿ ಕ್ರಿಕೆಟ್ ಆಡಿದ್ದಕ್ಕೆ ಆಕ್ಷೇಪ: ಮಾತುಕತೆ ಮೂಲಕ ಪ್ರಕರಣ ಸುಖಾಂತ್ಯ
Team Udayavani, Jul 14, 2021, 5:22 PM IST
ಸುಳ್ಯ: ಇಲ್ಲಿನ ಜಯನಗರ ಸಮೀಪದ ಕೊರಂಬಡ್ಕ ಆದಿಮೊಗೆರ್ಕಳ ದೈವಸ್ಥಾನದಲ್ಲಿ ಕ್ರಿಕೆಟ್ ಆಡುತ್ತಿದ್ದದ್ದಕ್ಕೆ ಸಂಬಂಧಿಸಿ ವಿರೋಧ ವ್ಯಕ್ತಪಡಿಸಿದ ಕುರಿತ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ದೈವಸ್ಥಾನಕ್ಕೆ ಸಂಬಂಧಿಸಿದ ಜಾಗದಲ್ಲಿ ಗಿಡ ನೆಡಲು ಆಡಳಿತ ಮಂಡಳಿ ನಿರ್ಧರಿಸಿತ್ತು. ಅದಕ್ಕಾಗಿ ಅಲ್ಲಿ ಗುಂಡಿ ತೆಗೆಯಲಾಗಿತ್ತು. ಇದರಿಂದ ಕ್ರಿಕೆಟ್ ಆಡಲು ಆಗಲ್ಲ ಎಂಬ ಕಾರಣಕ್ಕೆ ಸ್ಥಳೀಯ ಕೆಲ ಯುವಕರು ಆಡಳಿತ ಮಂಡಳಿಯವರ ಕ್ರಮ ಸರಿಯಲ್ಲ ಎಂದು ಪ್ರತಿಭಟಿಸಿದರು. ದೈವಸ್ಥಾನ ಆಡಳಿತ ಮಂಡಳಿಯ ಪ್ರವೀಣ್ ಜಯನಗರ ಎಂಬವರು ಮಾತನಾಡಿ ಕ್ರಿಕೆಟ್ ಆಡಲು ಇಲ್ಲಿ ಅವಕಾಶವಿಲ್ಲ ಎಂದದ್ದಕ್ಕೆ ನಾವೂ ಹಿಂದುಗಳು ಎಂದು ಯುವಕರು ಮರು ಉತ್ತರಿಸಿದ್ದಾರೆ. ಇದರಿಂದ ಪ್ರವೀಣ್ ಅವರು ಇಲ್ಲ ಇಲ್ಲಿ ಕ್ರಿಶ್ಚಿಯನ್ ಕೂಡ ಇದ್ದಾರೆ ಎಂದು ಕ್ರಿಶ್ಚಿಯನ್ ಯುವಕನಿಗೆ ಹೊರಗೆ ಹೋಗುವಂತೆ ಹೇಳಿದ್ದಾರೆ. ಇದು ಧರ್ಮ ದ್ವೇಷ ಬಿತ್ತುವ ಮಾತು ಎಂದು ಕ್ರಿಕೆಟ್ ಆಡುವ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಐಸಿಯುನಲ್ಲಿ ಪುಟ್ಟ ಕಂದ: ಮಗು ಜನಿಸಿ 2 ತಿಂಗಳಾದ ಬಳಿಕ ಸತ್ಯ ಬಿಚ್ಚಿಟ್ಟ ನಟಿ ದಿಯಾ
ಬಳಿಕ ಪೊಲೀಸ್ ಠಾಣೆಗೆ ಎರಡೂ ತಂಡಗಳು ತೆರಳಿ ಮುಂದೆ ಈ ರೀತಿ ಆಗುವುದಿಲ್ಲ. ದೈವಸ್ಥಾನದ ಆವರಣದಲ್ಲಿ ಕ್ರಿಕೆಟ್ ಆಡುವ ಕ್ರಮ ಸರಿಯಲ್ಲ ಎಂಬ ಕುರಿತು ಮೊದಲೇ ಸಾರ್ವಜನಿಕವಾಗಿ ನಿರ್ಧಾರವಾಗಿದ್ದರೂ ಆಟ ಆಡಿದ್ದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದು ಬಿಟ್ಟರೆ ಧರ್ಮ ದ್ವೇಷ ಬಿತ್ತುವ ಉದ್ದೇಶ ನಮಗಿರಲಿಲ್ಲ ಎಂದು ಪ್ರವೀಣ್ ಅವರು ಪೊಲೀಸ್ ಠಾಣೆಯಲ್ಲಿ ತಿಳಿಸಿದ್ದಾರೆ.
ಸದ್ಯ ಮಾತುಕತೆಯಲ್ಲಿ ಈ ಪ್ರಕರಣ ಸುಖಾಂತ್ಯ ಕಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.