ಪುತ್ತೂರು ತಾಲೂಕಿನ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳ
1ನೇ ತರಗತಿಗೆ ಕಳೆದ ವರ್ಷ 1,883; ಈ ವರ್ಷ 1,903 ದಾಖಲು
Team Udayavani, Jul 10, 2019, 5:00 AM IST
ಪುತ್ತೂರು: ಪ್ರಸ್ತುತ ವರ್ಷಗಳಲ್ಲಿ ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದ್ದು, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪುತ್ತೂರಿನ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಗೆ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ. ಜೂನ್ ತಿಂಗಳ ಅಂತ್ಯದವರೆಗೆ ಸರಕಾರಿ ಶಾಲೆಯ 1ನೇ ತರಗತಿಗೆ 1,903 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
ತಾಲೂಕಿನ ಖಾಸಗಿ, ಅನುದಾನಿತ ಶಾಲೆಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಒಂದನೇ ತರಗತಿಗೆ ದಾಖಲಾತಿ ಕಡಿಮೆಯಾದರೂ ಸರಕಾರಿ ಶಾಲೆಗಳಲ್ಲಿ ಮಾತ್ರ ದಾಖಲಾತಿ ಏರಿಕೆಯಾಗಿದೆ. ಕಳೆದ ವರ್ಷ ತಾಲೂಕಿನ 180 ಸರಕಾರಿ ಶಾಲೆಗಳಿಗೆ 1,883 ವಿದ್ಯಾರ್ಥಿಗಳು ದಾಖಲಾಗಿದ್ದು, ಈ ಬಾರಿ 1,903 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
ತಾಲೂಕಿನ ಇತರೆಲ್ಲ ಶಾಲೆಗಳ ಪೈಕಿ ಒಂದನೇ ತರಗತಿಗೆ ಕಳೆದ ವರ್ಷ 4,837 ವಿದ್ಯಾರ್ಥಿಗಳು ದಾಖಲಾಗಿದ್ದು, ಈ ಬಾರಿ 4,507 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು 300 ಕಡಿಮೆ. ಆದರೆ ಸರಕಾರಿ ಶಾಲೆಗಳ ಒಂದನೇ ತರಗತಿಗೆ ಈ ತನಕ ಹೆಚ್ಚುವರಿಯಾಗಿ 20 ವಿದ್ಯಾರ್ಥಿಗಳು ದಾಖಲಾಗಿದ್ದು, ಇದು ಜೂನ್ ತಿಂಗಳ ಅಂತ್ಯದ ಅಂಕಿ-ಅಂಶವಾಗಿದ್ದು ಜುಲೈ ತಿಂಗಳ ವಿವರ ಇನ್ನಷ್ಟೇ ಬರಬೇಕಿದೆ.
ಹಾರಾಡಿಯಲ್ಲಿ ಹೆಚ್ಚು ದಾಖಲಾತಿ
ತಾಲೂಕಿನ ಒಟ್ಟು 180 ಸರಕಾರಿ ಪ್ರಾಥಮಿಕ ಶಾಲೆಗಳ ಪೈಕಿ ಕಳೆದ ಬಾರಿ ಚೆರು, ಕಲ್ಯಾರಬೈಲು, ಶಿರಾಡಿ, ಮಚ್ಚಿಮಲೆ ಹೀಗೆ 4 ಶಾಲೆಗಳಲ್ಲಿ ಒಂದನೇ ತರಗತಿಗೆ ಯಾವುದೇ ವಿದ್ಯಾರ್ಥಿಗಳು ದಾಖಲಾಗಿರಲಿಲ್ಲ. ಆದರೆ ಈ ಬಾರಿ ನನ್ಯ ಶಾಲೆಗೆ ಮಾತ್ರ ಶೂನ್ಯ ದಾಖಲಾತಿಯಾಗಿದೆ. ಕಳೆದ ಬಾರಿ ಹಾರಾಡಿ ಶಾಲೆಗೆ ಅತಿ ಹೆಚ್ಚು 57 ವಿದ್ಯಾರ್ಥಿಗಳು ದಾಖಲಾಗಿದ್ದು, ಒಟ್ಟು ಹಿರೇಬಂಡಾಡಿ,
ಉಪ್ಪಿನಂಗಡಿ ಹಾಗೂ ಕಾವು ಶಾಲೆಗೆ ತಲಾ 41 ವಿದ್ಯಾರ್ಥಿಗಳು ದಾಖಲಾಗಿದ್ದರು. ಈ ಬಾರಿ ಹಾರಾಡಿ ಶಾಲೆಗೆ ಅತಿ ಹೆಚ್ಚು ಅಂದರೆ 81 ವಿದ್ಯಾರ್ಥಿಗಳು ದಾಖಲಾಗಿದ್ದು, ಕುಂಬ್ರ, ಉಪ್ಪಿನಂಗಡಿ, ನೆಲ್ಯಾಡಿ, ಕೆಯ್ಯೂರು, ಹಿರೇಬಂಡಾಡಿ, ಆಲಂಕಾರು ಶಾಲೆಗಳಲ್ಲಿ 50ಕ್ಕಿಂತ ಅಧಿಕ ವಿದ್ಯಾರ್ಥಿಗಳು ಸೇರಿಕೊಂಡಿದ್ದಾರೆ.
ವಯಸ್ಸಿನ ಮಿತಿ ಕಾರಣ?
2017-18ನೇ ಸಾಲಿನಲ್ಲಿ ಒಂದನೇ ತರಗತಿಗೆ ವಿದ್ಯಾರ್ಥಿಗಳು ದಾಖಲಾಗಬೇಕಾದರೆ ವಿದ್ಯಾರ್ಥಿಗಳ ವಯಸ್ಸು 5 ವರ್ಷ 6 ತಿಂಗಳಾಗಿರಬೇಕು ಎಂದು ಸರಕಾರ ಆದೇಶಿಸಿದ್ದು, ಅದು ಸರಕಾರಿ ಶಾಲೆಗಳಿಗೆ ಹೊಡೆತ ನೀಡಿತ್ತು. ಆ ರೀತಿ ಬಾಕಿ ಉಳಿದ ವಿದ್ಯಾರ್ಥಿಗಳು ಕಳೆದ ವರ್ಷ ಹಾಗೂ ಈ ವರ್ಷ ವಯಸ್ಸಿನ ಮಿತಿ ದಾಟಿ ನಿಯಮದ ಪ್ರಕಾರ ಸರಕಾರಿ ಶಾಲೆಗಳಿಗೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿದೆ.
ಆಂಗ್ಲ ಶಿಕ್ಷಣದಿಂದ ಏರಿಕೆಸರಕಾರವು ಈ ಬಾರಿ ಆಯ್ದ ಸರಕಾರಿ ಶಾಲೆಗಳ ಒಂದನೇ ತರಗತಿಯಲ್ಲಿ ಆಂಗ್ಲ ಶಿಕ್ಷಣ ಆರಂಭಿಸಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ. ಜತೆಗೆ ಕಳೆದೆರಡು ವರ್ಷಗಳಲ್ಲಿ ಒಂದನೇ ತರಗತಿಗೆ ವಯಸ್ಸಿನ ಮಿತಿಯ ಕಾರಣದಿಂದಲೂ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ. –
ವಿಷ್ಣುಪ್ರಸಾದ್ ಸಿ. ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು
ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.