National Highway ಕಾಮಗಾರಿ ಪರಿಶೀಲನೆ: ಮಾರ್ಚ್ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ
Team Udayavani, Jan 11, 2025, 12:12 AM IST
ಬಂಟ್ವಾಳ: ಬಿ.ಸಿ. ರೋಡು-ಅಡ್ಡಹೊಳೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿ 2-3 ವಾರ ವಿಳಂಬವಾಗಿದ್ದು, ಆ ಬಳಿಕ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು, ಗುತ್ತಿಗೆ ಸಂಸ್ಥೆಯವರು ಭರವಸೆಯಂತೆ ಕಾಮಗಾರಿ ಮುಗಿಸುತ್ತ ಬಂದಿದ್ದಾರೆ. ಮಾರ್ಚ್ ಅಂತ್ಯಕ್ಕೆ ಶೇ. 95 ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ಅವರು ಶುಕ್ರವಾರ ಸಂಜೆ ಮಾಣಿಯಿಂದ ಬಿ.ಸಿ. ರೋಡುವರೆಗಿನ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿ ಪತ್ರಕರ್ತರ ಜತೆ ಮಾತನಾಡಿದರು. ಪ್ರಾರಂಭದಲ್ಲಿ ಪ್ರತೀ ಬಾರಿ ಕಚೇರಿ ಸಭೆಗಳ ಮೂಲಕ ಕಾಮಗಾರಿಯ ವಿವರ ಪಡೆದುಕೊಳ್ಳಲಾಗುತ್ತಿದ್ದು, ಪ್ರಸ್ತುತ ಸ್ಥಳ ಪರಿಶೀಲನೆ ಮಾಡುತ್ತಿದ್ದೇವೆ. ಗುತ್ತಿಗೆ ಸಂಸ್ಥೆಗೆ ವಾರಕ್ಕೆ ನಿಗದಿತವಾಗಿ ಗುರಿಯನ್ನು ನೀಡಲಾಗಿದ್ದು, ಅದರ ಪ್ರಕಾರವೇ ಅವರು ಪೂರ್ತಿಗೊಳಿಸಬೇಕಾಗುತ್ತದೆ ಎಂದವರು ತಿಳಿಸಿದರು.
ನರಹರಿ ಪರ್ವತದ ಬಳಿಕ ರಸ್ತೆ ವಿನ್ಯಾಸ ಕೊಂಚ ಬದಲಾ ವಣೆಯಾದ ಹಿನ್ನೆಲೆಯಲ್ಲಿ ಕಾಮಗಾರಿ ಕೊಂಚ ವಿಳಂಬವಾಗುವ ಸಾಧ್ಯತೆ ಇದ್ದು, ಬದಲಾವಣೆಯನ್ನು ಅನುಮೋದನೆಗೆ ಕಳುಹಿಸಲಾಗಿದೆ. ಒಂದೆರಡು ವಾರಗಳಲ್ಲಿ ಅದಕ್ಕೆ ಅನುಮೋದನೆ ಸಿಗಲಿದೆ. ಉಳಿದಂತೆ ಹೆದ್ದಾರಿ ಕಾಮಗಾರಿಯ ದೀರ್ಘ ಸಮಯದ ಸಾಕಷ್ಟು ಸಮಸ್ಯೆಗಳು ಪರಿಹಾರವಾಗಿದ್ದು, ಎತ್ತರಗೊಂಡ ರಸ್ತೆ, ಮೇಲ್ಸೇತುವೆ ವೇಗ ಪಡೆದುಕೊಂಡಿದೆ. ಬಿ.ಸಿ. ರೋಡು ಸರ್ಕಲ್ ಇನ್ನೂ ಪೂರ್ತಿಗೊಳ್ಳದೆ ಇರುವುದರಿಂದ ಗೊಂದಲ
ವಾಗಿ ಕಾಣುತ್ತಿದ್ದು, ಒಂದೊಂದು ಬದಿಯಿಂದ ಪೂರ್ತಿಗೊಳಿಸುತ್ತ ಬರುತ್ತಿದ್ದಾರೆ ಎಂದರು.
ಬಂಟ್ವಾಳ ತಹಶೀಲ್ದಾರ್ ಅರ್ಚನಾ ಡಿ. ಭಟ್, ಕಂದಾಯ ನಿರೀಕ್ಷಕರಾದ ಜನಾರ್ದನ್ ಜೆ., ವಿಜಯ್ ಆರ್, ಬಂಟ್ವಾಳ ಸಂಚಾರ ಠಾಣಾ ಪಿಎಸ್‌ಐ ಸುತೇಶ್ ಕೆ.ಪಿ. ಜತೆಗಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.