‘ಪಕ್ಷಿಗಳ ಅಧ್ಯಯನ ಶೋಧನೆಗೆ ಪ್ರೇರಕ’
Team Udayavani, Jan 3, 2018, 4:10 PM IST
ಅಡ್ಯನಡ್ಕ : ಪಕ್ಷಿಗಳ ಜೀವನ ವಿಧಾನ ಕುತೂಹಲಕರ ಹಾಗೂ ಆಸಕ್ತಿದಾಯಕ. ಇದರ ಅವಲೋಕನ, ಅಧ್ಯಯನ ಹೊಸ ಶೋಧನೆಗಳಿಗೆ ಪ್ರೇರಕವಾಗಿದೆ ಎಂದು ಹವ್ಯಾಸಿ ಪಕ್ಷಿ ವೀಕ್ಷಕ ಹಾಗೂ ಛಾಯಾಚಿತ್ರಗ್ರಾಹಕ ಅರವಿಂದ ಕುಡ್ಲ ಹೇಳಿದರು.
ಜನತಾ ಪ್ರೌಢಶಾಲೆಯ ಶ್ಯಾಮಲಾ ಇಕೋ ಕ್ಲಬ್ ವತಿಯಿಂದ ಜರಗಿದ ಪಕ್ಷಿಗಳ ನೋಟ, ಒಳನೋಟಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ‘ಪಕ್ಷಿ ನೋಟ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಬಳಿಕ ಪಕ್ಷಿಗಳ ನೂರಾರು ಚಿತ್ರಗಳನ್ನು ಸ್ಲೆ„ಡ್ ಶೋ ಮೂಲಕ ಪ್ರದರ್ಶಿಸಿದರು. ಹಿರಿಯ ಸಹ ಶಿಕ್ಷಕ ಎಸ್. ರಾಜಗೋಪಾಲ ಜೋಶಿ ಸ್ವಾಗತಿಸಿ, ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಆರ್. ನಾಯ್ಕ ವಂದಿಸಿದರು. ಶ್ಯಾಮಲಾ ಇಕೋ ಕ್ಲಬ್ ಮಾರ್ಗದರ್ಶಕ ಶಿಕ್ಷಕಿ ಕುಸುಮಾವತಿ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.