ಪುತ್ತೂರಿನ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಗೌರವ
ದಡ್ಡಾಲ ಮರದಿಂದ ಗೆದ್ದಲು ನಾಶಕ
Team Udayavani, Jun 27, 2019, 5:00 AM IST
ಪುತ್ತೂರು: ಮರದ ವಸ್ತುಗಳನ್ನು ವ್ಯಾಪಕವಾಗಿ ಬಾಧಿಸಿ ಹಾಳು ಮಾಡುವ ಗೆದ್ದಲುಗಳ ನಿಯಂತ್ರಣಕ್ಕೆ ದ.ಕ. ಜಿಲ್ಲೆಯಲ್ಲಿ ಹೇರಳವಾಗಿ ಸಿಗುವ ದಡ್ಡಾಲ ಮರದ ತೊಗಟೆಯನ್ನು ಬಳಸಿ ಗೆದ್ದಲು ನಾಶಕ ದ್ರಾವಣವನ್ನು ಸಂಶೋಧಿಸಿದ ಪುತ್ತೂರಿನ ಮಂಜಲ್ಪಡ್ಪು ಸುದಾನ ಶಾಲೆಯ ಮಕ್ಕಳು ಅಂತಾರಾಷ್ಟ್ರೀಯ ಮಟ್ಟದ ಮನ್ನಣೆಗೆ ಪಾತ್ರವಾಗಿದ್ದಾರೆ.
ಅಮೇರಿಕದ ನ್ಯೂಯಾರ್ಕ್ನ ಓಸ್ವೆಗೊ ಯುನಿವರ್ಸಿಟಿಯಲ್ಲಿ ಜೂ. 17ರಂದು ನಡೆದ ಅಂತಾರಾಷ್ಟ್ರೀಯ ಮಟ್ಟದ ಜೀನಿಯಸ್ ಒಲಿಂಪಿಯಾಡ್ನಲ್ಲಿ ಸುದಾನ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿಯರಾದ ಸ್ತುತಿ ಎಂ.ಎಸ್. ಮತ್ತು ಸಂಧ್ಯಾ ಪ್ರಭು ಅವರ ತಂಡವು ಈ ಸಂಶೋಧನೆಯನ್ನು ಮಂಡಿಸಿ ರಜತ ಪದಕವನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಒಟ್ಟು 79 ದೇಶದ 1269 ಪ್ರಾಜೆಕ್ಟ್ ಗಳು ಜೀನಿಯಸ್ ಒಲಿಂಪಿಯಾಡ್ನಲ್ಲಿ ಭಾಗವಹಿಸಿದ್ದು, ಪುತ್ತೂರಿನ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಗಮನಾರ್ಹ ಸಾಧನೆ
ಗೆದ್ದಲುಗಳ ಮೇಲೆ ದಡ್ಡಾಲ ಮರದ ತೊಗಟೆಯ ಜಲೀಯಸಾರದ ಪರಿಣಾಮಕಾರಿತ್ವದ ಒಂದು ಅಧ್ಯಯನ ವಿಷಯವು ರಜತ ಪದಕದೊಂದಿಗೆ, ಪ್ರಶಸ್ತಿ ಫಲಕ, ಎಚ್ಡಿ 8 ಅಮೆಜಾನ್ ಟ್ಯಾಬ್ಗಳನ್ನು ಪಡೆದುಕೊಂಡು ಗಮನಾರ್ಹ ಸಾಧನೆ ಮಾಡಿದೆ. ಈ ಸಂಶೋಧನೆಯು ಇನ್ಸೆಫ್ನ ವಿಭಾಗೀಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿತ್ತು. ಜತೆಗೆ ಯು.ಎಸ್. ಸೈನ್ಸ್ ಫೋರಂ ವತಿಯಿಂದ ಗುರುತಿಸಲ್ಪಟ್ಟು ಐರಿಸ್ ನ್ಯಾಷನಲ್ ಲೆವೆಲ್ ಸ್ಪರ್ಧೆಯಲ್ಲಿ 500 ಯು.ಎಸ್. ಡಾಲರ್ ಬಹುಮಾನವನ್ನು ಪಡೆದಿತ್ತು.
ಕೃತಕ ರಾಸಾಯನಿಕಗಳಿಲ್ಲ
ಈ ಜಲೀಯಸಾರವು ಮನೆಯ ಒಳಗೆ ಹಾಗೂ ಹೊರಾಂಗಣಗಳಲ್ಲಿ ಕಾಣಿಸುವ ಎಲ್ಲ ತರಹದ ಗೆದ್ದಲು ಹುಳುಗಳ ನಿರ್ಮೂಲನೆಗೆ ರಾಮಬಾಣವಾಗಿದ್ದು, ಯಾವುದೇ ಕೃತಕ ರಾಸಾಯನಿಕಗಳಿಲ್ಲದೇ ಇರುವುದರಿಂದ ಪರಿಸರಕ್ಕೆ ಮತ್ತು ಆರೋಗ್ಯಕ್ಕೆ ಹಾನಿಯನ್ನು ಉಂಟು ಮಾಡುವುದಿಲ್ಲ.
ಸ್ತುತಿ ಎಂ. ಎಸ್. ಅವರು ವಿವೇಕಾನಂದ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀಕೃಷ್ಣ ಗಣರಾಜ ಭಟ್ ಹಾಗೂ ಸೌಮ್ಯಾ ಭಟ್ ದಂಪತಿ ಪುತ್ರಿ ಹಾಗೂ ಬಿ. ಸಂಧ್ಯಾ ಪ್ರಭು ಅವರು ಉದ್ಯಮಿ ರಮೇಶ್ ಪ್ರಭು ಹಾಗೂ ರಜನಿ ಪ್ರಭು ದಂಪತಿ ಪುತ್ರಿ.
ಇವರಿಗೆ ಸುದಾನ ಶಾಲೆಯ ವಿಜ್ಞಾನ ಶಿಕ್ಷಕಿ ಸಾಧನಾ ಹೆಬ್ಟಾರ್ ಮತ್ತು ಶಂಕರ್ ಭಟ್ ಬದನಾಜೆ ಅವರು ಮಾರ್ಗದರ್ಶನ ನೀಡಿದ್ದರು. ವಿಜೇತರನ್ನು ಶಾಲಾ ಸಂಚಾಲಕ ವಂ| ವಿಜಯ ಹಾರ್ವಿನ್, ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್, ಆಡಳಿತ ಮಂಡಳಿಯ ಸದಸ್ಯರು ಮತ್ತು ಶಿಕ್ಷಕರು ಅಭಿನಂದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.