ಧರ್ಮಸ್ಥಳ: ಸಧೃಡ-ಸಶಕ್ತ-ಸ್ವಾಸ್ತ್ಯ ಜೀವನಕ್ಕಾಗಿ ಯೋಗ ಪರಿಕಲ್ಪನೆಯಲ್ಲಿ ಯೋಗ ದಿನಾಚರಣೆ
Team Udayavani, Jun 21, 2020, 12:39 PM IST
ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದ ವತಿಯಿಂದ ಭಾರತ ಸರಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಶಯದಂತೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಧಮಾರ್ಧಿಕಾರಿ ಡಾ: ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ, ಭಾರತ ಸರಕಾರದ ಆಯುಷ್ ಮಂತ್ರಾಲಯ ನಿರ್ದೇಶನದಲ್ಲಿ “ನನ್ನ ಜೀವನ-ಯೋಗ ಜೀವನ” ಮನೆಯೇ ಮೊದಲ ಯೋಗ ಚಾವಡಿ ಸಧೃಡ – ಸಶಕ್ತ – ಸ್ವಾಸ್ತ್ಯ ಜೀವನಕ್ಕಾಗಿ ಯೋಗ ಎಂಬ ಪರಿಕಲ್ಪನೆಯಲ್ಲಿ ರವಿವಾರ ಉಜಿರೆ ಅತ್ತಾಜೆ ಕೇಶವ ಭಟ್ ಮನೆಯಲ್ಲಿ 6ನೇ ವಿಶ್ವ ಯೋಗ ದಿನಾಚರಣೆಗೆ ಚಾಲನೆ ನೀಡಲಾಯಿತು.
ಶ್ರೀ ಧ.ಮ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಮಾತನಾಡಿ, ಧರ್ಮ ಮಾರ್ಗದಲ್ಲಿ ನಡೆಯಲು ಶರೀರವೇ ಮಾಧ್ಯಮ. ಶರೀರವು ಸ್ವಾಸ್ಥ್ಯ ವಾಗಿದ್ದರೆ ಮಾತ್ರ ಜೀವನದಲ್ಲಿ ನಾವು ಕಾಣುವ ಕನಸುಗಳನ್ನು ನನಸಾಗಿಸಲು ಸಾಧ್ಯ. ದೇಹವನ್ನು ಸದೃಢವಾಗಿಸಿ, ಮನಸ್ಸಿನ ಕಲ್ಮಶಗಳನ್ನು ದೂರಮಾಡಿ ನೆಮ್ಮದಿಯ ಬದುಕು ನಡೆಸಲು ಯೋಗ ಅತ್ಯುತ್ತಮ ಮಾರ್ಗ ಎಂದು ಹೇಳಿದರು.
ಕಳೆದ 5 ವರ್ಷಗಳಿಂದ ವಿಶ್ವ ಯೋಗ ದಿನವನ್ನು ಬೇರೆ ಬೇರೆ ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ-ಕಾಲೇಜಿನ ಮಕ್ಕಳನ್ನು ತರಬೇತುಗೊಳಿಸಿ ಒಂದೇ ವೇದಿಕೆಯಲ್ಲಿ ಯೋಗ ಪ್ರದರ್ಶಿಸುವ ಮೂಲಕ ಆಚರಿಸುತ್ತಿದ್ದೇವು. ಆದರೆ ಈ ವರ್ಷ ಯೋಗವು ಮನೆ ಮನೆಗಳಲ್ಲಿ ಪ್ರಾರಂಭವಾಗಬೇಕು ಎಂಬ ದೃಷ್ಟಿಯಿಂದ ವಿಶ್ವದಾದ್ಯಂತ 40 ಸಾವಿರ ಕುಟುಂಬ ಪಾಲ್ಗೊಂಡಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾದಿಕಾರಿ ಡಾ: ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ 6ನೇ ವಿಶ್ವ ಯೋಗ ಯಶಸ್ವಿಯಾಗಿದೆ ಎಂದರು.
ಉಜಿರೆ ಕೇಶವ ಭಟ್ ಅತ್ತಾಜೆ ಅವರ ಮನೆಯಲ್ಲಿ ಸಾಂಕೇತಿಕವಾಗಿ ಯೋಗ ಪ್ರದರ್ಶಿಸಲಾಯಿತು.
ಶ್ರೀ.ಧ.ಮ ಯೋಗ ಮತ್ತು ನ್ಯೆತಿಕ ಶಿಕ್ಷಣ ಯೋಜನೆಯ ನಿರ್ದೇಶಕರಾದ ಡಾ.ಶಶಿಕಾಂತ ಜೈನ್, ಕಾಲೇಜಿನ ಡೀನ್‍ಗಳಾದ ಡಾ.ಶಿವಪ್ರಸಾದ್ ಶೆಟ್ಟಿ, ಡಾ. ಬಾಲಕೃಷ್ಣ ಶೆಟ್ಟಿ, ಡಾ.ಸಂಜಾತಾ, ಡಾ.ಗೀತಾ, ಶಾಂತಿವನದ ಟ್ರಸ್ಟ್ ಕಾರ್ಯದರ್ಶಿ ಸೀತರಾಮ ತೋಳ್ಪಡಿತ್ತಾಯ ಮತ್ತಿರರು ಉಪಸ್ಥಿತರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.