ಅಪಾಯ ಆಹ್ವಾನಿಸುತ್ತಿದೆ ಚರಂಡಿ ಮುಚ್ಚಳ
Team Udayavani, May 23, 2019, 5:50 AM IST
ನಗರ: ನಗರದ ಹಳೆ ಅಂಚೆ ಬಜಾರ್ ಸಂಪರ್ಕಿಸುವಲ್ಲಿ ರಸ್ತೆಗೆ ಅಡ್ಡಲಾಗಿ ಹಾದು ಹೋಗಿರುವ ಚರಂಡಿಗೆ ಅಳವಡಿಸಲಾದ ಕಬ್ಬಿಣ ರಾಡ್‌ಗಳ ಮುಚ್ಚಳ ಬೆಂಡಾಗಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ.
ಚರಂಡಿಯ ಎಲ್ಲ ಭಾಗಕ್ಕೂ ಕಾಂಕ್ರೀಟ್ ಸ್ಲಾ ಬ್ ಅಳವಡಿಸಲಾಗಿದ್ದು, ಒಂದು ಬದಿಯಲ್ಲಿ ಮಳೆ ನೀರು ಚರಂಡಿಗೆ ಇಳಿಯಬೇಕು ಎನ್ನುವ ಕಾರಣಕ್ಕೆ ಕಬ್ಬಿಣದ ರಾಡ್ ಬಳಸಲಾಗಿದೆ. ಆದರೆ ವಾಹನದ ಒತ್ತಡದ ಪರಿಣಾಮ ಪ್ರಸ್ತುತ ರಾಡ್ ಬೆಂಡಾಗಿ ಚರಂಡಿಯ ಆಳಕ್ಕೆ ಇಳಿದಿದೆ. ಅಪಾಯಕಾರಿ ಅದನ್ನು ದುರಸ್ತಿ ಪಡಿಸದೆ ಮತ್ತೆ ವಾಹನಗಳು ಅದರ ಮೇಲೆಯೇ ಚಲಿಸಿದರೆ ರಾಡ್ ಪೂರ್ತಿ ಚರಂಡಿಗೆ ಇಳಿದು ವಾಹನಗಳು ಅಲ್ಲೇ ಬಾಕಿಯಾಗುವ ಅಪಾಯವೂ ಎದುರಾಗಿದೆ. ಜತೆಗೆ ಪಾದಚಾರಿಗಳು ಹೊಂಡವನ್ನು ಗಮನಿಸದೇ ತೆರಳಿದರೆ ಕಾಲು ಚರಂಡಿಗೆ ಸಿಲುಕುವ ಅಪಾಯವೂ ಇದೆ.
ಇಚ್ಛಾಶಕ್ತಿ ಪ್ರದರ್ಶಸಲಿ
ಪುತ್ತೂರು ನಗರದಲ್ಲಿ ಇದೇ ರೀತಿ ಹಲವು ಕಡೆಗಳಲ್ಲಿ ಚರಂಡಿಗೆ ಅಳವಡಿಸಿರುವ ಸ್ಲಾéಬ್ ತುಂಡಾಗಿದ್ದು, ಅದನ್ನು ದುರಸ್ತಿಪಡಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸಂಬಂಧಪಟ್ಟ ನಗರಸಭೆಗೆ ಇದನ್ನು ದುರಸ್ತಿ ಪಡಿಸುವುದು ದೊಡ್ಡ ವಿಚಾರವಲ್ಲ. ಆದರೆ ಅಧಿಕಾರಿಗಳು ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.