ಇರ್ದೆ: ವಿದ್ಯುತ್ತಿದ್ದರೆ ಮಾತ್ರ ನೆಟ್‌ವರ್ಕ್!
Team Udayavani, Jun 10, 2019, 6:10 AM IST
ಈಶ್ವರಮಂಗಲ: ಸರಕಾರಿ ಸ್ವಾಮ್ಯದ ಏಕೈಕ ದೂರಸಂಪರ್ಕ ವ್ಯವಸ್ಥೆ ಬಿಎಸ್ಸೆನ್ನೆಲ್ ಸ್ಥಿರ, ಸಂಚಾರಿ ದೂರವಾಣಿ ಮತ್ತು ನೆಟ್‌ವರ್ಕ್‌ನ ನಿರ್ವಹಣೆ ಮಾಡುತ್ತಿದೆ. ಸ್ಥಿರ ದೂರವಾಣಿಯ ಅತೀ ದೊಡ್ಡ ಪೂರೈಕೆದಾರರಾಗಿ, ಬ್ರಾಂಡ್ ಬ್ಯಾಂಡ್ ಸೇವೆಯನ್ನು ನೀಡುತ್ತಿರುವ ಬಿಎಸ್ಸೆನ್ನೆಲ್ ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಮೊಬೈಲ್ ಕಂಪೆನಿಗಳ ತೀವ್ರ ಸ್ಪರ್ಧೆಯಿಂದ ಆದಾಯ, ಬಳಕೆದಾರರ ಸಂಖ್ಯೆ ಕಡಿಮೆಯಾಗಿದೆ.
ಬೆಟ್ಟಂಪಾಡಿ ಗ್ರಾ.ಪಂ. ವ್ಯಾಪ್ತಿಯ ಇರ್ದೆಯ ಲ್ಲಿರುವ ಬಿಎಸ್ಸೆನ್ನೆಲ್ ವಿನಿಮಯ ಕೇಂದ್ರದಲ್ಲಿ 201 ಸ್ಥಿರ ದೂರವಾಣಿ ಮತ್ತು 65 ಬ್ರಾಂಡ್‌ಬ್ಯಾಂಡ್ ಸಂಪರ್ಕ ಹೊಂದಿದ್ದು, ತಾಲೂಕಿನ ಹೆಚ್ಚು ಬಳಕೆದಾರರನ್ನು ಹೊಂದಿದ ವಿನಿಮಯ ಕೇಂದ್ರ ಎನಿಸಿದೆ. ಈ ಸಂಸ್ಥೆಯ ಸೇವೆ ಸಿಗಬೇಕಾದರೆ ಮೆಸ್ಕಾಂನಿಂದ ಗುಣಮಟ್ಟದ ತ್ರಿಫೇಸ್ ವಿದ್ಯುತ್ ಸಿಗಬೇಕು. ಇಲ್ಲಿನ ಬಳಕೆದಾರರು ಈ ಸಂಸ್ಥೆಯನ್ನು ಹೆಚ್ಚು ನೆಚ್ಚಿಕೊಂಡಿ ದ್ದಾರೆ. ಇತರ ಖಾಸಗಿ ಕಂಪೆನಿಯ ನೆಟ್‌ವರ್ಕ್ ಇಲ್ಲಿಲ್ಲ. ಬಿಎಸ್ಸೆನ್ನೆಲ್ ಕೇಂದ್ರಕ್ಕೆ ಡೀಸೆಲ್, ಸಿಬಂದಿ ಕೊರತೆ ಎಡೆಬಿಡದೆ ಕಾಡುತ್ತಲಿದೆ.
ಸಿಬಂದಿಗೆ ಕಾರ್ಯದೊತ್ತಡ
ಒರ್ವ ಲೈನ್‌ಮನ್ ಮತ್ತು ಒರ್ವ ಟೆಕ್ನೀಷಿಯನ್ ಮಾತ್ರ ಖಾಯಂ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಲೈನ್‌ಮ್ಯಾನ್ ನಿರ್ವಹಣೆ ಮಾಡಲು ಹೋಗಬೇಕಾಗಿದೆ. ಟೆಕ್ನೀಷಿಯನ್ ಇತರ ಕೆಲವು ಕೇಂದ್ರಗಳಿಗೆ ತೆರಳಬೇಕಾಗುತ್ತದೆ.
ಈ ಕೇಂದ್ರದ ಜತೆ ನಿರಂತರ ಸಂಪರ್ಕ ಹೊಂದಿದ್ದು ಸಮಸ್ಯೆಗೆ ಸ್ಪಂದಿಸುವುದರಿಂದ ಬಳಕೆದಾರರಿಂದ ಸಿಬಂದಿಯ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿಬರುತ್ತಿದೆ. ಕೇಂದ್ರದಲ್ಲಿ ರಾತ್ರಿ ಸಮಯದಲ್ಲಿ ಕಾವಲು ಗಾರರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿದ್ದು, ಸರಿಯಾದ ವೇತನ ಸಿಗದೇ ಇರುವುದರಿಂದ ಅವರು ಕರ್ತವ್ಯಕ್ಕೆ ಗೈರಾಗಿದ್ದಾರೆ. ಇದರಿಂದ ರಾತ್ರಿ ಸಮಯ ಗುಡುಗು, ಮಿಂಚುಗಳು ಬಂದರೆ ಕೇಂದ್ರಕ್ಕೆ ಅಪಾಯ ಹೆಚ್ಚು. ಕೂಡಲೇ ಸಿಬಂದಿ ಯನ್ನು ನೇಮಕ ಮಾಡುವಂತೆ ಬಳಕೆದಾರರು ಒತ್ತಾಯಿಸಿದ್ದಾರೆ.
ಸೂಕ್ತ ಕ್ರಮ ಕೈಗೊಳ್ಳಿ
ಇರ್ದೆ ದೂರವಾಣಿ ವಿನಿಮಯ ಕೇಂದ್ರಕ್ಕೆ ಗುಣಮಟ್ಟದ ವಿದ್ಯುತ್ ಬೇಕಾಗಿದೆ. ಡೀಸೆಲ್ ಪೂರೈಕೆಯಾಗದೆ ಮತ್ತು ಸಿಬಂದಿ ಕೊರತೆಯಿಂದ ಬಳಕೆದಾರರಿಗೆ ತೊಂದರೆ ಯಾಗುತ್ತದೆ. ಖಾಸಗಿ ಕಂಪೆನಿಗಳ ಟವರ್‌ಗಳು ಇಲ್ಲದೇ ಇರುವುದರಿಂದ ಹೆಚ್ಚಿನ ಗ್ರಾಹಕರು ಬಿಎಸ್ಸೆನ್ನೆಲ್ ಅನ್ನೇ ಅವಲಂಬಿಸಿದ್ದಾರೆ. ಅಧಿಕಾರಿಗಳು, ಜನಪ್ರತಿ ನಿಧಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
– ಪ್ರಕಾಶ್ ರೈ ಬೈಲಾಡಿ, ಬಿಎಸ್ಸೆನ್ನೆಲ್ ಗ್ರಾಹಕ
ಪ್ರಧಾನ ಮಂತ್ರಿಗೆ ಪತ್ರ
ಬೆಟ್ಟಂಪಾಡಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಈ ಕೇಂದ್ರ ಬಗ್ಗೆ ವಿಷಯ ಪ್ರಸ್ತಾವವಾಗಿತ್ತು. ಸದಸ್ಯ ವಿನೋದ್ ಕುಮಾರ್ ರೈ ಗುತ್ತು ಮಾತನಾಡಿ, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯಕ್ಕೆ ವಿನಿಮಯ ಕೇಂದದ ಸಮಸ್ಯೆಯನ್ನು ತಿಳಿಸುವಂತೆ ಮನವಿ ಮಾಡಿದ್ದರು. ಸ್ವಲ್ಪ ಸಮಯ ಚರ್ಚೆ ನಡೆದು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆಯುವುದಾಗಿ ಗ್ರಾ.ಪಂ. ನಿರ್ಣಯ ಕೈಗೊಂಡಿತ್ತು.
– ಮಾಧವ ನಾಯಕ್ ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.