ಅವ್ಯವಹಾರ ಆರೋಪ: ತನಿಖೆಗೆ ಆಗ್ರಹಿಸಿ ದೂರು
Team Udayavani, Sep 21, 2018, 2:15 PM IST
ಬೆಳ್ತಂಗಡಿ : ಉಜಿರೆ ಗ್ರಾ.ಪಂ.ನ 2017-18ನೇ ಸಾಲಿನ ಜಮಾಬಂದಿ ಪಂ. ಸುವರ್ಣಸೌಧ ಸಭಾಭವನದಲ್ಲಿ ಜರಗಿತು. ಉಜಿರೆ ಗ್ರಾ.ಪಂ. ಅಧ್ಯಕ್ಷ ಶ್ರೀಧರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಪ್ರಸನ್ನಭಕ್ತ ಕೆ.ಆರ್. ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಲೆಕ್ಕ ಅಧೀಕ್ಷಕ ಕೆ. ಸದಾನಂದ ಆಚಾರ್ ಜಮಾಬಂದಿ ನಡೆಸಿಕೊಟ್ಟರು. ಉಜಿರೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ. 2017-18ನೇ ಸಾಲಿನ ಲೆಕ್ಕಪತ್ರ, ಜಮಾ ಖರ್ಚಿನ ವರದಿ ಮಂಡಿಸಿದರು. ಗತವರ್ಷದಲ್ಲಿ ಸಾಮಗ್ರಿಗಳ ಖರೀದಿ, ಕಾಮಗಾರಿ ವಿವರ, ಖರ್ಚು, ಉದ್ಯೋಗ ಖಾತರಿ ಯೋಜನೆ ಗಳ ಕಾಮಗಾರಿ ಕುರಿತು ವರದಿ ಮಂಡಿಸಿದರು.
ಲಿಖಿತ ದೂರು
ಬಾಲಸುಬ್ರಹ್ಮಣ್ಯ ಭಟ್ ಅವರು ಪಂ. ಲೆಕ್ಕಪತ್ರ, ವ್ಯವಹಾರಗಳು ಪಾರದರ್ಶಕವಾಗಿಲ್ಲ. ಸಮಗ್ರ ತನಿಖೆ ನಡೆಸಬೇಕು ಎಂದು ಲಿಖಿತ ದೂರನ್ನು ಮಾರ್ಗದರ್ಶಿ ಅಧಿಕಾರಿಗಳಿಗೆ ನೀಡಿದರು. ತೆರಿಗೆ ಬಾಕಿ ವಿವರ ಸಮರ್ಪಕವಾಗಿಲ್ಲ. ಗುತ್ತಿಗೆದಾರರ ಟೆಂಡರ್ ಪ್ರಕ್ರಿಯೆ ನಿಯಮಾವಳಿಯಂತೆ ನಡೆದಿಲ್ಲ. ಕಳಪೆ ಕಾಮಗಾರಿಗಳಿಗೂ ಬಿಲ್ ಪಾವತಿಸಲಾಗಿದೆ. ಬೀದಿದೀಪ ನಿರ್ವಹಣೆ ಸಮರ್ಪಕವಾಗಿಲ್ಲ. ಘನತ್ಯಾಜ್ಯ ವಿಲೇವಾರಿ, ಅಂಗಡಿ ಕೋಣೆಗಳ ಬಾಡಿಗೆ, ನಳ್ಳಿ ನೀರಿನ ಬಿಲ್ ಪಾವತಿ, ಕ್ರಿಯಾಯೋಜನೆ, ಗ್ರಾ.ಪಂ. ನಡವಳಿಗಳು ಪಾರದರ್ಶಕವಾಗಿರದೆ ಅವ್ಯವಹಾರಗಳು ಕಂಡು ಬರುತ್ತಿದ್ದು, ಪರಿಶೀಲನೆ ನಡೆಸಬೇಕೆಂದು ಮನವಿ ಸಲ್ಲಿಸಿದರು.
ಗ್ರಾಮಸ್ಥರ ಎರಡು ಮನೆ ತೆರಿಗೆ ರಶೀದಿಯ ಯಥಾಪ್ರತಿಯನ್ನು ತೆರಿಗೆ ಮೊತ್ತದ ವ್ಯತ್ಯಾಸವನ್ನು ಮಾರ್ಗದರ್ಶಿ ಅಧಿಕಾರಿಗಳ ಗಮನಕ್ಕೆ ತಂದು ಇನ್ನೆಷ್ಟು ರಶೀದಿಗಳಲ್ಲಿ ಮೊತ್ತದ ವ್ಯತ್ಯಾಸವಿದೆಯೋ ಎಂದು ಸಂದೇಹ ವ್ಯಕ್ತಪಡಿಸಿದರು. ಕಾಮಗಾರಿಗಳಿಗೆ ಆಡಳಿತ ಮಂಜೂರಾತಿಯಿಲ್ಲ. ಯಾವ ರಿಜಿಸ್ಟರ್‌ಗಳೂ ಪಾರದರ್ಶಕವಾಗಿ ಸರಿಯಿಲ್ಲ. ತೆರಿಗೆ ರಿಜಿಸ್ಟರ್, ಕುಡಿಯುವ ನೀರಿನ ಬಿಲ್, ಕಾಮಗಾರಿಗಳಿಗೆ ಕೊಟೇಶನ್ ಕರೆಯಲಿಲ್ಲ ಮೊದಲಾದ ಲೋಪದೋಷಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಉಜಿರೆ ಗ್ರಾ.ಪಂ. ಸದಸ್ಯರು, ಸಿಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು. ಉಜಿರೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ. ಸ್ವಾಗತಿಸಿ, ವಂದಿಸಿದರು.
ಗೇಟಿಗೆ ಬೀಗ
ಅತ್ತಾಜೆಯ ಜನತಾ ಕಾಲನಿ ಕಾಮಗಾರಿ ಮತ್ತು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಥಳ ಪರಿಶೀಲನೆಗೆ ಹೋಗಬೇಕೆಂದು ಅಧಿಕಾರಿಗಳ ಹೇಳಿಕೆಯಂತೆ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಹೋದಾಗ ಅಲ್ಲಿ ಗೇಟಿಗೆ ಬೀಗ ಹಾಕಿದ್ದು, ಬೀಗದ ಕೀ ಯಾರಲ್ಲಿದೆ ಎಂದೇ ತಿಳಿಯದೆ ಮರಳಿ ಬರಬೇಕಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.