ಹೆಣ್ಣು ಮಗುವಿನ ಸುರಕ್ಷತೆ ಎಂದಿಗೂ ನಮ್ಮ ಕರ್ತವ್ಯ


Team Udayavani, Jan 24, 2020, 5:50 AM IST

kaa-30

ಹೆಣ್ಮಕ್ಕಳು ಮನೆಯ ಕಣ್ಣಿದ್ದಂತೆ ಆಕೆಯ ಸುರಕ್ಷತೆ ನಮ್ಮ ಆದ್ಯ ಕರ್ತವ್ಯ. ಹಾಗಾಗಿ ಪ್ರತಿ ಮನೆಗಳಲ್ಲಿ ಅವಳಿಗೆ ಸೂಕ್ತ ಸ್ಥಾನಮಾನ ಸಿಕ್ಕಿ, ಸಮಾಜದ ಒಬ್ಬ ಗೌರವಯುತ ಪ್ರಜೆಯಾಗಿ ಆಕೆ ಬಾಳಬೇಕು. ಅಂದಾಗ ಮಾತ್ರ ನಮ್ಮ ದೇಶ ಪ್ರಗತಿ ಪಥದಲ್ಲಿ ನಡೆಯಲು ಸಾಧ್ಯ.

“ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ’ ಈ ಶ್ಲೋಕವೇ ಹೇಳುವಂತೆ ಎಲ್ಲಿ ನಾರಿಯನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆನೆಸಿರುತ್ತಾರೆ. ಹಾಗೇ ಯಾವ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸರಿಯಾದ ಸ್ಥಾನಮಾನ ನೀಡುತ್ತಾರೋ ಅಲ್ಲಿ ಧರ್ಮ ನೆಲೆಸಿರುತ್ತದೆ ಎಂದು ಬಲ್ಲವರು ಹೇಳುತ್ತಾರೆ. ನಾವೆಲ್ಲರೂ ಹೆಣ್ಣುಮಗುವಿನ ಸುರಕ್ಷತೆ ಬಗ್ಗೆ ಯೋಚಿಸಬೇಕು. ಆಗ ಮಾತ್ರ ಆಕೆ ಯಾವುದೇ ನಿರ್ಭಯವಿಲ್ಲದೆ ಬದುಕಲು ಸಾಧ್ಯ.

ಪ್ರತಿ ಮನೆಯಲ್ಲಿಯೂ ಹೆಣ್ಣು ಮಗುವನ್ನು ಮನೆಯ ಲಕ್ಷ್ಮೀಯಂತೆ ಬೆಳೆಸುತ್ತಾರೆ. ಆಕೆಗೆ ಯಾವುದೇ ರೀತಿ ತೊಂದರೆ ಬರದಂತೆ ಎಚ್ಚರ ವಹಿಸುತ್ತಾರೆ. ಆದರೆ ಇನ್ನು ಕೆಲವೆಡೆ ಹೆಣ್ಣು ಭ್ರೂಣ ಹತ್ಯೆ, ಬಾಲ್ಯವಿವಾಹ, ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ, ಲಿಂಗತಾರತಮ್ಯ, ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಈ ಆಧುನಿಕ ಯುಗದಲ್ಲಿ ಎಷ್ಟೇ ಹೆಣ್ಣು ಮಕ್ಕಳಿಗೆ ಸ್ಥಾನಮಾನ ನೀಡುತ್ತಿದ್ದೇವೆ ಎಂದರೂ ತಂದೆ ತಾಯಿ ತಮ್ಮ ಮಗುವನ್ನು ಶಾಲೆಗೆ ಕಳುಹಿಸಲು, ಆಟವಾಡಲು, ಕೆಲಸಕ್ಕೆ ಕಳುಹಿಸಲು, ಸಂಬಂಧಿಕರ ಮನೆಗೆ ಕಳುಹಿಸಲು ಹೆದರುವ ಪರಿಸ್ಥಿತಿ ಬಂದಿದೆ. ಅದಕ್ಕಾಗಿಯೇ ಈ ಎಲ್ಲ ಸಂಕಷ್ಟಗಳನ್ನು ಮೀರಿ ನಿಲ್ಲಲು ಈ ದಿನವನ್ನು ಆಚರಿಸಲಾಗುತ್ತಿದ್ದು ಪ್ರತಿಯೊಬ್ಬರೂ ಇದರ ಬಗ್ಗೆ ಅರಿವು ಮೂಡಿಸಬೇಕಾಗಿದೆ.

ಉದ್ದೇಶ
ಹೆಣ್ಣು ಮ್ಕಕಳು ಸಮಾಜದಲ್ಲಿ ಎದುರಿಸುತ್ತಿರುವ ಎಲ್ಲ ಅಸಮಾನತೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಅವರ ಸುರಕ್ಷತೆ ಮತ್ತು ಶಿಕ್ಷಣದ ಬಗ್ಗೆ ಅರಿವು ಬೆಳೆಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.

ಜಾಗೃತಿ ದಿನ
ಇಂದಿನ ಕಾಲಘಟ್ಟದಲ್ಲಿ ಹೆಣ್ಣು ಪ್ರತಿಕ್ಷಣ ಶೋಷಣೆಗೆ ಒಳಗಾಗುತ್ತಿದ್ದಾಳೆ. ಇಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳನ್ನು ಜಾಗೃತಗೊಳಿಸುವುದಕ್ಕಾಗಿ ಭಾರತದಲ್ಲಿ ಜ. 24ರಂದು ರಾಷ್ಟ್ರೀಯ ಹೆಣ್ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ 2008ರಿಂದ ಈ ದಿನವನ್ನು ಆಚರಿಸುತ್ತದೆ. ಹೆಣ್ಮಕ್ಕಳ ರಕ್ಷಣೆ, ಲಿಂಗ ತಾರತಮ್ಯ, ಸಮಾಜದಲ್ಲಿ ಅವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಾದ ಜಾಗೃತಿಗೊಳಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.

2019ರಲ್ಲಿ ಉತ್ತಮ ನಾಳೆಗಾಗಿ ಹೆಣ್ಣು ಮಕ್ಕಳನ್ನು ಸಶಕ್ತಗೊಳಿಸುವುದು ಎಂಬ ಥೀಮ್‌ ಅನ್ನು ಇಟ್ಟುಕೊಂಡು ಕಳೆದ ವರ್ಷದ ಈ ದಿನವನ್ನು ಆಚರಿಸಲಾಗಿತ್ತು.

ಅರಿವು ನಮ್ಮಿಂದಲೂ ಸಾಧ್ಯ
ಹೆಣ್ಣು ಮಗುವಿನ ಮಹತ್ವದ ಬಗ್ಗೆ ಹೆತ್ತವರಲ್ಲಿ ಜಾಗೃತಿ ಮೂಡಿಸುವುದು.
ಆರೋಗ್ಯ, ಶಿಕ್ಷಣ ಸಹಿತ ಹೆಣ್ಣು ಮಗು ಎದುರಿಸುವ ಸವಾಲುಗಳನ್ನು ನಿವಾರಿಸುವುದು.
ಲಿಂಗಸಮಾನತೆಯ ಬಗ್ಗೆ ಜಾಗೃತಿ ಜಾಥಾ
14 ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ
ಹಿಂದುಳಿದ ಪ್ರದೇಶದ ಮಕ್ಕಳಿಗೆ ಸರಿಯಾದ ಶಿಕ್ಷಣ ವ್ಯವಸ್ಥೆ
ಕಡ್ಡಾಯ ವಿವಾಹ ನೋಂದಣಿ ಮಾಡಿಸಲು ಜಾಗೃತಿ
ಹೆಣ್ಮಕ್ಕಳ ಸುರಕ್ಷತೆಗೆ ಹೆಚ್ಚಿನ ಕ್ರಮ ವಹಿಸುವುದು
ಗರ್ಭಿಣಿಯರಿಗೆ ಪ್ರಸವಪೂರ್ವ ಆರೋಗ್ಯ ಸೇವೆಯ ಸೌಲಭ್ಯ.
ಹೆಣ್ಣು ಮಗುವಿನ ಲಿಂಗಾನುಪಾತ ಕುಸಿಯದಿರಲು ಕಾರ್ಯಯೋಜನೆ
ಮಗುವಿನ ಆರೋಗ್ಯ, ಜೀವನಶೈಲಿ ಸುಧಾರಿಸಲು ಕ್ರಮ

ಹೆಣ್ಮಕ್ಕಳ ಸುರಕ್ಷೆಗಾಗಿ ಹಲವು ಕಾನೂನು
ಹೆಣ್ಣು ಮಗುವಿನ ಸುರಕ್ಷತೆ ಮತ್ತು ಭದ್ರತೆಗಾಗಿ ಸರಕಾರವು ಹಲವಾರು ಕಾನೂನುಗಳನ್ನು ರಚಿಸಿದೆ. ಹೆಣ್ಮಕ್ಕಳಿಗೆ ತೊಂದರೆ ಅಥವಾ ಹಿಂಸೆ ನೀಡಿದರೆ ಅವರ ವಿರುದ್ಧ ಕಠಿನವಾದ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಹೆಣ್ಮಕ್ಕಳ ಸುರಕ್ಷತೆಗೆ ರೂಪಿಸಿರುವ ಕಾನೂನುಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಬಾಲ್ಯ ವಿವಾಹ ನಿಷೇಧ ಕಾಯ್ದೆ: ಬಾಲ್ಯ ವಿವಾಹ ತಡೆಗಾಗಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು 2006ರಲ್ಲಿ ಜಾರಿಗೊಳಿಸಲಾಗಿದೆ. ಈ ಕಾಯ್ದೆಯ ಪ್ರಕಾರ ಬಾಲ್ಯ ವಿವಾಹಕ್ಕೆ ಮುಂದಾಗುವವವರಿಗೆ ಮತ್ತು ಸಂಬಂಧಪಟ್ಟವರಿಗೆ ಕಠಿನ ಶಿಕ್ಷೆ ವಿಧಿಸಲಾಗುತ್ತದೆ.

ಉಚಿತ ಕಡ್ಡಾಯ ಶಿಕ್ಷಣದ ಹಕ್ಕು: ಪ್ರತಿ ಹೆಣ್ಮಗುವಿಗೆ 14 ವರ್ಷದವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕಿದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು ಕಾಯ್ದೆ 2009 ಅಡಿಯಲ್ಲಿ, 6 ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ನೆರೆಹೊರೆಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣದ ಹಕ್ಕಿದೆ.

ಮೆಡಿಕಲ್‌ ಟರ್ಮಿನೇಶನ್‌ ಆಫ್ ಪ್ರಗ್ನೆನ್ಸಿ ಆ್ಯಕ್ಟ್ (1971): ಈ ಆ್ಯಕ್ಟ್ ನ ಪ್ರಕಾರ ಹೆಣ್ಣು ಗರ್ಭವತಿಯಿದ್ದಾಗ ಲಿಂಗ ಪತ್ತೆ ಮಾಡುವುದು ಅಪರಾಧವಾಗಿದೆ. ವೈದ್ಯಕೀಯ ಮುಕ್ತಾಯದ ಗರ್ಭಧಾರಣೆಯ ಕಾಯ್ದೆ (1971) ಅಥವಾ ಎಂಟಿಪಿಎ ಸೆಕ್ಷನ್‌ 3 (4) (ಬಿ) ಪ್ರಕಾರ ಗರ್ಭಿಣಿ ಮಹಿಳೆಯ ಒಪ್ಪಿಗೆಯೊಂದಿಗೆ ಹೊರತುಪಡಿಸಿ ಯಾವುದೇ ಗರ್ಭಧಾರಣೆಯನ್ನು ಮಾಡಲಾಗುವುದಿಲ್ಲ.

ವರದಕ್ಷಿಣೆ ನಿಷೇಧ ಕಾಯ್ದೆ, 1961: ಸಮಾಜದ ಬಹುದೊಡ್ಡ ಪಿಡುಗಾದ ವರದಕ್ಷಿಣೆ ನಿಷೇಧ ಕಾಯ್ದೆಯನ್ನು 1961ರಲ್ಲಿ ಜಾರಿಗೊಳಿಸಲಾಗಿದೆ. ಈ ಕಾಯ್ದೆಯ ಪ್ರಕಾರ ಮದುವೆ ಸಂದರ್ಭ ಹೆಣ್ಮುವಿನ ಹೆತ್ತವರಲ್ಲಿ ವರದಕ್ಷಿಣೆ ತೆಗೆದುಕೊಳ್ಳುವುದು ಕಾನೂನಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ.

ಹೆಣ್ಮಕ್ಕಳ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರದಲ್ಲಿರುವ ಕೆಲವು ಮಹತ್ವದ ಯೋಜನೆಗಳು
1 ಸುಕನ್ಯಾ ಸಮೃದ್ಧಿ ಯೋಜನೆ
2 ಬೇಟಿ ಬಚಾವೋ, ಬೇಟಿ ಪಡಾವೋ
3 ಬಾಲಿಕಾ ಸಮೃದ್ಧಿ ಯೋಜನಾ
4 ಭಾಗ್ಯಲಕ್ಷ್ಮೀ ಬಾಂಡ್‌ ವಿತರಣೆ
5 ಸಿಬಿಎಸ್‌ಇ ಸ್ಕಾಲರ್‌ಶಿಪ್‌ ಸ್ಕೀಮ್‌
6 ಧನಲಕ್ಷ್ಮೀ ಸ್ಕೀಮ್‌
7 ನ್ಯಾಶನಲ್‌ ಸ್ಕೀಮ್‌ ಆಫ್ ಇನ್ಸೆಂಟಿವ್‌ ಟು ಗರ್ಲ್ಸ್‌ ಫಾರ್‌ ಸೆಕೆಂಡರಿ ಎಜುಕೇಶನ್‌

ಟಾಪ್ ನ್ಯೂಸ್

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

1-qwqwewq

Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Ravishankar

Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

1-qwqwewq

Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Ravishankar

Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.