ಮಸೀದಿ ನಿರ್ಮಾಣದ ಸಂಪತ್ತು ಪವಿತ್ರವಾಗಿರುವುದು ಕಡ್ಡಾಯ

Team Udayavani, Jul 12, 2019, 5:08 AM IST

masidi-nirmana

ಸವಣೂರು: ಜಗತ್ತಿನ ಪ್ರತಿಯೊಂದು ಮಸೀದಿಯೂ ಪವಿತ್ರ ಕಾಬಾಗೆ ಮುಖ ಮಾಡಿಕೊಂಡಿರುತ್ತದೆ. ಕಾಬಾ ಪವಿತ್ರವಾಗಿ ನಿರ್ಮಾಣವಾಗಿದೆ. ಜಗತ್ತಿನಲ್ಲಿ ನಿರ್ಮಾಣವಾಗುವ ಪ್ರತಿಯೊಂದು ಮಸೀದಿಯೂ ಪಾವಿ ತ್ರತೆಯಿಂದ ಕೂಡಿರಬೇಕು, ಮಸೀದಿ ನಿರ್ಮಾಣ ಮಾಡುವಾತನ ಸಂಪತ್ತೂ ಪವಿತ್ರವಾಗಿರಬೇಕು ಎಂದು ಸಮಸ್ತ ಕೇಂದ್ರ ಮುಶಾವರದ ಅಧ್ಯಕ್ಷ ಸಯ್ಯದುಲ್ ಉಲಮಾ ಮುಹಮ್ಮದ್‌ ಜಿಫ್ರಿ ಮುತ್ತುಕೋಯಾ ತಂಙಳ್‌ ಹೇಳಿದರು.

ಸರ್ವೆ ಗ್ರಾಮದ ಕೂಡುರಸ್ತೆಯಲ್ಲಿ ನವೀಕೃತ ಅಲ್ರಿಫಾ ಯಿಯ್ಯ ಜುಮಾ ಮಸೀದಿಯನ್ನು ಉದ್ಘಾಟಿಸಿ ವಕ್ಫ್ ನಿರ್ವಹಣೆ ಮಾಡಿ ಮಾತನಾಡಿದರು.

ಸೌಹಾರ್ದದ ತಾಣ

ಮಸೀದಿಗಳು ಊರಿನ ಸೌಹಾರ್ದದ ತಾಣಗಳಾಗಿವೆ. ಮಸೀದಿ ನಿರ್ಮಾಣವಾಗುವ ವೇಳೆ ಆ ಊರಿನ ಪ್ರತಿಯೊಬ್ಬರಿಗೂ ಸಂತೋಷ ವಾಗುವಂತಾಗಬೇಕು. ಜಾತಿ ಮತ ಧರ್ಮ ಭೇದವಿಲ್ಲದೆ ಎಲ್ಲರೂ ಗ್ರಾಮದಲ್ಲಿ ಸೌಹಾರ್ದದಿಂದ ಬಾಳ್ವೆ ನಡೆಸುವಂತೆ ಮಸೀದಿಗಳು ಪ್ರೇರೇಪಿಸುತ್ತವೆ. ಮಸೀದಿ ನಿರ್ಮಾಣ ಮಾಡುವ ಸಂಪತ್ತಿನ ಮೂಲ ಯಾವುದು ಎಂದು ತಿಳಿದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಮಸೀದಿ ನಿರ್ಮಾಣ ಮಾಡಿದರೆ ಸಾಲದು. ಅದರಲ್ಲಿ ಪ್ರಾರ್ಥನೆ ಹಾಗೂ ಸತ್ಕಾರ್ಯಗಳನ್ನು ಮಾಡುವ ಮೂಲಕ ಗ್ರಾಮದ ಜನತೆಯ ಆಶಾ ಕೇಂದ್ರವಾಗಿ ರೂಪುಗೊಳ್ಳಬೇಕು ಎಂದು ಹೇಳಿದರು. ಕೂಡುರಸ್ತೆ ಮಸೀದಿ ನಿರ್ಮಾಣ ಮಾಡಿದ ಉದ್ಯಮಿಗೆ ತಂಙಳ್‌ ಅವರು ಪ್ರಾರ್ಥನೆ ನಡೆಸಿದರು.

ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್‌ ಸಯ್ಯದ್‌ ಅಹ್ಮದ್‌ ಪೂಕೋಯಾ ತಂಙಳ್‌ ಮಾತನಾಡಿ, ಮಸೀದಿಯ ಘನತೆ ಹಾಗೂ ಗೌರವವನ್ನು ಕಾಪಾಡಿಕೊಂಡು ಬರಬೇಕಾದ್ದು ಜಮಾತಿನವರ ಕರ್ತವ್ಯ. ಮಸೀದಿಯನ್ನು ಪ್ರಾರ್ಥನೆ ನಡೆಸುವ ಮೂಲಕ ಅಂದಗೊಳಿಸಬೇಕು ಎಂದು ಹೇಳಿದರು.

ಪಣೆಮಜಲು ಜುಮಾ ಮಸೀದಿ ಅಧ್ಯಕ್ಷ ಮೂಸಾ, ಮಸೀದಿ ನಿರ್ಮಾಣ ಮಾಡಿರುವ ಉದ್ಯಮಿ ಯೂಸುಫ್‌ ಶಾರ್ಜಾ, ಮಾಡನ್ನೂರು ನೂರುಲ್ಹುದಾ ಪ್ರಿನ್ಸಿಪಾಲ್ ಅಡ್ವೊಕೇಟ್ ಹನೀಫ್‌ ಹುದವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಕ್ವೆ ಖತೀಬ್‌ ಸಯ್ಯದ್‌ ಅಬೂಬುರ್ರಹ್ಮಾನ್‌ ಅಲ್ಬುಖಾರಿ ಫೈಝಿ, ಇರ್ಷಾದ್‌ ದಾರಿಮಿ ಮಿತ್ತಬೈಲು, ಮಹ್‌ಮೂದುಲ್ ಫೈಝಿ ಓಲೆಮುಂಡೋವು, ಮಸೀದಿ ಗೌರವಾಧ್ಯಕ್ಷ ಮಾಹಿನ್‌ ಬಾಳಾಯ, ಎಂಜಿನಿಯರ್‌ ಜಲೀಲ್, ಕರ್ನಾಟಕ ಮುಸ್ಲಿಂ ಜಮಾಅತ್‌ ಜಿಲ್ಲಾ ಉಪಾಧ್ಯಕ್ಷ ಪಿ.ಎಂ. ಅಬ್ದುಲ್ ರಹಿಮಾನ್‌ ಅರಿಯಡ್ಕ, ಅಬ್ಟಾಸ್‌ ಮದನಿ ಪಣೆಜಮಲು, ಕೆ.ಆರ್‌. ಹುಸೈನ್‌ ದಾರಿಮಿ ರೆಂಜಲಾಡಿ, ಅನೀಸ್‌ ಕೌಸರಿ ಕೆಐಸಿ, ಕೂಡುರಸ್ತೆ ಜುಮಾ ಮಸೀದಿ ಅಧ್ಯಕ್ಷ ಪಿ.ಕೆ. ಮಹಮ್ಮದ್‌, ಮಾಜಿ ಅಧ್ಯಕ್ಷ ಅಬ್ದುಲ್ ಹಮೀದ್‌ ಕೂಡುರಸ್ತೆ ಉಪಸ್ಥಿತರಿದ್ದರು.

ರಿಫಾಯಿಯ್ಯ ಯೂತ್‌ಫೆಡರೇಶನ್‌ ಮತ್ತು ಹಳೆ ವಿದ್ಯಾರ್ಥಿ ಸಂಘದ ಕಾರ್ಯಕರ್ತರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕೂಡುರಸ್ತೆ ಖತೀಬ್‌ ಯಾಕೂಬ್‌ ದಾರಿಮಿ ಕೂಡುರಸ್ತೆ ಸ್ವಾಗತಿಸಿ ವಂದಿಸಿದರು.

ಟಾಪ್ ನ್ಯೂಸ್

1-horoscope

Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ

ಲಾಂಛನ ದುರ್ಬಳಕೆಗೆ 5 ಲಕ್ಷ ದಂಡ, ಜೈಲು? ಕಾನೂನು ತಿದ್ದುಪಡಿಗೆ ಕೇಂದ್ರ ಸರ್ಕಾರ ಚಿಂತನೆ

ಲಾಂಛನ ದುರ್ಬಳಕೆಗೆ 5 ಲಕ್ಷ ದಂಡ, ಜೈಲು? ಕಾನೂನು ತಿದ್ದುಪಡಿಗೆ ಕೇಂದ್ರ ಸರ್ಕಾರ ಚಿಂತನೆ

BYV

Poster Dispute: ಭಾರತ ಭೂಶಿರ ವಿರೂಪ: ಬಿಜೆಪಿಯ ಇಂದಿನ ಪ್ರತಿಭಟನೆ ರದ್ದು

RRN-Muni

Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು

Dr.-Singh’s-family

Former Prime Minister: ಮನಮೋಹನ್‌ ಸಿಂಗ್‌ ಕುಟುಂಬದ ಪರಿಚಯ; ನಡೆದು ಬಂದ ಹಾದಿ….

BGV-Congress

Congress: ಪಕ್ಷದೊಳಗೆ ಹೊಸ ನಾಯಕತ್ವಕ್ಕೆ ಅವಕಾಶ ಸಿಗಬೇಕು: ಮಲ್ಲಿಕಾರ್ಜುನ ಖರ್ಗೆ

ಉಳ್ಳಾಲದ ಸಿಂಧೂರ ಈಗ ವಿಜ್ಞಾನ ಸಿಂಧೂರ !

ಉಳ್ಳಾಲದ ಸಿಂಧೂರ ಈಗ ವಿಜ್ಞಾನ ಸಿಂಧೂರ !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!

Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!

B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು

B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು

6

Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು

courts-s

Belthangady: ಬೈಕ್‌ ಸವಾರ ಸಾವು ಪ್ರಕರಣ; ಸರಕಾರಿ ಬಸ್‌ ಚಾಲಕನಿಗೆ ಶಿಕ್ಷೆ;ದಂಡ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-horoscope

Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ

ಲಾಂಛನ ದುರ್ಬಳಕೆಗೆ 5 ಲಕ್ಷ ದಂಡ, ಜೈಲು? ಕಾನೂನು ತಿದ್ದುಪಡಿಗೆ ಕೇಂದ್ರ ಸರ್ಕಾರ ಚಿಂತನೆ

ಲಾಂಛನ ದುರ್ಬಳಕೆಗೆ 5 ಲಕ್ಷ ದಂಡ, ಜೈಲು? ಕಾನೂನು ತಿದ್ದುಪಡಿಗೆ ಕೇಂದ್ರ ಸರ್ಕಾರ ಚಿಂತನೆ

BYV

Poster Dispute: ಭಾರತ ಭೂಶಿರ ವಿರೂಪ: ಬಿಜೆಪಿಯ ಇಂದಿನ ಪ್ರತಿಭಟನೆ ರದ್ದು

RRN-Muni

Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು

Dr.-Singh’s-family

Former Prime Minister: ಮನಮೋಹನ್‌ ಸಿಂಗ್‌ ಕುಟುಂಬದ ಪರಿಚಯ; ನಡೆದು ಬಂದ ಹಾದಿ….

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.