ಏರ್ಯರ ಸಮಗ್ರ ಸಾಹಿತ್ಯ ಸಂಪುಟ ಹೊರತರುವ ಕಾರ್ಯ ಅಗತ್ಯ: ಡಾ| ವಿವೇಕ ರೈ
Team Udayavani, Apr 3, 2023, 6:10 AM IST
ಬಂಟ್ವಾಳ: ಜನಪದ, ಸಾಹಿತ್ಯ, ಸಂಘಟನೆ ಹೀಗೆ ಸರ್ವ ಕ್ಷೇತ್ರದಲ್ಲೂ ತೊಡಗಿಕೊಂಡ ಸಾಹಿತಿ ಏರ್ಯ ಅವರು ಮಾನವತವಾದದ ಇಡೀ ರೂಪವಾಗಿದ್ದು, ಸಾಹಿತ್ಯ ಕೃಷಿಯನ್ನು ತನ್ನ ಬದುಕಿನ ಜೀವಧಾತುವಾಗಿ ಬಳಸಿಕೊಂಡಿದ್ದರು. ಮುಂದಿನ ಮೂರು ವರ್ಷಗಳಲ್ಲಿ ಅವರ ಜನ್ಮ ಶತಮಾನೋತ್ಸವ ಆಚರಿಸುವ ಸುಸಂ ದರ್ಭವಿದ್ದು, ಆ ವೇಳೆ ಏರ್ಯರ ಸಮಗ್ರ ಸಾಹಿತ್ಯ ಸಂಪುಟವನ್ನು ಹೊರತರುವ ಕೆಲಸವಾಗಬೇಕು ಎಂದು ಹಂಪಿ ಕನ್ನಡ ವಿವಿಯ ನಿವೃತ್ತ ಕುಲಪತಿ ಡಾ| ಬಿ.ಎ.ವಿವೇಕ ರೈ ಹೇಳಿದರು.
ಅವರ ರವಿವಾರ ಬಿ.ಸಿ.ರೋಡು ಬಳಿಯ ಏರ್ಯ ಬೀಡಿನಲ್ಲಿ ಏರ್ಯ ಆಳ್ವ ಫೌಂಡೇಶನ್ ಆಶ್ರಯದಲ್ಲಿ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ಕೃತಿಗಳಲ್ಲಿ ಮುಖ್ಯವಾದವುಗಳನ್ನು ಮಥಿಸುವ ಮತ್ತು ಏರ್ಯರ ಕವನಗಳನ್ನು ಹಾಡುವ ಏರ್ಯ ಸಾಹಿತ್ಯ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಏರ್ಯರ ಪತ್ನಿ ಆನಂದಿ ಆಳ್ವ ಅವರು ಡಾ| ವಿವೇಕ ರೈ ಅವರನ್ನು ಗೌರವಿಸಿದರು. ಬಳಿಕ ಹಿರಿಯ ಸಾಹಿತಿಗಳಾದ ಡಾ| ತಾಳ್ತಜೆ ವಸಂತಕುಮಾರ್, ಡಾ| ನಾ.ದಾಮೋದರ ಶೆಟ್ಟಿ, ಪ್ರೊ| ಪಿ.ಕೃಷ್ಣಮೂರ್ತಿ, ಡಾ| ಯು. ಮಹೇಶ್ವರಿ, ಡಾ| ತುಕಾರಾಮ್ ಪೂಜಾರಿ, ಡಾ| ಸತ್ಯನಾರಾ ಯಣ ಮಲ್ಲಿಪಟ್ಟಣ, ಡಾ| ಆರ್.ನರಸಿಂಹ ಮೂರ್ತಿ, ಡಾ| ಅರುಣಕುಮಾರ್ ಎಸ್.ಆರ್. ಅವರು ಕೃತಿ ವಿಶ್ಲೇಷಣೆ ಹಾಗೂ ಕಿಶೋರ್ ಪೆರ್ಲ ಅವರು ಗಾಯನ ನಡೆಸಿಕೊಟ್ಟರು.
ಏರ್ಯರ ಪುತ್ರಿ ಸುಖಧಾ ಬಾಲಕೃಷ್ಣ ಹೆಗ್ಡೆ, ಮೊಮ್ಮಗಳು ಭಕ್ತಿ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಅಳಿಯ ಬಾಲಕೃಷ್ಣ ಹೆಗ್ಡೆ ಸ್ವಾಗತಿಸಿದರು. ನಿವೃತ್ತ ಪ್ರಾಧ್ಯಾಪಕ ಮಹಾಬಲೇಶ್ವರ ಹೆಬ್ಟಾರ್ ಹಾಗೂ ಕೇಶವ ಎಚ್. ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.