ಜಲಜೀವನ್ ಮಿಷನ್ ಯೋಜನೆ: 18,537 ಮನೆಗಳಿಗೆ ನಳ್ಳಿ ಸಂಪರ್ಕದ ಗುರಿ
Team Udayavani, Feb 19, 2022, 5:44 PM IST
ಬಂಟ್ವಾಳ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಲಜೀವನ್ ಮಿಷನ್(ಜೆಜೆಎಂ)ಯೋಜನೆ ಮೂಲಕ ಮನೆ ಮನೆಗೆ ಶುದ್ಧ ಕುಡಿಯುವ ನೀರಿನ ನಳ್ಳಿ ಸಂಪರ್ಕ ಒದಗಿ ಸುತ್ತಿದ್ದು, ಬಂಟ್ವಾಳ ತಾಲೂಕಿನ 30 ಗ್ರಾ.ಪಂ. ಗಳಲ್ಲಿ ಈ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುತ್ತಿದೆ. ಒಟ್ಟು 33.74 ಕೋ.ರೂ.ಗಳಲ್ಲಿ 18,537 ನಳ್ಳಿ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ.
ಜೆಜೆಎಂ ಮೂಲಕ ಪ್ರತಿ ಮನೆಗಳಿಗೆ ಕಾರ್ಯಾತ್ಮಕ ನಳ್ಳಿ ನೀರು ಸಂಪರ್ಕ(ಎಫ್‌ಎಚ್‌ಟಿಸಿ)ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಎಲ್ಲಡೆ ಕಾಮಗಾರಿಗಳು ಆರಂಭಗೊಂಡಿದ್ದು, ಬಂಟ್ವಾಳದ 30 ಗ್ರಾ.ಪಂ.ಗಳ ಪೈಕಿ 46 ಗ್ರಾಮಗಳಲ್ಲಿ ಯಾವ ಯಾವ ಮನೆಗಳಿಗೆ ನಳ್ಳಿ ಸಂಪರ್ಕ ಬೇಕಾಗುತ್ತದೆ ಎಂದು ಗುರುತಿಸುವ ಕಾರ್ಯ ಪೂರ್ಣಗೊಂಡಿದೆ. ಅಗತ್ಯ ವಿರುವ ಸ್ಥಳಗಳಲ್ಲಿ ಟ್ಯಾಂಕ್‌ಗಳನ್ನು ನಿರ್ಮಿಸಿ ಆಯಾಯ ಜನವಸತಿ ಪ್ರದೇಶಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ.
ಬಂಟ್ವಾಳ ತಾಲೂಕಿನಲ್ಲಿ ಅನುಷ್ಠಾನ ಗೊಂಡಿರುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ (ಎಂವಿಎಸ್) ವ್ಯಾಪ್ತಿಯ ಗ್ರಾಮಗಳನ್ನೇ ಆಯ್ಕೆ ಮಾಡಿಕೊಳ್ಳಲಾಗಿದ್ದು, ಸಂಗಬೆಟ್ಟು, ಕರೋಪಾಡಿ, ಸರಪಾಡಿ, ಮಾಣಿ ಹಾಗೂ ನರಿಕೊಂಬು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವ್ಯಾಪ್ತಿಯಲ್ಲಿ ಈ 30 ಗ್ರಾಮಗಳು ಬರುತ್ತವೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಈಗಾಗಲೇ ಅನುಷ್ಠಾನ ಗೊಂಡಿರುವ ಪರಿಣಾಮ ಮೊದಲ ಹಂತದ ಜೆಜೆಎಂ ಸುಲಭವಾಗಿ ಅನುಷ್ಠಾನಗೊಳ್ಳಲಿದೆ. ಶುದ್ಧ ಕುಡಿಯುವ ನೀರು ಎಂವಿಎಸ್ ಮೂಲಕ ಲಭ್ಯವಿರುವುದರಿಂದ ನಳ್ಳಿ ಸಂಪರ್ಕದ ಕುರಿತು ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಆದರೆ ಇತರ ತಾಲೂಕುಗಳಲ್ಲಿ ನೀರಿನ ಮೂಲ, ಶುದ್ಧೀಕರಣ ವ್ಯವಸ್ಥೆ, ಟ್ಯಾಂಕ್ ನಿರ್ಮಾಣ ಮೊದಲಾದ ವ್ಯವಸ್ಥೆಗಳನ್ನು ಅನುಷ್ಠಾನಗೊಳಿಸಬೇಕಿದೆ.
ಗ್ರಾಮಗಳಲ್ಲಿ ಎಷ್ಟೆಷ್ಟು ನಳ್ಳಿಗಳು?
ಪ್ರತೀ ಗ್ರಾಮದ ಜನವಸತಿ ಪ್ರದೇಶಗಳನ್ನು ಗುರುತಿಸಿ ಸರ್ವೇಯ ಮೂಲಕ ಎಷ್ಟು ಮನೆಗಳಿಗೆ ನಳ್ಳಿ ಸಂಪರ್ಕ ಒದಗಿಸಲಾಗುತ್ತದೆ ಎಂಬುದರ ಕುರಿತು ಯೋಜನೆ ರೂಪಿಸಲಾಗಿದೆ. ಕನ್ಯಾನ ಗ್ರಾಮದ 1,074 ಮನೆಗಳಿಗೆ ನಳ್ಳಿ, ಕರೋ ಪಾಡಿಯಲ್ಲಿ 1,350, ಕೊಳ್ನಾಡು 1,220, ಸಾಲೆತ್ತೂರು 466, ವಿಟ್ಲಪಟ್ನೂರು 533,ಅಮ್ಟಾಡಿ 357, ಕೂರಿಯಾಳ 29, ಅರಳ 535, ಅಜ್ಜಿಬೆಟ್ಟು 265, ಚೆನ್ನೈತ್ತೋಡಿ 253, ಕೊಡಂಬೆಟ್ಟು 159, ಪಿಲಿಮೊಗರು 245, ಎಲಿಯನಡುಗೋಡು 379, ಕುಕ್ಕಿಪಾಡಿ 317, ಬುಡೋಳಿ 29, ಮೂಡನಡುಗೋಡು 346, ಪಂಜಿಕಲ್ಲು 473, ಕೊಯಿಲ 63, ರಾಯಿ 102, ಸಂಗಬೆಟ್ಟು 414, ಅನಂತಾಡಿ 399, ಬರಿಮಾರು 453, ಕಡೇಶ್ವಾಲ್ಯ 549, ಮಾಣಿ 397, ನೆಟ್ಲಮುಟ್ನೂರು 575, ಪೆರಾಜೆ 428, ನರಿಕೊಂಬು 1417, ಶಂಭೂರು 458, ಬಾಳ್ತಿಲ 399, ಅಮೂrರು 225, ಗೋಳ್ತಮಜಲು 373, ಬಡಗಕಜೆಕಾರು 227, ತೆಂಕಕಜೆಕಾರು 80, ಇರ್ವತ್ತೂರು 227, ಮೂಡಪಡುಕೋಡಿ 253, ಕಾವಳಮೂಡೂರು 554, ಕಾಡಬೆಟ್ಟು 296, ಕಾವಳಪಡೂರು 385, ಮಣಿನಾಲ್ಕೂರು 610, ದೇವಸ್ಯಪಡೂರು 161, ನಾವೂರು 260, ಪಿಲಾತಬೆಟ್ಟು 331, ದೇವಸ್ಯಮೂಡೂರು 133, ಸರಪಾಡಿ 386 ಹಾಗೂ ಉಳಿ ಗ್ರಾಮದಲ್ಲಿ 273 ಮನೆಗಳಿಗೆ ನಳ್ಳಿ ಸಂಪರ್ಕ ಒದಗಿಸಲಾಗುತ್ತದೆ ಎಂದು ಆಧಿಕಾರಿಗಳು ಮಾಹಿತಿ ನೀಡಿದ್ದಾರೆ.
30 ಗ್ರಾ.ಪಂ.ಗಳಲ್ಲಿ ಯೋಜನೆ ಅನುಷ್ಠಾನ
ಜೆಜೆಎಂ ಮೂಲಕ ಪ್ರಾರಂಭದ ಹಂತದಲ್ಲಿ ತಾಲೂಕಿನ 30 ಗ್ರಾ.ಪಂ. ವ್ಯಾಪ್ತಿಯಲ್ಲಿ ಪ್ರತೀ ಮನೆಗಳಿಗೆ ನಳ್ಳಿ ನೀರು ಸಂಪರ್ಕ ಕಲ್ಪಿಸುವ ನಿಟ್ಟಿ ನಲ್ಲಿ ಯೋಜನೆ ರೂಪಿಸಲಾಗಿದೆ. ಹಾಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ವ್ಯಾಪ್ತಿಯ ಗ್ರಾಮ ಗಳನ್ನು ಕೇಂದ್ರೀಕರಿಸಿ ಯೋಜನೆ ರೂಪಿಸಲಾಗಿದೆ. -ಜಿ.ಕೆ.ನಾಯ್ಕ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಬಂಟ್ವಾಳ
– ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.