ಜಾರಿ ಹಂತದಲ್ಲಿ ‘ಜಲಸಿರಿ’ 24×7 ನಗರ ನೀರು ಯೋಜನೆ

ಸರ್ವೇ ಪೂರ್ಣ, ವಿನ್ಯಾಸಕ್ಕೆ ಸಿದ್ಧತೆ, ಮಳೆಗಾಲದ ಬಳಿಕ ಕಾಮಗಾರಿ

Team Udayavani, Jul 28, 2019, 5:00 AM IST

q-15

ಪುತ್ತೂರು: ಬೆಳೆಯುತ್ತಿರುವ ಪುತ್ತೂರು ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಸಮರ್ಪಕಗೊಳಿಸುವ ನಿಟ್ಟಿನಲ್ಲಿ ‘ಜಲಸಿರಿ’ 24×7 ಯೋಜನೆಯು ಅನುಷ್ಠಾನಗೊಳ್ಳುತ್ತಿದ್ದು, ಸರ್ವೇ ಕಾರ್ಯ ನಡೆದು ಡಿಸೈನ್‌ ಹಂತದಲ್ಲಿದೆ. ಮಳೆಗಾಲ ಮುಗಿದ ಕೂಡಲೇ ಕಾಮಗಾರಿ ಆರಂಭವಾಗಲಿದೆ.

ನಗರಸಭೆ ಮತ್ತು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ (ಕೆಯುಐಡಿಎಫ್‌ಸಿ) ಜಂಟಿ ಸಹಯೋಗದಲ್ಲಿ ಎಡಿಬಿ ಎರಡನೇ ಹಂತದ ಹೊಸ ನೀರು ಸರಬರಾಜು ಯೋಜನೆಗೆ 72 ಕೋಟಿ ರೂ. ಪಟ್ಟಿ ತಯಾರಿಸಲಾಗಿದೆ. ಶೇ. 50ರಷ್ಟು ಎಡಿಬಿ ಸಾಲ, ಶೇ. 40 ರಾಜ್ಯ ಸರಕಾರದ ಅನುದಾನ ಹಾಗೂ ಶೇ. 10 ಅನುದಾನವನ್ನು ಸ್ಥಳೀಯಾಡಳಿತ ಭರಿಸಲಿದೆ.

ಸಾರ್ವಜನಿಕ ಮಾಹಿತಿ

ಉಪ್ಪಿನಂಗಡಿಯ ನೆಕ್ಕಿಲಾಡಿಯಲ್ಲಿ ಕುಮಾರಧಾರಾ ನದಿಗೆ ಒಡ್ಡು ನಿರ್ಮಿಸಿ ಅದರಲ್ಲಿ ಸಂಗ್ರಹಗೊಂಡ ನೀರನ್ನು ಪೈಪ್‌ಗ್ಳ ಮೂಲಕ ಪುತ್ತೂರಿಗೆ ಮೂರು ದಶಕಗಳ ಕಾಲ ನೀರು ರವಾನಿಸಲಾಗುತ್ತಿತ್ತು. ಅನಂತರ 10 ವರ್ಷಗಳ ಹಿಂದೆ ಅನುಷ್ಠಾನಗೊಂಡ 38 ಕೋಟಿ ರೂ. ಮೊತ್ತದ ಎಡಿಬಿ ಕುಡಿಯುವ ನೀರು ಯೋಜನೆಯಲ್ಲಿ ಹಳೆಯ ಪೈಪ್‌ಲೈನ್‌ ಜತೆಗೆ ಹೊಸ ಪೈಪ್‌ಲೈನ್‌ ಅಳವಡಿಕೆ, ಹೊಸದಾಗಿ ಓವರ್‌ಹೆಡ್‌ ಟ್ಯಾಂಕ್‌ಗಳು, ರೇಚಕ ಸ್ಥಾವರ ನಿರ್ಮಾಣ ಇತ್ಯಾದಿ ಕಾಮಗಾರಿ ಜಾರಿಗೆ ಬಂದಿತ್ತಾದರೂ, ಹಲವು ಹುಳುಕುಗಳು ಕಂಡುಬಂದ ಜತೆಗೆ ನಗರದ ಶೇ. 60 ಪ್ರದೇಶಕ್ಕೆ ಮಾತ್ರ ನೀರು ಪೂರೈಕೆ ನಡೆದಿತ್ತು. ಈ ಕಾರಣದಿಂದ ಹೊಸ ಯೋಜನೆಯನ್ನು ಅಳವಡಿಸುವ ಸಂದರ್ಭ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಅನುಸರಿಸಲಾಗಿದೆ. ಹಲವು ಸುತ್ತಿನ ಸಭೆಗಳ ಮೂಲಕ ಚರ್ಚಿಸಿ, ಸಾರ್ವಜನಿಕ ಅಭಿಪ್ರಾಯವನ್ನೂ ಪರಿಗಣಿಸಲಾಗಿದೆ.

ಹೆಚ್ಚುವರಿ ಸ್ಥಾವರ
ಹಾಲಿ ನೆಕ್ಕಿಲಾಡಿಯಲ್ಲಿ 6.8 ಎಂಎಲ್ಡಿ (68 ಲಕ್ಷ ಲೀ.) ಸಾಮರ್ಥ್ಯದ ರೇಚಕ ಸ್ಥಾವರವಿದೆ. ಈ ಸಾಮರ್ಥ್ಯ ನಗರಕ್ಕೆ ನೀರು ಸರಬರಾಜಿಗೆ ಸಾಲದ ಹಿನ್ನೆಲೆಯಲ್ಲಿ ಹೆಚ್ಚುವರಿ 8.7 ಎಂಎಲ್ಡಿ (87 ಲಕ್ಷ ಲೀ.) ಸಾಮರ್ಥ್ಯದ ರೇಚಕ ಸ್ಥಾವರವನ್ನು ನಿರ್ಮಿಸಲಾಗುತ್ತದೆ. ಈ ಮೂಲಕ ಯೋಜನೆ ಪೂರ್ಣಗೊಂಡ ಬಳಿಕ ನೆಕ್ಕಿಲಾಡಿಯಲ್ಲಿ 155 ಲಕ್ಷ ಲೀ. ನೀರು ಟ್ರೀಟ್ ಮಾಡಲು ಸಾಧ್ಯವಾಗುತ್ತದೆ.

ಉಪಕರಣಗಳ ಬದಲಾವಣೆ
ಹಾಲಿ ನೆಕ್ಕಿಲಾಡಿಯಲ್ಲಿ ಇರುವ ಜಾಕ್‌ವೆಲ್ ಮತ್ತು ನೀರು ಶುದ್ಧೀಕರಣ ಘಟಕದಲ್ಲಿ ಅಗತ್ಯವಿರುವ ಮೆಕ್ಯಾನಿಕಲ್ ಹಾಗೂ ವಿದ್ಯುತ್‌ ಉಪಕರಣಗಳ ಪೂರ್ಣ ಬದಲಾವಣೆ ಮಾಡಲಾಗುತ್ತದೆ. ಪ್ರತಿ ಮನೆಯ ಮೀಟರ್‌ಗಳನ್ನು ಬದಲಾವಣೆ ಮಾಡಲಾಗುತ್ತದೆ. ನೀರು ಸರಬರಾಜಿಗೆ ಸಂಬಂಧಪಟ್ಟ ವ್ಯತ್ಯಯಗಳು ಉಂಟಾದಲ್ಲಿ ಕಂಪ್ಯೂಟರೈಸ್ಡ್ ವ್ಯವಸ್ಥೆಯ ಮೂಲಕ ಗಮನಿಸಿ ಸಮಸ್ಯೆ ಬಗೆಹರಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು 33 ತಿಂಗಳಲ್ಲಿ ಪೂರ್ಣ

ಕಾಮಗಾರಿ 33 ತಿಂಗಳಲ್ಲಿ ಪೂರ್ಣ ಗೊಳ್ಳಲಿದೆ. 3 ತಿಂಗಳು ಪ್ರಾಯೋಗಿಕ ಸರಬರಾಜು ನಡೆಯಲಿದೆ. ಅನಂತರ 8 ವರ್ಷಗಳ ಕಾಲ ಸಂಸ್ಥೆಯೇ ನಿರ್ವಹಣೆ ಜವಾಬ್ದಾರಿ ನಿರ್ವಹಿಸಲಿದೆ. ಮುಂದಿನ 3 ವರ್ಷಗಳಲ್ಲಿ ನಿರಂತರ ನೀರು ಸರಬರಾಜಿನ ಉನ್ನತೀಕರಿಸಿದ ವ್ಯವಸ್ಥೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೂ ಮಾಹಿತಿ ನೀಡಲಾಗುತ್ತಿದ್ದು, ಉತ್ತಮ ಹಾಗೂ ಗುಣಮಟ್ಟದ ವ್ಯವಸ್ಥೆ ಜಾರಿಗೊಳ್ಳಲಿದೆ.
– ಅಶೋಕ್‌ ಎಂ.ಬಿ., ಎಕ್ಸಿಕ್ಯೂಟಿವ್‌ ಎಂಜಿನಿಯರ್‌, ಕೆ.ಯು.ಐ.ಡಿ.ಎಫ್‌.ಸಿ.

ನಗರಸಭೆ ಮೇಲುಸ್ತುವಾರಿ

ಜಲಸಿರಿ ಯೋಜನೆಯ ಮೂಲಕ ಪುತ್ತೂರಿನಲ್ಲಿ ಉತ್ತಮ ನೀರು ಸರಬರಾಜು ಯೋಜನೆ ಜಾರಿಯಾಗುತ್ತಿದೆ. ಆ ಮೂಲಕ ಹಲವು ಬೇಡಿಕೆಗಳು ಈಡೇರಲಿವೆ. ನಗರಸಭೆಯೇ ಇದರ ಮೇಲುಸ್ತುವಾರಿ ವಹಿಸಲಿದೆ.
– ರೂಪಾ ಟಿ. ಶೆಟ್ಟಿ,ಪೌರಾಯುಕ್ತರುಪುತ್ತೂರು ನಗರಸಭೆ

ಪ್ರಸ್ತಾವಿತ ಘಟಕಗಳು

• ಮುರ (ಪಟ್ನೂರು) -ಮೇಲ್ಮಟ್ಟದ ಜಲಸಂಗ್ರಹಗಾರ (3 ಲಕ್ಷ ಲೀ. ಸಾಮರ್ಥ್ಯ)

• ಮೈಕ್ರೋವೇವ್‌ ಸ್ಟೇಷನ್‌ – ಮೇಲ್ಮಟ್ಟದ ಜಲಸಂಗ್ರಹಗಾರ (1 ಲಕ್ಷ ಲೀ. ಸಾಮರ್ಥ್ಯ)

• ಸಿಟಿಗುಡ್ಡೆ – ನೆಲಮಟ್ಟದ ಜಲಸಂಗ್ರಹಗಾರ (10 ಲಕ್ಷ ಲೀ. )

• ಸಿಟಿಒ, ದರ್ಬೆ – ಮೇಲ್ಮಟ್ಟದ ಜಲಸಂಗ್ರಹಗಾರ (6 ಲಕ್ಷ ಲೀ. ಸಾಮರ್ಥ್ಯ)

• ಲಿಂಗದಗುಡ್ಡ – ಮೇಲ್ಮಟ್ಟದ ಜಲಸಂಗ್ರಹಗಾರ(2.5 ಲಕ್ಷ ಲೀ. ಸಾಮರ್ಥ್ಯ)

• ಬಲ್ನಾಡ್‌ ಹೆಲಿಪ್ಯಾಡ್‌ – ಮೇಲ್ಮಟ್ಟದ ಜಲಸಂಗ್ರಹಗಾರ (2 ಲಕ್ಷ ಲೀ. ಸಾಮರ್ಥ್ಯ)

• ಬಲ್ನಾಡ್‌ ಕೆಲ್ಯಾಡಿ – ಮೇಲ್ಮಟ್ಟದ ಜಲಸಂಗ್ರಹಗಾರ(1 ಲಕ್ಷ ಲೀ. ಸಾಮರ್ಥ್ಯ)

• ಕೆಎಚ್ಬಿ ಸೈಟ್, ತೆಂಕಿಲ – ಮೇಲ್ಮಟ್ಟದ ಜಲಸಂಗ್ರಹಗಾರ(20 ಲಕ್ಷ ಲೀ. ಸಾಮರ್ಥ್ಯ)

• ನೆಕ್ಕಿಲಾಡಿ – ನೀರು ಶುದ್ಧೀಕರಣ ಘಟಕ (8.7 ಎಂಎಲ್ಡಿ)

• ನೆಕ್ಕಿಲಾಡಿ – ಮರು ನೀರು ಶುದ್ಧೀಕರಣ ಘಟಕ (15 ಎಂಎಲ್ಡಿ)

ಕಾಮಗಾರಿಗಳು ಹೀಗಿವೆ
• 1.68 ಕಿ.ಮೀ. ಉದ್ದದ 400 ಮಿ.ಮೀ. ವ್ಯಾಸದ ಕಚ್ಚಾ ನೀರು ಏರು ಕೊಳವೆಯು ಜಾಕ್‌ವೆಲ್ ನಿಂದ ನೀರು ಶುದ್ಧೀಕರಣ ಘಟಕದವರೆಗೆ ವಿಸ್ತರಣೆಗೊಳ್ಳಲಿದೆ.
• ನೆಕ್ಕಿಲಾಡಿಯಲ್ಲಿ 8.7 ಎಂ.ಎಲ್.ಡಿ. ನೀರು ಶುದ್ಧೀಕರಣ ಘಟಕ ನಿರ್ಮಾಣಗೊಳ್ಳಲಿದೆ.
• 12.42 ಕಿ.ಮೀ. ಉದ್ದ 400 ಮಿ.ಮೀ. ವ್ಯಾಸದ ಶುದ್ಧ ನೀರು ಏರು ಕೊಳವೆ ಮಾರ್ಗ- ನೀರು ಶುದ್ಧೀಕರಣ ಘಟಕದಿಂದ ತೆಂಕಿಲದ 20 ಲಕ್ಷ ಲೀ. ನೆಲಮಟ್ಟದ ಸಂಗ್ರಾಹದವರೆಗೆ.
• 6 ಮೇಲ್ಮಟ್ಟದ ಜಲಸಂಗ್ರಹಗಾರ ಮತ್ತು 2 ನೆಲಮಟ್ಟದ ಜಲಸಂಗ್ರಹಗಾರ ನಿರ್ಮಾಣಗೊಳ್ಳಲಿದೆ.
• 142. 66 ಕಿ.ಮೀ ಉದ್ದದ ವಿತರಣಾ ಕೊಳವೆ ಜಾಲ ನಿರ್ಮಾಣ. •29 ಬಲ್ಕ್ ವಾಟರ್‌ ಮೀಟರ್‌.
• 4,500 ಹೊಸ ಮನೆ ಸಂಪರ್ಕಗಳು ಮತ್ತು ಹಾಲಿ ಇರುವ 9226 ಹಳೆಯ ಮಾಪಕಗಳ ಬದಲಾವಣೆ. • ಹಾಲಿ ಇರುವ ಜಾಕ್‌ವೆಲ್ ಮತ್ತು ನೀರು ಶುದ್ಧೀಕರಣ ಘಟಕದಲ್ಲಿ ಅಗತ್ಯವಿರುವ ಮೆಕ್ಯಾನಿಕಲ್ ಹಾಗೂ ವಿದ್ಯುತ್‌ ಉಪಕರಣಗಳ ಬದಲಾವಣೆ.

ಟಾಪ್ ನ್ಯೂಸ್

shindhe

Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು

Champions Trophy: If Modi’s visit to Pakistan was right, then Team India should also go: Tejaswi Yadav

Champions Trophy: ಮೋದಿ ಪಾಕ್‌ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ

IPL 2024: Pant has the ambition to become India’s cricket captain: Parth Jindal

IPL 2025: ಭಾರತ ಕ್ರಿಕೆಟ್‌ ನಾಯಕನಾಗುವ ಉದ್ದೇಶ ಪಂತ್‌ ಗಿದೆ: ಜಿಂದಾಲ್‌

Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

8-I-phone

Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Jammu Kashmir: Big plan fails; Army destroys terrorist hideout

Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Court-1

Puttur: ಮಹಿಳೆಗೆ ಬೈಕ್‌ ಢಿಕ್ಕಿ; ಸವಾರನಿಗೆ ಶಿಕ್ಷೆ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Belthangady: ಗೋ ಅಕ್ರಮ ಸಾಗಾಟ ತಡೆದ ಬಜರಂಗ ದಳ ಕಾರ್ಯಕರ್ತರು

Belthangady: ಗೋ ಅಕ್ರಮ ಸಾಗಾಟ ತಡೆದ ಬಜರಂಗ ದಳ ಕಾರ್ಯಕರ್ತರು

Sullia: ಬೈಕ್‌ ಮೇಲೆ ಜಿಗಿದ ಕಡವೆ; ಸವಾರರಿಗೆ ಗಾಯ

Sullia: ಬೈಕ್‌ ಮೇಲೆ ಜಿಗಿದ ಕಡವೆ; ಸವಾರರಿಗೆ ಗಾಯ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

14-fruad

Bengaluru: ಸಾಲ ಕೊಡಿಸುವುದಾಗಿ 37 ಲಕ್ಷ ವಂಚನೆ

shindhe

Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು

13-

Bengaluru: ಶಾಲೆ ಮುಖ್ಯಸ್ಥನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ

12-bng

Bengaluru: ಬೈಕ್‌ ಡಿಕ್ಕಿ: ರಾತ್ರಿಯಿಡೀ ರಸೇಲಿ ನರಳಿ ವ್ಯಕ್ತಿ ಸಾವು

11-fir

Bengaluru: ಪಾದಚಾರಿ ಮಾರ್ಗದಲ್ಲಿ ಕಾರು ಚಾಲನೆ: ಕೇಸ್‌ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.