ಜಾಲ್ಸೂರಿನಲ್ಲಿ ಕಸ ವಿಲೇವಾರಿ ಪೂರ್ಣ, ತೊಟ್ಟಿ ತೆರವು
Team Udayavani, Sep 5, 2018, 12:28 PM IST
ಜಾಲ್ಸೂರು: ಗ್ರಾಮದ ಪಂಚಾಯತ್ ವ್ಯಾಪ್ತಿಯ ರಸ್ತೆಗಳಲ್ಲಿ ತ್ಯಾಜ್ಯಗಳು ತುಂಬಿದ ತೊಟ್ಟಿಗಳನ್ನು ಕೊನೆಗೂ ತೆರವುಗೊಳಿಸಲಾಗಿದೆ. ಗ್ರಾ.ಪಂ. ವತಿಯಿಂದ ಶುಚಿತ್ವ ಕಾರ್ಯಆರಂಭಿಸಿ, ಕಸವನ್ನು ಬೇರೆ ಕಡೆಗೆ ಸಾಗಿಸಿದ್ದಾರೆ. ಆರು ತಿಂಗಳಿಂದ ತುಂಬಿರುವ ತೊಟ್ಟಿಯನ್ನು ಖಾಲಿ ಮಾಡಿಸಿಲ್ಲವಾದ್ದರಿಂದ ದುರ್ವಾಸನೆ ಬರಲು ಆರಂಭಿಸಿತ್ತು. ಇದರ ಬಗ್ಗೆ ಒಂದು ವಾರದ ಮುಂಚೆ ‘ಉದಯವಾಣಿ’ ಸುದಿನದಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಜಾಲ್ಸೂರು ಗ್ರಾ.ಪಂ. ತ್ಯಾಜ್ಯ ವಿಲೇವಾರಿ ಮಾಡಿದೆ.
ತೊಟ್ಟಿಯ ಸ್ಥಳ ಬದಲಾವಣೆ
ಕಾಸರಗೋಡು ಹೆದ್ದಾರಿಯ ಕಾಳಮನೆಗೆ ಹೋಗುವ ರಸ್ತೆ ಆರಂಭವಾಗುವ ಸ್ಥಳದಲ್ಲಿ ರಸ್ತೆ ಮಧ್ಯದಲ್ಲಿದ್ದ ಕಸದ ತೊಟ್ಟಿಯನ್ನು ಖಾಲಿ ಮಾಡಿಸಿ, ರಸ್ತೆ ಪಕ್ಕದ ಮರದ ಹತ್ತಿರ ಇಡಲಾಗಿದೆ. ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ವಿಶೇಷ ಮುತುವರ್ಜಿ ವಹಿಸಿ, ಕಸ ವಿಲೇವಾರಿಗೆ ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕರೂ ಸರಿಯಾದ ಸಮಯದಲ್ಲಿ, ಸೂಕ್ತವಾಗಿ ಕಸ ವಿಲೇವಾರಿ ಮಾಡಿ ಗ್ರಾಮದ ಸ್ವಚ್ಛತೆಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.