ಜೆಜೆಎಂ ಮೊದಲ ಹಂತ: ಸಿವಿಲ್ ಕಾಮಗಾರಿ ಶೇ. 100 ಪೂರ್ಣ
2ನೇ ಹಂತದ ಕಾಮಗಾರಿ ಪ್ರಗತಿ: 3ನೇ ಹಂತದ ಡಿಪಿಆರ್ ಸಿದ್ಧ
Team Udayavani, May 26, 2022, 9:10 AM IST
ಪುತ್ತೂರು: ಜಲಜೀವನ್ ಮಿಷನ್‌ನಡಿ ಮನೆ-ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ನಳ್ಳಿ ಸಂಪರ್ಕ ಒದಗಿಸುವ ಯೋಜನೆಗೆ ಸಂಬಂಧಿಸಿ ಅವಿಭಜಿತ ಪುತ್ತೂರು ತಾಲೂಕಿನಲ್ಲಿ ಮೊದಲ ಹಂತದಲ್ಲಿ ಸಿವಿಲ್ ಕಾಮಗಾರಿ ಶೇ. 100ರಷ್ಟು ಪೂರ್ಣಗೊಂಡಿದೆ.
ಜೆಜೆಎಂ ಮೂಲಕ ಪ್ರತೀ ಮನೆಗಳಿಗೆ ಕಾರ್ಯಾ ತ್ಮಕ ನಳ್ಳಿ ನೀರು ಸಂಪರ್ಕ(ಎಫ್‌ಎಚ್‌ಟಿಸಿ)ಒದಗಿಸುವ ನಿಟ್ಟಿನಲ್ಲಿ ಯಾವ ಮನೆಗಳಿಗೆ ನಳ್ಳಿ ಸಂಪರ್ಕ ಬೇಕಾಗುತ್ತದೆ ಎನ್ನುವುದನ್ನು ಗ್ರಾ.ಪಂ. ಮೂಲಕ ಗುರುತಿಸಲಾಗಿತ್ತು. ಅನಂತರ ಅಗತ್ಯವಿರುವ ಸ್ಥಳಗಳಲ್ಲಿ ಟ್ಯಾಂಕ್ ನಿರ್ಮಿಸಿ ಆಯಾಯ ಜನವಸತಿ ಪ್ರದೇಶಗಳಿಗೆ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಮೂರು ಹಂತದಲ್ಲಿ ಜೆಜೆಎಂ ಅನುಷ್ಠಾನಕ್ಕೆ ಯೋಜನೆ ರೂಪಿಸಿ ಕಾರ್ಯಗತಗೊಳಿಸಲಾಗಿದೆ.
1,111 ಮನೆಗಳಿಗೆ ಸಂಪರ್ಕ
ಜೆಜೆಎಂ ಮೊದಲ ಹಂತದಲ್ಲಿ ಅವಿಭಜಿತ ಪುತ್ತೂರು ತಾಲೂಕಿನಲ್ಲಿ 547.35 ಲಕ್ಷ ರೂ.ವೆಚ್ಚದಲ್ಲಿ 15 ಗ್ರಾ.ಪಂ.ಗಳ 20 ಗ್ರಾಮಗಳಲ್ಲಿ 1,274 ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ಗುರುತಿಸಲಾಗಿತ್ತು. ಇದರಲ್ಲಿ ನೀರಿನ ಮೂಲ ಹೊಂದಿರುವ ಫಲಾನು ಭವಿಗಳ ಅಪೇಕ್ಷೆಯಂತೆ ಅವ ರನ್ನು ಹೊರತು ಪಡಿಸಿ ಉಳಿದ 1,111 ಮನೆ ಗಳಿಗೆ ನಳ್ಳಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಇದರಲ್ಲಿ 10 ಓವರ್ ಹೆಡ್ ಟ್ಯಾಂಕ್, ಭೂ ಮಟ್ಟದ 33 ಟ್ಯಾಂಕ್, 37 ಕೊಳವೆಬಾವಿ, 43 ಟಿ.ಸಿ. ಅಳವಡಿಸಲಾಗಿದೆ. ಶೇ.100 ರಷ್ಟು ಸಿವಿಲ್ ಕಾಮಗಾರಿ ಮುಕ್ತಾಯಗೊಂಡಿದೆ.
ಎರಡನೇ ಹಂತದಲ್ಲಿ 26 ಗ್ರಾ.ಪಂ. ವ್ಯಾಪ್ತಿಯಲ್ಲಿ 5,258 ಮನೆಗಳಿಗೆ ನಳ್ಳಿ ಸಂಪರ್ಕ ನೀಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ 6,742.5 ಲಕ್ಷ ರೂ. ಅನು ದಾನ ವ್ಯಯಿಸಲಾಗುತ್ತದೆ. 39 ಕಾಮಗಾರಿ ಕೈಗೆ ತ್ತಿಕೊಂಡು 131 ಓವರ್ ಹೆಡ್‌ಟ್ಯಾಂಕ್, 61 ಭೂ ಮಟ್ಟದ ಟ್ಯಾಂಕ್, 227 ಕೊಳವೆ ಬಾವಿ, 172 ಟಿ.ಸಿ. ನಿರ್ಮಿಸಲು ಯೋಜನೆ ರೂಪಿಸಲಾಗಿದೆ. 39 ಕಾಮಗಾರಿಗಳ ಪೈಕಿ 29 ಕಾಮಗಾರಿಗೆ ಟೆಂಡರ್ ಆಗಿದ್ದು, 27 ಕಾಮಗಾರಿ ಪ್ರಾರಂಭಿಸಲಾಗಿದೆ.
3ನೇ ಹಂತಕ್ಕೆ ಡಿಪಿಆರ್
ಮೊದಲ ಎರಡು ಹಂತದ ಕಾಮಗಾರಿ ಪೂರ್ಣಗೊಳಿಸಿ ಮೂರನೇ ಹಂತದ ಕಾಮಗಾರಿಗೆ ಡಿಪಿಆರ್ ತಯಾರಿ ಸಲಾಗಿದೆ. ಮೂರನೇ ಹಂತ ಕೊನೆಯ ಭಾಗವಾಗಿದ್ದು ಇದರಲ್ಲಿ ತಾಲೂಕಿನಲ್ಲಿ ಬಾಕಿ ಇರುವ ನಳ್ಳಿ ಸಂಪರ್ಕ ರಹಿತ ಮನೆ ಗಳನ್ನು ಗುರುತಿಸಿ ಸಂಪರ್ಕ ನೀಡಬೇಕಿದೆ. ಈ ನಿಟ್ಟಿನಲ್ಲಿ ಮನೆ ಮನೆ ಸಮೀಕ್ಷೆ ನಡೆಸಿ ಪಟ್ಟಿ ತಯಾರಿಸಿದ್ದು ಅದರ ಆಧಾರದಲ್ಲಿ ಡಿಪಿಆರ್ ಸಿದ್ಧಗೊಂಡಿದೆ.
ಖರ್ಚು-ವೆಚ್ಚ ಹೇಗೆ?
ಜೆಜೆಎಂ ಯೋಜನೆಯ ಅನುಷ್ಠಾನವು ಕೇಂದ್ರ, ರಾಜ್ಯ ಹಾಗೂ ಫಲಾನುಭವಿಯ ಸಹಭಾಗಿತ್ವದಲ್ಲಿ ಆಗುತ್ತಿದೆ. ಶೇ. 50 ರಷ್ಟು ಕೇಂದ್ರ, ಶೇ. 40ರಷ್ಟು ರಾಜ್ಯ ಸರಕಾರ ಅನುದಾನ ನೀಡುತ್ತಿದೆ. ಉಳಿದ ಶೇ. 10ರಷ್ಟನ್ನು ಫಲಾನುಭವಿಗಳಿಂದ ಪಡೆದು ಸರಕಾರಕ್ಕೆ ಪಾವತಿಸಲಾಗುತ್ತದೆ. ಗ್ರಾ.ಪಂ. ಮೂಲಕ ಫಲಾ ನುಭವಿಗಳಿಂದ ಸಂಗ್ರಹಿಸಲಾದ ಹಣ ದಲ್ಲಿ ವಾಟರ್‌ವೆುನ್, ನಳ್ಳಿ ಸಂಪರ್ಕ ನಿರ್ವಹಣೆ ಇತ್ಯಾದಿ ಕಾರ್ಯ ಗಳಿಗೆ ಬಳಸುವ ಉದ್ದೇಶ ಹೊಂದಲಾಗಿದೆ.
ಸರಕಾರಕ್ಕೆ ಪ್ರಸ್ತಾವ
ತಾಲೂಕಿನ ಪ್ರತೀ ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ ಒದಗಿಸುವ ಮಹತ್ವದ ಯೋಜನೆ ಇದಾಗಿದೆ. ಪೂರಕವಾಗಿ ಬಹು ಗ್ರಾಮ ಕುಡಿಯುವ ನೀರಿನ ಯೋಜ ನೆಯಡಿ ಎಎಂಆರ್ ಡ್ಯಾಂ ನಿಂದ ನೀರು ಸಂಗ್ರಹಿಸಿ ಎಲ್ಲ ಗ್ರಾ.ಪಂ. ಗಳಲ್ಲಿ ಜೆಜೆ ಎಂ ಮೂಲಕ ನಿರ್ಮಿಸಿದ ಟ್ಯಾಂಕ್‌ಗೆ ಪೂರೈಸಿ ಅಲ್ಲಿಂದ ಮನೆ ಮನೆಗೆ ನಳ್ಳಿ ಮೂಲಕ ತಲುಪಿಸುವ ನಿಟ್ಟಿನಲ್ಲಿಯು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. -ಸಂಜೀವ ಮಠಂದೂರು, ಶಾಸಕರು, ಪುತ್ತೂರು
ಪರ್ಯಾಯ ವ್ಯವಸ್ಥೆ
ಮೊದಲ ಹಂತದಲ್ಲಿ 60 ಕಾಮಗಾರಿಗಳ ಸಿವಿಲ್ ಕೆಲಸ ಪೂರ್ಣ ಗೊಂಡಿದೆ. ಎರಡನೆ ಹಂತದಲ್ಲಿ 27 ಕಾಮಗಾರಿ ಪ್ರಗತಿಯಲ್ಲಿದೆ. ಮೂರನೇ ಹಂತದಲ್ಲಿ ಡಿಪಿಆರ್ ಸಿದ್ಧವಾಗಿದೆ. ಪರ್ಯಾಯ ವ್ಯವಸ್ಥೆ ಇದ್ದು, ನಳ್ಳಿ ನೀರಿನ ಸಂಪರ್ಕ ಬೇಡ ಎನ್ನುವವರು ತಿಳಿಸಬೇಕು. ಭವಿಷ್ಯದಲ್ಲಿ ನೀರಿನ ಸಮಸ್ಯೆ ಉಂಟಾದಲ್ಲಿ ಆ ಮನೆ ಯವರು ಗ್ರಾ.ಪಂ. ಅನ್ನು ಸಂಪರ್ಕಿಸಿ ನೀರಿನ ಸಂಪರ್ಕ ಪಡೆದು ಕೊಳ್ಳಬೇಕು. ಅವರಿಗೆ ಜೆಜೆಎಂ ಮೂಲಕ ಅವಕಾಶ ಸಿಗದು. -ರೂಪ್ಲ ನಾಯಕ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಪುತ್ತೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.