ಮಗುವಿನ ಬೆಳವಣಿಗೆಗೆ ಹೆತ್ತವರು ಕೈಜೋಡಿಸಿ
Team Udayavani, Jan 6, 2018, 3:14 PM IST
ಆಲಂಕಾರು: ಬಾಲಮೇಳವು ಮಗುವಿನ ಪ್ರತಿಭೆಗೆ ವೇದಿಕೆ. ಮಗುವಿನ ಉತ್ತಮ ಬೆಳವಣಿಗೆಗೆ ಅಂಗನವಾಡಿ ಕಾರ್ಯಕರ್ತೆಯರ ಜತೆಗೆ ಹೆತ್ತವರು ಕೈ ಜೋಡಿಸಬೇಕು ಎಂದು ಕೊಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬುಡಲೂರು ಹೇಳಿದರು. ಅವರು ಪುತ್ತೂರು ತಾ| ಕೊಯಿಲ ಗ್ರಾಮದ ಏಣಿತಡ್ಕ 1 ಅಂಗನವಾಡಿ ಕೇಂದ್ರದಲ್ಲಿ ನಡೆದ ಬಾಲಮೇಳ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.
ಸಾಮಾಜಿಕ ಕಾರ್ಯಕರ್ತ ಜನಾರ್ದನ ಗೌಡ ಕರಾಯ ಮಾತನಾಡಿ, ಮಗುವಿನ ಉತ್ತಮ ಭವಿಷ್ಯಕ್ಕಾಗಿ ಎಳವೆಯಲ್ಲಿ ಸಂಸ್ಕಾರ ಶಿಕ್ಷಣ ನೀಡಬೇಕು. ಪ್ರಸಕ್ತ ಕಾಲ ಘಟ್ಟದಲ್ಲಿ ನಡೆಯುತ್ತಿರುವ ಸಮಾಜ ಘಾತುಕ ಚಟುವಟಿಕೆಯಲ್ಲಿ ಯುವ ಶಕ್ತಿಗಳು ಭಾಗಿಯಾಗುತ್ತಿರುವುದು ಕಳವಳಕಾರಿ ಅಂಶ. ಯುವ ಮನಸ್ಸುಗಳು ಅನ್ಯಥಾ ಭಾವ ತಳೆಯುವುದಕ್ಕೆ ಸಂಸ್ಕಾರ ಕೊರತೆಯೇ ಕಾರಣವಾಗಿದೆ ಎಂದರು. ಅಂಗನವಾಡಿ ಪುಟಾಣಿ ಚಿರಶ್ರೀ ಪಾಣಿಯಾಲ್ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು. ಕೊಯಿಲ ಗ್ರಾ.ಪಂ. ಉಪಾಧ್ಯಕ್ಷೆ ವಿಜಯ ಅಂಬಾ, ತಾಲೂಕು ಪಂಚಾಯಿತಿ ಸದಸ್ಯೆ ಜಯಂತಿ ಆರ್. ಗೌಡ, ನಿವೃತ್ತ ಶಿಕ್ಷಕಿ ಚಂದ್ರಾವತಿ ಸಂಪ್ಯಾಡಿ ಮಾತನಾಡಿ ಶುಭ ಹಾರೈಸಿದರು.
ಕೊಯಿಲ ಗ್ರಾ.ಪಂ. ಸದಸ್ಯರಾದ ಹರಿಣಿ, ತಿಮ್ಮಪ್ಪ ಗೌಡ ಸಂಕೇಶ, ಸಬಳೂರು ಉನ್ನತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಾರಿಜಾ, ಎಸ್‌ಡಿಎಂಸಿ ಅಧ್ಯಕ್ಷ ಶೇಖರ ಗೌಡ ಪಾಪುದಮಂಡೆ, ನಿವೃತ್ತ ಶಿಕ್ಷಕಿ ಸುಶೀಲಾ ಪಿ.ಯು. ಅಚ್ಚಿಲ, ಸ್ತ್ರೀ ಶಕ್ತಿ ಗೊಂಚಲು ಸಮಿತಿ ಅಧ್ಯಕ್ಷೆ ಮೋಹಿನಿ ಪಾನ್ಯಾಲು, ಹಿರಿಯರಾದ ಭವಾನಿ ಗೌಡ ಸಬಳೂರು, ಬಾಲವಿಕಾಸ ಸಮಿತಿ ಸದಸ್ಯೆ ಮೀನಾಕ್ಷಿ ಬೆಳಿಯಪ್ಪ ಗೌಡ ತಿಮರೆಗುಡ್ಡೆ ಉಪಸ್ಥಿತರಿದ್ದರು.
ಅಂಗನವಾಡಿ ಕೇಂದ್ರಕ್ಕೆ ಜಾರು ಬಂಡಿ ನೀಡಿದ ವೇದಾವತಿ ಭವಾನಿ ಗೌಡ, ಡಿವಿಡಿ ನೀಡಿದ ವಿಜಯಾ ಸೀತಾರಾಮ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು. ರಾಜ್ಯ
ಪ್ರಶಸ್ತಿ ಪುರಸ್ಕೃತೆ ಅಂಗನವಾಡಿ ಕಾರ್ಯಕರ್ತೆ ವೇದಾವತಿ ಅವರನ್ನು ಸ್ತ್ರೀ ಶಕ್ತಿ ಸಂಘದ ವತಿಯಿಂದ ಸಮ್ಮಾನಿಸಲಾಯಿತು. ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ಮತ್ತು
ಅಂಗನವಾಡಿ ಪುಟಾಣಿಗಳಿಗೆ ನಡೆಸಲಾದ ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪುಟಾಣಿಗಳಾದ ಭುವನ್ ಜಿ.ಕೆ., ಯಶ್ವಿತ್ ಕುಮಾರ್ ಎಸ್. ಅವರ ಹುಟ್ಟುಹಬ್ಬ ಆಚರಿಸಲಾಯಿತು. ಸುಶೀಲಾ ಒ.ಕೆ. ಸ್ವಾಗತಿಸಿದರು. ಜಾನಕಿ ವಂದಿಸಿದರು. ವೇದಾವತಿ ನಿರೂಪಿಸಿದರು. ಮೀನಾಕ್ಷಿ ಸಹಕರಿಸಿದರು.
ಸಂಸ್ಕಾರ ಶಿಕ್ಷಣ ದೊರಕಬೇಕು
ನಮ್ಮ ಆಚರಣೆಯಲ್ಲೂ ಪಾಶಿಮಾತ್ಯ ಸಂಸ್ಕೃತಿ ಬೆರೆತು ಆಚರಣೆಯ ನೈಜತೆ ಇಲ್ಲವಾಗಿದೆ. ಮಕ್ಕಳಿಗೆ ತಾಯಂದಿರ ಮುಖಾಂತಾರ ಮನೆಯಲ್ಲಿ ಹಾಗೂ ಶಿಕ್ಷಕರಿಂದ ಶಾಲೆಯಲ್ಲಿ ಸಂಸ್ಕಾರ ಶಿಕ್ಷಣ ದೊರಕಬೇಕು ಎಂದು ಜನಾರ್ದನ ಗೌಡ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Puttur: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು
Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.