Kadaba ಭಾರೀ ಗಾಳಿ-ಮಳೆ: ಬಲ್ಯ ಸರಕಾರಿ ಶಾಲೆಗೆ ಹಾನಿ
Team Udayavani, Jul 15, 2024, 12:55 AM IST
ಕಡಬ: ಕಡಬ ಪರಿಸರದಲ್ಲಿ ರವಿವಾರ ವ್ಯಾಪಕ ಮಳೆಯಾಗಿದ್ದು, ಹಲವೆಡೆ ಗಾಳಿ ಬೀಸಿ ಹಾನಿಯುಂಟು ಮಾಡಿದೆ. ಕಡಬ ತಾಲೂಕಿನ ಬಲ್ಯ ಸರಕಾರಿ ಶಾಲೆಯ ಹಂಚುಗಳು ಗಾಳಿಗೆ ಹಾರಿಹೋಗಿ ಅಪಾರ ಹಾನಿಯಾಗಿದೆ.
ಬೆಳಗ್ಗಿನಿಂದಲೇ ಮಳೆಯಬ್ಬರ ಜೋರಾಗಿದ್ದು, ಮಧ್ಯಾಹ್ನದ ವೇಳೆಗೆ ಒಮ್ಮಿಂದೊಮ್ಮೆಲೆ ಎಲ್ಲ ಕಡೆ ವ್ಯಾಪಕ ಗಾಳಿಯೊಂದಿಗೆ ಮಳೆ ಸುರಿದಿದೆ. ಜೋರಾಗಿ ಬೀಸಿದ ಗಾಳಿಗೆ ಅಲ್ಲಲ್ಲಿ ಅಡಿಕೆ, ರಬ್ಬರ್, ಬಾಳೆ ಗಿಡಗಳು ಧರಾಶಾಯಿಯಾಗಿದೆ. ಬಲ್ಯ ಶಾಲೆಯ ಬಹುತೇಕ ಹಂಚುಗಳು ಕೆಳಗೆ ಬಿದ್ದಿದೆ. ಎಲ್ಲ ಕೊಠಡಿಗಳಲ್ಲೂ ನೀರು ತುಂಬಿ ಹೋಗಿದೆ.
ಗಾಳಿಯ ಆರ್ಭಟ ಕಡಬ ತಾಲೂಕಿನಾದ್ಯಂತ ಕಂಡು ಬಂದಿದ್ದು, ಅಲ್ಲಲ್ಲಿ ಕೃಷಿ ಹಾನಿಯಾಗಿದೆ. ಕೆಲವು ಗ್ರಾಮಗಳಲ್ಲಿ ರಬ್ಬರ್ ಮರಗಳು, ಫಲಭರಿತ ಅಡಿಕೆ ಮರಗಳು ಮುರಿದು ಬಿದ್ದಿವೆ. ಕೆಲವೆಡೆ ಮರಗಳು ರಸ್ತೆಗೆ ಬಿದ್ದು ಸಂಚಾರಕ್ಕೆ ತೊಡಕಾಗಿದೆ. ಕೆಲವು ಕಡೆ ವಿದ್ಯುತ್ ಕಂಬಗಳು ಕೂಡ ಬಿದ್ದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.ಸ್ಥಳಕ್ಕೆ ಶಾಸಕಿ ಭಾಗೀರಥಿ ಮುರುಳ್ಯ, ಪಂಚಾಯತ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.